ಕರ್ನಾಟಕ

karnataka

ETV Bharat / photos

ಕಿಚ್ಚ ಸುದೀಪ್​​ ಗ್ರ್ಯಾಂಡ್​​ ಬರ್ತ್​​​ಡೇ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ? 'ಕಿಚ್ಚೋತ್ಸವ' ಫೋಟೋಗಳಿಲ್ಲಿವೆ ನೋಡಿ​ - Sudeep Birthday Pictures - SUDEEP BIRTHDAY PICTURES

ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್​​ ಅವರಿಂದು 51ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿನ ಜಯನಗರದ ಎಂಇಎಸ್​​ ಗ್ರೌಂಡ್​​ನಲ್ಲಿ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ವೇಳೆ, ಹೆಸರಾಂತ ನಟ ತಮ್ಮ ಅಭಿಮಾನಿಗಳ ಮೇಲೆ ತಾವಿಟ್ಟಿರುವ ಅಪಾರ ಪ್ರೀತಿಯನ್ನೂ ವ್ಯಕ್ತಪಡಿಸಿದ್ದಾರೆ. 'ಕಿಚ್ಚೋತ್ಸವ'ದ ಫೋಟೋಗಳಿಲ್ಲಿವೆ​ ನೋಡಿ. (ETV Bharat)

By ETV Bharat Karnataka Team

Published : Sep 2, 2024, 2:36 PM IST

ಹ್ಯಾಪಿ ಬರ್ತ್​​ಡೇ ಕಿಚ್ಚ ಸುದೀಪ್​​. (ETV Bharat)
51ನೇ ಜನ್ಮದಿನದ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ. (ETV Bharat)
ಸ್ಯಾಂಡಲ್​ವುಡ್​ನ ನಟ ಚಕ್ರವರ್ತಿಗೆ ಶುಭಾಶಯಗಳ ಮಹಾಪೂರ. (ETV Bharat)
ಮಧ್ಯರಾತ್ರಿ ಕುಟುಂಬದೊಂದಿಗೆ ಕೇಕ್​​ ಕತ್ತರಿಸಿದ ತಾರೆ. (ETV Bharat)
ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಖ್ಯಾತ ನಟ. (ETV Bharat)
ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಸುದೀಪ್​, ನಿವಾಸದ ಬಳಿ ಯಾರೂ ಬರಬೇಡಿ. ನಾನೇ ಜಯನಗರದಲ್ಲಿ ನಿಮ್ಮನ್ನು ಸಿಗಲಿದ್ದೇನೆ ಎಂದು ತಿಳಿಸಿದ್ದರು. (ETV Bharat)
ಅದಾಗ್ಯೂ ಕಳೆದ ರಾತ್ರಿ ಜೆ.ಪಿ.ನಗರದ ಪುಟ್ಟೇನಹಳ್ಳಿಯ ಸುದೀಪ್​​ ಮನೆ ಬಳಿ ಅಭಿಮಾನಿಗಳು ಅಪಾರ ಪ್ರಮಾಣದಲ್ಲಿ ಸೇರಿದ್ದರು. (ETV Bharat)
ಅಭಿಮಾನಿಗಳ ಮನ ನೋಯಿಸದ ಕಿಚ್ಚ, ಅವರಿಗೆ ಕೈಮುಗಿದು ಧನ್ಯವಾದಗಳನ್ನು ಅರ್ಪಿಸಿದ್ದರು. (ETV Bharat)
ಕೆಲ ಹೊತ್ತು ಅಭಿಮಾನಿಗಳೊಂದಿಗೆ ಸಮಯ ಕಳೆದರು. (ETV Bharat)
ಇಂದು ಜಯನಗರದ ಎಂಇಎಸ್ ಗ್ರೌಂಡ್​​ನಲ್ಲಿ'ಕಿಚ್ಚೋತ್ಸವ' ಜರುಗಿದೆ. (ETV Bharat)
ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನದವರೆಗೂ ಸುದೀಪ್​​ ತಮ್ಮ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟಿದ್ದಾರೆ. (ETV Bharat)
ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದಿರುವ ನಟ ಸುದೀಪ್​​. (ETV Bharat)
ಅಭಿಮಾನದ ಹೆಸರಿನಲ್ಲಿ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದ ಕಿಚ್ಚ. (ETV Bharat)
ಉಡುಗೊರೆ ಬದಲಾಗಿ ಸಮಾಜಮುಖಿ ಕೆಲಸಕ್ಕೆ ನಟನ ಮನವಿ. (ETV Bharat)
ಅಭಿಮಾನಿಗಳ ಮೇಲಿನ ತಮ್ಮ ಅಪಾರ ಪ್ರೀತಿ ವ್ಯಕ್ತಪಡಿಸಿದ ಜನಪ್ರಿಯ ನಟ. (ETV Bharat)
'ನಿಮ್ಮಷ್ಟೇ ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ಮೇಕಪ್ ಹಾಕೋದೇ ನಿಮಗಾಗಿ. ನಾನು ತಗ್ಗಿ ಬಗ್ಗಿ ನಡೆಯೋ ಹಾಗೇ ನೀವು ಮಾಡಿದ್ದೀರಿ' ಎಂದು ತಿಳಿಸಿದ ನಟ. (ETV Bharat)
ಬರ್ತ್​​ಡೇ ಹಿನ್ನೆಲೆ, ಮ್ಯಾಕ್ಸ್ ಮ್ಯಾಕ್ಸಿಮಂ ಸಾಂಗ್​​ ರಿಲೀಸ್​. 'ಬಿಲ್ಲ ರಂಗ ಭಾಷ' ಬಗ್ಗೆಯೂ ಬಿಗ್ ಅಪ್ಡೇಟ್​ ಕೊಟ್ಟ ನಟ. (ETV Bharat)
ಇನ್ನುಂದೆ ವರ್ಷಕ್ಕೆ 2 ಸಿನಿಮಾ ಮಾಡೋ ಭರವಸೆ ಕೊಟ್ಟ ಅಭಿನಯ ಚಕ್ರವರ್ತಿ. (ETV Bharat)
ಮ್ಯಾಕ್ಸ್​ ಲುಕ್​​​. (ETV Bharat)
ಅಭಿಮಾನಿಗಳೊಂದಿಗೆ ಕಿಚ್ಚ ಸುದೀಪ್​. (ETV Bharat)
ನಟನ ಸಿನಿಮಾಗಳ ಬಗ್ಗೆ ಅಭಿಮಾನಿಗಳ ಕುತೂಹಲ. (ETV Bharat)
ಅಭಿಮಾನಿಗಳೊಂದಿಗೆ ಅಭಿನಯ ಚಕ್ರವರ್ತಿ. (ETV Bharat)
ಕಿಚ್ಚ ಸುದೀಪ್​​. (ETV Bharat)

ABOUT THE AUTHOR

...view details