ಕರ್ನಾಟಕ

karnataka

ಬಾಂಗ್ಲಾದಲ್ಲಿ ಭುಗಿಲೆದ್ದ ಮೀಸಲಾತಿ ದಂಗೆ; ದೇಶಾದ್ಯಂತ ಹಿಂಸಾಚಾರ! ಫೋಟೋಗಳು - Bangladesh Violence Photo

By ETV Bharat Karnataka Team

Published : Jul 19, 2024, 12:57 PM IST

ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿಚಾರವಾಗಿ ಬಾಂಗ್ಲಾದೇಶದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಗುರುವಾರ ಪರಿಸ್ಥಿತಿ ಉಲ್ಭಣಗೊಂಡಿತು. ಹಿಂಸಾಚಾರದಲ್ಲಿ ಸುಮಾರು 2,500ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈವರೆಗೆ ಸಾವಿನ ಸಂಖ್ಯೆ 25ಕ್ಕೇರಿದೆ. ಮಾರುಕಟ್ಟೆಗಳು, ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ. ಆದರೆ, ವಿದ್ಯಾರ್ಥಿ ಸಂಘಟನೆಗಳು ಈ ಆಹ್ವಾನವನ್ನು ತಿರಸ್ಕರಿಸಿವೆ. ಶಾಂತಿ ಕಾಪಾಡಲು ಸೇನೆ ರಸ್ತೆಗಿಳಿದಿದೆ. (Associated Press)
ಬಾಂಗ್ಲಾದೇಶದಲ್ಲಿ 'ಮೀಸಲಾತಿ' ದಂಗೆ (Associated Press)
1971ರಲ್ಲಿ ಪಾಕಿಸ್ತಾನದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಸಂಬಂಧಿಕರ ಮೀಸಲಾತಿ, ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ಸಂಬಂಧ ಹೋರಾಟ (Associated Press)
ಒಂದು ವಾರದಿಂದ ವಿದ್ಯಾರ್ಥಿ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಗುರುವಾರ ವ್ಯಾಪಕ ಹಿಂಸಾಚಾರ (Associated Press)
ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಸುಧಾರಣೆಗೆ ಒತ್ತಾಯಿಸಿ ದೇಶಾದ್ಯಂತ ವಿದ್ಯಾರ್ಥಿಗಳು ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಬಂದ್‌ಗೆ ಕರೆ (Associated Press)
ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿದೆ. ವಿದ್ಯಾರ್ಥಿಗಳು ರಸ್ತೆಗಿಳಿದು ಹೋರಾಟ ನಡೆಸಿದ್ದಾರೆ. ಸಾಕಷ್ಟು ಘರ್ಷಣೆಗಳು ನಡೆದು ಪರಿಸ್ಥಿತಿ ಹದಗೆಟ್ಟಿದೆ. (Associated Press)
ಹೊಡೆದಾಟ, ಮೂಲಭೂತ ಸೌಕರ್ಯಗಳಿಗೆ ಹಾನಿ, ಬೆಂಕಿ ಹಚ್ಚಿರುವಂತಹ ಘಟನೆಗಳು ನಡೆದಿವೆ. (Associated Press)
ಪ್ರತಿಭಟನಾಕಾರರು ಮತ್ತು ಸರ್ಕಾರದ ಪರ ವಿದ್ಯಾರ್ಥಿ ಸಂಘದ ಮುಖಂಡರಿಂದ ಪರಸ್ಪರ ಹಲ್ಲೆ (Associated Press)
ಪೊಲೀಸರು ಪ್ರತಿಭಟನಾಕಾರರ ಮೇಲೆ ರಬ್ಬರ್ ಬುಲೆಟ್‌ಗಳು, ಅಶ್ರುವಾಯು, ಧ್ವನಿ ಗ್ರೆನೇಡ್‌ಗಳನ್ನು ಬಳಸಿದ್ದಾರೆ. (Associated Press)
ಹಲವೆಡೆ ಪ್ರತಿಭಟನಾಕಾರರು-ಪೊಲೀಸರ ನಡುವೆ ಘರ್ಷಣೆ (Associated Press)
ಪ್ರತಿಭಟನಾಕಾರರ ದಾಳಿಯಿಂದ ಪೊಲೀಸರಿಗೆ ಗಾಯ (Associated Press)
ವ್ಯಾಪಕ ಹಿಂಸಾಚಾರ (Associated Press)
ಸಾವಿನ ಸಂಖ್ಯೆ 25ಕ್ಕೆ ಏರಿದೆ. (Associated Press)
ಹಿಂಸಾಚಾರದ ದೃಶ್ಯ (Associated Press)
ಬಾಂಗ್ಲಾದೇಶದಲ್ಲಿ ವ್ಯಾಪಕ ಪ್ರತಿಭಟನೆ (Associated Press)
ಬಾಂಗ್ಲಾದೇಶದಲ್ಲಿ ಮೀಸಲಾತಿ ಪ್ರತಿಭಟನೆ (Associated Press)

ABOUT THE AUTHOR

...view details