ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಸಿನಿಮಾದ ಅಭೂತಪೂರ್ವ ಯಶಸ್ಸು ಸಾಧಿಸುವ ಮೂಲಕ ಸ್ಯಾಂಡಲ್ವುಡ್ನ 2024ನೇ ವರ್ಷ ಶುಭಾರಂಭಗೊಂಡಿತ್ತು. 'ಡೆವಿಲ್' ದರ್ಶನ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ. ದಚ್ಚು ಜನ್ಮದಿನದ ಹಿನ್ನೆಲೆಯಲ್ಲಿ 'ಡೆವಿಲ್' ಗ್ಲಿಂಪ್ಸ್ ಅನಾವರಣಗೊಂಡಿದೆ. ಪ್ರೇಕ್ಷಕರು ನಟನ ಮುಂಬರುವ ಸಿನಿಮಾಗಳ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳ ಜೊತೆ ದರ್ಶನ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದು, ಕೆಲವು ಫೋಟೋಗಳು ಇಲ್ಲಿವೆ, ನೋಡಿ.