ಕರ್ನಾಟಕ

karnataka

ETV Bharat / photos

ಬಾರದ ಲೋಕಕ್ಕೆ ಪಯಣಿಸಿದ ಅಚ್ಚ ಕನ್ನಡದ ನಿರೂಪಕಿ: ಅಪರ್ಣಾ ಬದುಕಿನ ಫೋಟೋಗಳು - Aparna Photos - APARNA PHOTOS

ಚಂದನವನದ ಅತ್ಯಂತ ಜನಪ್ರಿಯ ನಿರೂಪಕಿ ಅಪರ್ಣಾ (57) ಗುರುವಾರ ನಿಧನರಾಗಿದ್ದಾರೆ. ಇವರು ಕ್ಯಾನ್ಸರ್​​ನಿಂದ ಬಳಲುತ್ತಿದ್ದರು. ಅಪರ್ಣಾ ನಿಧನಕ್ಕೆ ಜನಸಾಮಾನ್ಯರಿಂದ ಹಿಡಿದು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಪರ್ಣಾ ಅವರ ಕೆಲವು ಅಪರೂಪದ ಫೋಟೋಗಳಿಲ್ಲಿವೆ ನೋಡಿ. (ETV Bharat)

By ETV Bharat Karnataka Team

Published : Jul 12, 2024, 8:42 AM IST

ಕನ್ನಡದ ಹೆಸರಾಂತ ನಿರೂಪಕಿ, ಕಿರುತೆರೆ ನಟಿ ಅಪರ್ಣಾ ಇನ್ನಿಲ್ಲ. (ETV Bharat)
ಅಪರ್ಣಾ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. (ETV Bharat)
ಅಪರ್ಣಾ ಅಗಲಿಕೆಗೆ ಗಣ್ಯರ ಸಂತಾಪ (ETV Bharat)
ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಣೆ, ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸಿ ಮನೆಮಾತಾಗಿದ್ದರು. (ETV Bharat)
1984ರಲ್ಲಿ ಮೂಡಿಬಂದ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಸಣದ ಹೂವು' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. (ETV Bharat)
ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ಅಪರ್ಣಾ. (ETV Bharat)
90ರ ದಶಕದಲ್ಲಿ ಚಂದನ ವಾಹಿನಿಯ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದ್ದರು. (ETV Bharat)
ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡಿದ್ದರು. (ETV Bharat)
ಕನ್ನಡದ ಬಿಗ್ ಬಾಸ್ ಮೊದಲ ಸೀಸನ್​ನಲ್ಲಿ ಸ್ಪರ್ಧಿಯಾಗಿದ್ದರು. (ETV Bharat)
ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್​ನಲ್ಲಿ ವರಲಕ್ಷ್ಮಿ ಪಾತ್ರ ನಿರ್ವಹಿಸಿದ್ದರು. (ETV Bharat)
ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಘೋಷಣೆಯಾಗುವ ಸೂಚನೆಗಳಿಗೆ ಧ್ವನಿ ನೀಡಿದ್ದರು. (ETV Bharat)
ಆ್ಯಂಕರ್ ಅಪರ್ಣಾ ಇನ್ನು ನೆನಪು ಮಾತ್ರ. (ETV Bharat)
ಅಪರ್ಣಾ ಇನ್ನಿಲ್ಲ. (ETV Bharat)

ABOUT THE AUTHOR

...view details