ನವದೆಹಲಿ:ಟೆಹ್ರಾನ್‌ನಲ್ಲಿ ಹಮಾಸ್ ರಾಜಕೀಯ ನಾಯಕ ಇಸ್ಮಾಯೆಲ್ ಹನಿಯೆಹ್ ಮತ್ತು ಬೈರುತ್‌ನಲ್ಲಿ ಹಿಜ್ಬುಲ್ಲಾ ನಾಯಕ ಫುವಾದ್ ಶುಕ್ರ್ ಹತ್ಯೆಯಿಂದಾಗಿ ಭಾರತವು ಪಶ್ಚಿಮ ಏಷ್ಯಾದಲ್ಲಿ ಪ್ರಯಾಣ ನಿರ್ಬಂಧಗಳನ್ನು ಹೇರಿದೆ. ಮತ್ತು ವಿಮಾನಯಾನ ಸಂಸ್ಥೆಗಳು ಈ ಪ್ರದೇಶಕ್ಕೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದೆ. ಲೆಬನಾನ್‌ನ ಬೈರುತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ಆ ದೇಶಕ್ಕೆ ಪ್ರಯಾಣಿಸದಂತೆ ಮತ್ತು ಅಲ್ಲಿ ವಾಸಿಸುವವರಿಗೆ ತಕ್ಷಣವೇ ತೆರಳುವಂತೆ ಮಹತ್ವದ ಸಲಹೆಗಳನ್ನು ನೀಡಿದೆ.
"ಈ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆ ಮತ್ತು ಸಂಭಾವ್ಯ ಬೆದರಿಕೆಗಳ ದೃಷ್ಟಿಯಿಂದ, ಮುಂದಿನ ಸೂಚನೆ ಬರುವವರೆಗೆ ಲೆಬನಾನ್‌ಗೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಮಹತ್ವದ ಸಲಹೆಗಳನ್ನು ನೀಡಲಾಗಿದೆ" ಎಂದು ರಾಯಭಾರ ಕಚೇರಿಯು ಆಗಸ್ಟ್ 1ರಂದು ತಿಳಿಸಿದೆ. "ಎಲ್ಲಾ ಭಾರತೀಯರು ಲೆಬನಾನ್ ತೊರೆಯುವಂತೆ ಸೂಚಿಸಲಾಗಿದೆ. ಲೆಬನಾನ್‌ನಲ್ಲಿ ಉಳಿದುಕೊಳ್ಳುವ ಭಾರತೀಯರು ತೀವ್ರ ಎಚ್ಚರಿಕೆಯನ್ನು ವಹಿಸಬೇಕು. ಭಾರತದ ರಾಯಭಾರ ಕಚೇರಿಯೊಂದಿಗೆ ಸದಾ ಸಂಪರ್ಕದಲ್ಲಿರಲು ಸಲಹೆ ನೀಡಲಾಗಿದೆ" ಎಂದು ಹೇಳಿದೆ.
ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ಎಚ್ಚರಿಕೆ ವಹಿಸುವಂತೆ ಸಲಹೆ ಕೊಟ್ಟಿದೆ. ಈ ಪ್ರದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ಜಾಗರೂಕರಾಗಿಬೇಕು. ಮತ್ತು ಸ್ಥಳೀಯ ಅಧಿಕಾರಿಗಳು ಸೂಚಿಸಿದಂತೆ ಸುರಕ್ಷತಾ ಪ್ರೋಟೋಕಾಲ್‌ಗೆ ಬದ್ಧವಾಗಿರಲು ಸೂಚಿಸಲಾಗಿದೆ" ಎಂದು ಆಗಸ್ಟ್ 2 ರಂದು ಸಲಹೆ ನೀಡಲಾಗಿದೆ.
ಸಂಚರಿಸುವ ಮುನ್ನ ಯೋಚನೆ ಮಾಡಿ:ದಯವಿಟ್ಟು ಎಚ್ಚರಿಕೆಯಿಂದ ಸಂಚಾರ ಮಾಡಿ, ದೇಶದೊಳಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಿ ಮತ್ತು ಸುರಕ್ಷತಾ ಕ್ರಮವಹಿಸಿ. ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮತ್ತು ನಮ್ಮ ಎಲ್ಲ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೇಲಿ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ. ಈ ಮಧ್ಯೆಯೇ, ಏರ್ ಇಂಡಿಯಾ ಕಳೆದ ವಾರ ಇಸ್ರೇಲ್‌ಗೆ ಎಲ್ಲಾ ವಿಮಾನಗಳನ್ನು "ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು" ಆಗಸ್ಟ್ 8ರವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸುತ್ತಿದೆ ಎಂದು ಹೇಳಿದೆ.
"ನಾವು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಈ ಅವಧಿಯಲ್ಲಿ ಟೆಲ್ ಅವಿವ್‌ಗೆ ಪ್ರಯಾಣಿಸಲು ಮತ್ತು ಪ್ರಯಾಣಕ್ಕಾಗಿ ದೃಢಪಡಿಸಿದ ಬುಕಿಂಗ್‌ಗಳೊಂದಿಗೆ ನಮ್ಮ ಪ್ರಯಾಣಿಕರಿಗೆ ಬೆಂಬಲವನ್ನು ವಿಸ್ತರಿಸುತ್ತಿದ್ದೇವೆ. "ನಮ್ಮ ಅತಿಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಮೊದಲ ಆದ್ಯತೆಯಾಗಿದೆ" ಎಂದು ಏರ್‌ಲೈನ್ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಮುಂದಿನ ಆದೇಶದವರೆಗೂ ಇಸ್ರೇಲ್‌ಗೆ ಹೊರಡುವ ವಿಮಾನಗಳಿಗೆ ನಿರ್ಬಂಧ:ಯುನೈಟೆಡ್ ಏರ್‌ಲೈನ್ಸ್, ಲುಫ್ಥಾನ್ಸ, ಕೆಎಲ್‌ಎಂ, ಡೆಲ್ಟಾ ಮತ್ತು ಸ್ವಿಸ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನಂತಹ ಇತರ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಂದಿನ ಸೂಚನೆ ಬರುವವರೆಗೆ ಇಸ್ರೇಲ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.