ಪಶ್ಚಿಮ ಏಷ್ಯಾ ಬಿಕ್ಕಟ್ಟು ಮುಂದುವರೆದಿದೆ. ಇರಾಕ್ ಮತ್ತು ಸಿರಿಯಾದಾದ್ಯಂತ ಹರಡಿರುವ ಹಮಾಸ್, ಹಿಜ್ಬುಲ್ಲಾ ಮತ್ತು ಹೌತಿ ಉಗ್ರರನ್ನು ಇಸ್ರೇಲ್ ಮಟ್ಟಹಾಕುತ್ತಿದೆ. ಕಳೆದ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸುವ ಮೂಲಕ ಈ ಸಂಘರ್ಷಕ್ಕೆ ನಾದಿ ಹಾಡಿದ್ದರು. ಇದರ ಪರಿಣಾಮ, ಆರಂಭದಲ್ಲಿ ಇಸ್ರೇಲ್ ಗಾಜಾದಲ್ಲಿ ಹಮಾಸ್ ವಿರುದ್ಧ ಹೋರಾಟ ಆರಂಭಿಸಿತ್ತು. ಆದರೆ, ಹಮಾಸ್ಗೆ ಹಿಜ್ಬುಲ್ಲಾ ಬೆಂಬಲ ದೊರೆತ ಬಳಿಕ ಸಂಘರ್ಷ ಲೆಬನಾನ್ವರೆಗೆ ವಿಸ್ತರಿಸಿದೆ. ಇಸ್ರೇಲ್ ತನ್ನ ದಾಳಿಯನ್ನು ಸ್ಥಳೀಯವಾಗಿಸುವ ಗುರಿ ಹೊಂದಿದ್ದರೂ ಈ ಗುಂಪುಗಳಿಗೆ ಇರಾನ್ ನೀಡುತ್ತಿರುವ ಬೆಂಬಲ ಇಸ್ರೇಲ್ ಹೋರಾಟವನ್ನು ತೀವ್ರಗೊಳಿಸುವಂತೆ ಮಾಡಿತು.
ಏಪ್ರಿಲ್ 1ರಂದು ಇಸ್ರೇಲ್ ಡಮಾಸ್ಕಸ್‌ನಲ್ಲಿರುವ ಇರಾನ್‌ನ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ವೇಳೆ ಇರಾನಿನ ಐಆರ್ಜಿಸಿ ಸಿಬ್ಬಂದಿ ಸಾವನ್ನಪ್ಪಿದ್ದರು. ಇದಕ್ಕೆ ಇರಾನ್ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದೆ. ಒಂದು ವೇಳೆ ದಾಳಿಯನ್ನು ನಿರ್ಲಕ್ಷ್ಯ ಮಾಡಿದಲ್ಲಿ ಇರಾನ್ ನಾಯಕತ್ವ ವೈಫಲ್ಯ ಬಹಿರಂಗವಾಗುವುದರ ಜೊತೆಗೆ ಇಸ್ರೇಲ್‌ಗೆ ಮತ್ತಷ್ಟು ಶಕ್ತಿ ತುಂಬುತ್ತದೆ.
ಇದರ ಫಲವಾಗಿ ಎರಡು ದೇಶಗಳ ನಡುವೆ ದಾಳಿ ತೀವ್ರವಾದರೆ ಇದು ಅನೇಕ ಅಪಾಯಗಳಿಗೂ ಕಾರಣವಾಗುತ್ತದೆ. ಇರಾನ್ ಏಪ್ರಿಲ್ 13ರಂದು ಇಸ್ರೇಲ್ ಮೇಲೆ 300 ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹಾರಿಸಿದೆ. ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇದರ ಉದ್ದೇಶ ಸಂಘರ್ಷವನ್ನು ದೊಡ್ಡದಾಗಿಸುವುದಲ್ಲ. ಬದಲಾಗಿ, ಆಂತರಿಕ ಒತ್ತಡ ನಿಗ್ರಹಿಸುವುದಾಗಿತ್ತು. ಇರಾನ್ ಹಾರಿಸಿದ ಬಹುತೇಕ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಇಸ್ರೇಲ್ ತನ್ನ ಬಲಾಢ್ಯ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದುರುಳಿಸಿದೆ. ಇಸ್ರೇಲ್ ಏಪ್ರಿಲ್ 19ರಂದು ನಿಗದಿತ ಪ್ರತಿ ದಾಳಿ ನಡೆಸಿದ್ದು, ಇರಾನಿನ ಎಸ್-300 ಕ್ಷಿಪಣಿ ವ್ಯವಸ್ಥೆಯನ್ನು ನಾಶ ಮಾಡಿದೆ. ಇಸ್ರೇಲ್ನ ಭವಿಷ್ಯದ ಗುರಿ ಇರಾನ್‌ನ ಕಾರ್ಯತಂತ್ರದ ಸ್ಥಾಪನೆಗಳಾಗಿರಬಹುದು ಎಂಬ ಸಂದೇಶವೂ ಟೆಲ್ ಅವಿವ್‌ನಿಂದ ಹೊರಬಿದ್ದಿದೆ.
ಇತ್ತೀಚಿಗೆ ಇಸ್ರೇಲ್ ಸೇನೆ ಹಮಾಸ್ ಮತ್ತು ಹಿಜ್ಭುಲ್ಲಾ ಪ್ರಮುಖ ನಾಯಕರು ಸೇರಿದಂತೆ ಲೆಬನಾನ್ ಮೇಲೆ ದಾಳಿ ನಡೆಸಿತ್ತು. ಟೆಹ್ರಾನ್‌ನಲ್ಲಿ ಹಮಾಸ್‌ನ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯಾದಾಗ ಇರಾನ್ ಪ್ರತಿಕ್ರಿಯಿಸಲಿಲ್ಲ. ಇದು ಟೆಲ್ ಅವಿವ್‌ಗೆ ಮತ್ತಷ್ಟು ಧೈರ್ಯ ತುಂಬಿದೆ. ಇರಾನ್‌ನ ಬ್ರಿಗೇಡಿಯರ್ ಜನರಲ್ ಅಬ್ಬಾಸ್ ನಿಲ್ಫೊರೌಶನ್ ಜೊತೆಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಲಾಯಿತು. ಇದು ಇಸ್ರೇಲ್ ಮೇಲಿನ ಆಕ್ರಮಣಕ್ಕೆ ಲೆಬನಾನ್ಗೆ ಒತ್ತಾಯಿಸಿತು. ಟೆಹ್ರಾನ್ ತನ್ನ ಪ್ರಾಕ್ಸಿಗಳಿಂದ ಒತ್ತಡಕ್ಕೊಳಗಾಯಿತು.
ಈ ಸೋಲಿನ ಕಾರ್ಯನಿರ್ವಹಣೆ ಹಿಜ್ಬುಲ್ಲಾದ ನಿಯಂತ್ರಣ ನಷ್ಟವನ್ನು ತೋರಿಸಿತು. ಶಾಂತಿ ಮಾತುಕತೆ ವೇಳೆಯೇ ಲೆಬನಾನ್ ಮತ್ತು ಗಾಜಾ ವಿರುದ್ಧದ ದಾಳಿ ನಡೆಸಿದ ಇಸ್ರೇಲ್ ಅಮೆರಿಕದ ಒತ್ತಡಕ್ಕೆ ಒಳಗಾಗಲಿಲ್ಲ. ಹಿಜ್ಬುಲ್ಲಾ ಮತ್ತು ಇಸ್ರೇಲ್ ಶಾಂತಿ ಮಾತುಕತೆ ಸಮೀಪವಿದ್ದಾಗ ನಡೆದ ಈ ದಾಳಿ ಇಸ್ರೇಲ್ ಮಿಲಿಟರಿ ಶಕ್ತಿ ತಡೆಯಲು ಸಾಧ್ಯವಾಗಲಿಲ್ಲ. ಜೊತೆಗೆ, ಶಾಂತಿ ಮಾತುಕತೆ ಇಲ್ಲ ಎಂಬುದನ್ನು ಸ್ಪಷ್ಟವಾಗಿಸಿತು.