ನವದೆಹಲಿ: ರೋಬೋಟಿಕ್ ಅಸಿಸ್ಟೆಂಟ್ ಸರ್ಜರಿ (ಆರ್ಎಎಸ್) ಸದ್ಯ ಭಾರತದಲ್ಲಿ ಎಲ್ಲರ ಆಕರ್ಷಣೀಯವಾಗಿದೆ. ಇದರಿಂದ ಹೆಚ್ಚಿನ ಜನರು ಅವಕಾಶ ಪಡೆಯಲು ಸರ್ಜನ್ಗಳು ಹೆಚ್ಚಿನ ತಂತ್ರಜ್ಞಾನಾಧಾರಿತ ತರಬೇತಿ ಪಡೆಯಬೇಕಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ಲಿನಿಕಲ್ ರೋಬೋಟಿಕ್ ಸರ್ಜರಿ ಅಸೋಸಿಯೇಷನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ತಜ್ಞರು, ದೇಶದೆಲ್ಲೆಡೆ ಅರ್ಹ ರೋಗಿಗಳಿಗೆ ರೋಬೋಟಿಕ್ ಸರ್ಜರಿ ಲಭ್ಯವಾಗುವ ನಿಟ್ಟಿನಲ್ಲಿ ಸರ್ಜನ್ಗಳನ್ನು ಸಿದ್ಧಗೊಳಿಸಬೇಕಿದೆ ಎಂದರು.
ಆರ್ಎಎಸ್ ರೋಗಿಗಳಿಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದರಿಂದ ರೋಗಿ ಬೇಗ ಆಸ್ಪತ್ರೆಯಿಂದ ಬಿಡುಗಡೆ, ಆಸ್ಪತ್ರೆಯಲ್ಲಿ ಅಲ್ಪಾವಧಿ ಇರುವಿಕೆ, ಕಡಿಮೆ ನೋವು ನಿವಾರಕ ಮತ್ತು ಆ್ಯಂಟಿಬಯೋಟಿಕ್ಸ್, ಕಡಿಮೆ ಸಂಕೀರ್ಣತೆ ಮತ್ತು ಐಸಿಯುನಲ್ಲಿ ಕಡಿಮೆ ಉಳಿಯುವ ಅವಕಾಶ ಹೊಂದಿದೆ. ರೋಬೋಟಿಕ್ ಸಹಾಯದ ಸರ್ಜರಿಯ ಮತ್ತೊಂದು ಅನುಕೂಲ ಎಂದರೆ, ಸಣ್ಣ ಕಲಿಕೆಯ ರೇಖೆ, ಮತ್ತು ಅತ್ಯುತ್ತಮ ಪ್ರಮಾಣೀಕರಣ ಆಗಿದೆ ಎಂದು ಸಿಆರ್ಎಸ್ಎ ಅಧ್ಯಕ್ಷ ಡಾ ವಿವೇಕ್ ಬಿಂದಲ್ ತಿಳಿಸಿದ್ದಾರೆ.
ರೋಬೋಟಿಕ್ ವ್ಯವಸ್ಥೆಗಳ ನಿಖರತೆ ಮತ್ತು ಕೌಶಲ್ಯದಿಂದ ಶಸ್ತ್ರಚಿಕಿತ್ಸಕರು ಉತ್ತಮ ಕ್ಲಿನಿಕಲ್ ಫಲಿತಾಂಶಗಳನ್ನು ಸಾಧಿಸಬಹುದು. ಅಲ್ಲದೇ ಇದರಲ್ಲಿ ಕಡಿಮೆ ಸಂಕೀರ್ಣತೆ ಮತ್ತು ರೋಗಿಗಳ ಶೀಘ್ರ ಚೇತರಿಕೆ ಕಾಣಬಹುದು. ಈಗ ತರಬೇತಿ ಪಡೆದಿರುವ ಸರ್ಜನ್ಗಳು ಮುಂದೆ ಈ ತಂತ್ರಜ್ಞಾನವನ್ನು ಮುಂದಿನ ಸರ್ಜನ್ಗಳಿಗೆ ಪರಿಚಯಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.