ಕರ್ನಾಟಕ

karnataka

ETV Bharat / opinion

ಟ್ರಂಪ್​ರ 'ಮೇಕ್ ಅಮೆರಿಕ ಗ್ರೇಟ್ ಅಗೇನ್' ಭಾರತ - ಅಮೆರಿಕ​​ ಸಂಬಂಧದ ಮೇಲೆ ಪರಿಣಾಮ ಬೀರುತ್ತಾ?

ಟ್ರಂಪ್​ ಅವರ 'ಮೇಕ್ ಅಮೆರಿಕ ಗ್ರೇಟ್ ಅಗೇನ್' ಭಾರತದ ಹಿತಾಸಕ್ತಿಗಳಿಗೆ ಧಕ್ಕೆ ತರಬಹುದೇ ಎಂಬ ಬಗ್ಗೆ ಲೇಖಕರಾದ ಚಂದ್ರಕಲಾ ಚೌಧರಿ ಇಲ್ಲಿ ವಿವರಿಸಿದ್ದಾರೆ.

ಮೇಕ್ ಅಮೆರಿಕ ಗ್ರೇಟ್ ಅಗೇನ್
ಮೇಕ್ ಅಮೆರಿಕ ಗ್ರೇಟ್ ಅಗೇನ್ (ETV Bharat)

By ETV Bharat Karnataka Team

Published : Nov 7, 2024, 5:51 PM IST

ನವದೆಹಲಿ:ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್​​ ಟ್ರಂಪ್ ಆಯ್ಕೆಯಾಗಿದ್ದಾರೆ. 4 ವರ್ಷಗಳ ಬಳಿಕ ಎರಡನೇ ಬಾರಿಗೆ ಅವರು ಅಧಿಕಾರದ ಗದ್ದುಗೆ ಏರಲಿದ್ದಾರೆ. ಅಮೆರಿಕ ಮತ್ತು ಭಾರತದ ರಾಜತಾಂತ್ರಿಕ ಸಂಬಂಧಗಳ ಮೇಲೆ ಅವರ ಆಯ್ಕೆಯು ಹೇಗೆ ಪರಿಣಾಮ ಬೀರುತ್ತದೆ ಎಂಬುದು ಈಗಿನ ಕುತೂಹಲವಾಗಿದೆ.

H-1B ವೀಸಾ, ವ್ಯಾಪಾರ ನೀತಿ, ಭದ್ರತೆ ಮತ್ತು ರಕ್ಷಣಾ ಸಹಕಾರದಂತಹ ಪ್ರಮುಖ ಕ್ಷೇತ್ರಗಳಲ್ಲಿ ಟ್ರಂಪ್ 2.0 ಸರ್ಕಾರ ಏನೆಲ್ಲಾ ಬದಲಾವಣೆ ಮಾಡಲಿದೆ ಎಂಬುದು ನಿರೀಕ್ಷೆಯಾಗಿದೆ. ಪರಸ್ಪರ ಯಶಸ್ಸಿಗೆ ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ನೂತನ ಅಧ್ಯಕ್ಷ ಟ್ರಂಪ್ ಅವರ 'ಅಮೆರಿಕ ಫಸ್ಟ್' ಅಜೆಂಡಾದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಅವರ ಹೊಸ ಘೋಷಣೆಯಾದ 'ಮೇಕ್​ ಅಮೆರಿಕ ಗ್ರೇಟ್​ ಅಗೇನ್​' ಮುಂದಿನ ದಿನಗಳಲ್ಲಿ ಹೇಗೆ ಪರಿಣಾಮಕಾರಿಯಾಗಲಿದೆ ಎಂಬುದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.

ಟ್ರಂಪ್​ ​- ಮೋದಿ ನಡುವೆ ಉತ್ತಮ ಬಾಂಧವ್ಯ:ರಿಪಬ್ಲಿಕನ್​ ಪಕ್ಷದ ನಾಯಕ ವಿಭೂತಿ ಝಾ ಅವರು ಈಟಿವಿ ಭಾರತ್​ ಜೊತೆಗೆ ವಿಶೇಷ ಸಂದರ್ಶನ ನಡೆಸಿದ್ದು, ಅದರಲ್ಲಿ ಎರಡು ರಾಷ್ಟ್ರಗಳ ನಡುವಿನ ಒಡನಾಟದ ಬಗ್ಗೆ ವಿವರಿಸಿದ್ದಾರೆ. ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರು ವೈಯಕ್ತಿಕ ಸಂಪರ್ಕ ಮತ್ತು ಪರಸ್ಪರರ ರಾಜಕೀಯ, ಆರ್ಥಿಕ ಆದ್ಯತೆಗಳ ಬಗ್ಗೆ ತಿಳಿವಳಿಕೆ ಹೊಂದಿದ್ದಾರೆ. ಟ್ರಂಪ್‌ರ ಮೇಕ್​​ ಅಮೆರಿಕ ಗ್ರೇಟ್ ಎಗೇನ್ ಮತ್ತು ಮೋದಿ ಅವರ ಮೇಕ್ ಇನ್ ಇಂಡಿಯಾ ಕಲ್ಪನೆ ಎರಡೂ ರಾಷ್ಟ್ರಗಳಿಗೆ ಯಶಸ್ಸನ್ನು ಉತ್ತೇಜಿಸಲಿದೆ ಎಂದಿದ್ದಾರೆ.

ಟ್ರಂಪ್ ಭಾರತವನ್ನು ಮಹತ್ವದ ಅವಕಾಶ ಎಂದು ಪರಿಗಣಿಸುತ್ತಾರೆ. ಆಮದು ಸುಂಕಗಳ ವಿಚಾರದಲ್ಲಿ ಚೌಕಾಶಿ ಮಾಡಬಹುದು. ಭಾರತವು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಬದಲಿಗೆ, ಅದು ಸಹಯೋಗದ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಬೇಕು. ಉಭಯ ರಾಷ್ಟ್ರಗಳ ನಡುವಿನ ಅಗತ್ಯತೆಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿಭೂತಿ ಝಾ ಹೇಳಿದ್ದಾರೆ.

"ಪೆಸಿಫಿಕ್ ಮತ್ತು ವಿವಿಧ ಜಾಗತಿಕ ರಂಗಗಳ ಭದ್ರತಾ ವ್ಯವಸ್ಥೆಯಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸುತ್ತದೆ. 'ಅಮೆರಿಕ ಫಸ್ಟ್' ಸಂದೇಶವು ಪ್ರತಿ ರಾಷ್ಟ್ರಕ್ಕೂ ತನ್ನದೇ ಆದ ಕಾರ್ಯಸೂಚಿಯನ್ನು ರವಾನಿಸುತ್ತದೆ. ಭಾರತಕ್ಕೆ ಬೆದರಿಕೆ ಹಾಕುವ ಭಯೋತ್ಪಾದನೆ ಅಥವಾ ಪ್ರತ್ಯೇಕತಾವಾದಿ ಚಳುವಳಿಗಳಿಗೆ ಯಾವುದೇ ಬೆಂಬಲವನ್ನು ಟ್ರಂಪ್ ಸಹಿಸಿಕೊಳ್ಳುವ ಸಾಧ್ಯತೆಯಿಲ್ಲ" ಎಂದು ಅವರು ಹೇಳಿದರು.

ಕಳೆದ ತಿಂಗಳಿನಿಂದ ಭಾರತವು ವಿದೇಶಿ ಉತ್ಪನ್ನಗಳ ಮೇಲೆ ಅತ್ಯಧಿಕ ಸುಂಕಗಳನ್ನು ವಿಧಿಸುತ್ತಿದೆ ಎಂದು ಟ್ರಂಪ್ ಪ್ರಸ್ತಾಪಿಸಿದ್ದರು. ವ್ಯಾಪಾರದ ಕುರಿತು ಟ್ರಂಪ್‌ರ ಅಭಿಪ್ರಾಯಗಳನ್ನು ಗಮನಿಸಿದರೆ, ಅವರು ಅಮೆರಿಕಕ್ಕೆ ಅನುಕೂಲಕರವಾದ ನೀತಿಗಳ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ. ಸುಂಕವನ್ನು ಕಡಿಮೆ ಮಾಡಲು ಮತ್ತು ರಫ್ತು ನಿಯಮಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಎಚ್​​1 ಬಿ ವೀಸಾದ ಕತೆಯೇನು?:ಟ್ರಂಪ್ ಮರು ಆಯ್ಕೆಯಿಂದ ಅಮೆರಿಕದಲ್ಲಿರುವ ಭಾರತೀಯ ಉದ್ಯೋಗಿಗಳಿಗೆ ಅಥವಾ ಅಲ್ಲಿಗೆ ಹೋಗಲು ಬಯಸುವವರಿಗೆ ಬೇಕಾಗಿರುವ H-1B ವೀಸಾದ ಕತೆ ಏನು ಎಂಬುದು ಪ್ರಮುಖ ವಿಚಾರವಾಗಲಿದೆ. H-1B ವೀಸಾ ಬಗ್ಗೆ ಟ್ರಂಪ್​ ತಮ್ಮ ಮೊದಲ ಅಧಿಕಾರವಧಿಯಲ್ಲಿ ಗಮನಾರ್ಹ ಬದಲಾವಣೆ ತಂದಿದ್ದರು. H-1B ವೀಸಾವನ್ನು ವಲಸೆ ನೀತಿಯ ಪ್ರಮುಖ ಭಾಗವನ್ನಾಗಿ ಮಾಡಿದ್ದರು. ಅರ್ಹತೆಯನ್ನು ಬಿಗಿಗೊಳಿಸಿ, ಅರ್ಜಿದಾರರ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು.

ಟ್ರಂಪ್ ಅವರು "ಬೈ ಅಮೇರಿಕನ್, ಹೈರ್ ಅಮೇರಿಕನ್" ಆದೇಶ ಹೊರಡಿಸಿದ್ದರು. ಭಾರತದಿಂದ ಸಾವಿರಾರು ಜನರು ಉದ್ಯೋಗ ಅರಸಿ ಅಮೆರಿಕಕ್ಕೆ ಹೋಗುತ್ತಾರೆ. ವೀಸಾ ವಿಚಾರದಲ್ಲಿ ಟ್ರಂಪ್​ ಏನು ನಿಲುವು ತಾಳಲಿದ್ದಾರೆ ಎಂಬುದು ಕುತೂಹಲವಾಗಿದೆ.

ಮಾಜಿ ರಾಜತಾಂತ್ರಿಕ ರಾಜೀವ್ ಡೋಗ್ರಾ ಅವರು ಟ್ರಂಪ್ ಅವರ ಅಧ್ಯಕ್ಷ ಸ್ಥಾನ ಮತ್ತು ಭಾರತ-ಯುಎಸ್ ಸಂಬಂಧಗಳ ಮೇಲೆ ಅದರ ಪರಿಣಾಮಗಳ ಒಳನೋಟಗಳನ್ನು ವಿವರಿಸಿದರು. ಟ್ರಂಪ್​ ಅವರು ಆರಿಸಿಕೊಳ್ಳುವ ಸಲಹೆಗಾರರ ಮೇಲೆ ಎರಡನೇ ಅವಧಿಯ ಆಡಳಿತ ಪ್ರಮುಖವಾಗಿರುತ್ತದೆ. ಹೆಚ್ಚು ಸ್ಥಿರವಾದ ಸಲಹಾ ತಂಡವು ಆಡಳಿತದಲ್ಲಿ ಸುಧಾರಣೆಗೆ ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ನೀತಿಗಳ ರಚನೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅಮೆರಿಕ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ​​ ಗೆಲ್ಲಲು ಕಾರಣಗಳಿವು: ಡೊನಾಲ್ಡ್​ 'ಟ್ರಂಪ್​ ಕಾರ್ಡ್​' ಏನು?

ABOUT THE AUTHOR

...view details