WHERE IS PATALKOT LOCATED:ಈ ಊರಿನಲ್ಲಿ ಬೆಳಗ್ಗೆ 11 ನಂತರವೇ ಸೂರ್ಯೋದಯ ಆಗುತ್ತದೆ. ಹಾಗೆ ಮಧ್ಯಾಹ್ನ 3ಕ್ಕೇ ಕತ್ತಲಾಗುತ್ತದೆ. ಈ ದೃಶ್ಯವನ್ನು ಸಿನಿಮಾವೊಂದರಲ್ಲಿ ನೋಡಿದ್ದೇವೆ. ಇದೇ ರೀತಿಯ ವಿಚಿತ್ರ ಊರಿನಲ್ಲಿ ಯಾರಿಗೂ ತಿಳಿಯದ ರಹಸ್ಯವೊಂದು ಅಡಗಿರುತ್ತದೆ. ಇದೆಲ್ಲವು ಸಿನಿಮಾದಲ್ಲಿನ ಕಾಲ್ಪನಿಕ ಕಥೆ. ಆದರೆ, ಅಂತಹ ಪ್ರದೇಶವು ನಿಜವಾಗಿಯೂ ಅಸ್ತಿತ್ವದಲ್ಲಿದೆ ಎಂದು ನಿಮಗೆ ನಂಬಲು ಸಾಧ್ಯವೇ? ಹೌದು, ನಮ್ಮ ದೇಶದಲ್ಲಿ ಅಂತಹ ವಿಚಿತ್ರ ಪ್ರದೇಶವೊಂದಿದೆ.
ಈ ಸ್ಥಳದ ವಿಚಿತ್ರವೆಂದರೆ ಬೆಳಗ್ಗೆ 11 ಗಂಟೆಯಾದರೂ ಸೂರ್ಯನ ಸುಳಿವೇ ಇರುವುದಿಲ್ಲ. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಈ ಪ್ರದೇಶದಲ್ಲಿ ದಟ್ಟ ಕತ್ತಲೆ ಆವರಿಸುತ್ತದೆ. ಇಲ್ಲಿರುವ ಜನರಿಗೆ ಹೊರ ಜಗತ್ತಿನ ಸಂಪರ್ಕವೇ ಇಲ್ಲ. ಈ ಪ್ರದೇಶಕ್ಕೆ ಇಲ್ಲಿರುವ ಜನರೇ ಮಾಲೀಕರು. ಈ ಪ್ರದೇಶದ ಸೌಂದರ್ಯಕ್ಕೆ ಎಲ್ಲರೂ ಮಾರುಹೋಗುತ್ತಾರೆ. ಹಾಗಾದರೆ ಆ ಪ್ರದೇಶ ಎಲ್ಲಿದೆ? ಇಲ್ಲಿ ಯಾಕೆ ಹೀಗಾಗುತ್ತಿದೆ? ಈ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ..
ಇದುಮಧ್ಯ ಪ್ರದೇಶ ರಾಜ್ಯದಲ್ಲಿರುವಪಾತಾಳಕೋಟ್ ಎಂಬ ಗ್ರಾಮದ ವಿಸ್ಮಯದ ಕಥೆ. ಈ ಊರಿನ ವ್ಯಾಪ್ತಿಯಲ್ಲಿ ಜಡ್ಮದಲ್, ಹರ್ರಾ ಕಚಾರ್, ಸೆಹ್ರಾ ಪಚ್ಗೋಲ್ ಸೇರಿದಂತೆ ಒಟ್ಟು 12 ಗ್ರಾಮಗಳು ಇವೆ. ಈ ಗ್ರಾಮಗಳು ಸುಮಾರು 3,000 ಅಡಿ ಎತ್ತರದಲ್ಲಿ ದಟ್ಟವಾದ ಪರ್ವತಗಳಿಂದ ಆವೃತವಾಗಿವೆ. ಹಾಗಾಗಿ ಸೂರ್ಯನ ಕಿರಣಗಳು ಗ್ರಾಮಗಳ ಮೇಲೆ ಹೆಚ್ಚಾಗಿ ಬೀಳುವುದಿಲ್ಲ. ಅದರ ಪರಿಣಾಮವಾಗಿ, ಒಂದು ದಿನದಲ್ಲಿ ಸೂರ್ಯನ ಬೆಳಕು ಕೇವಲ 5 ಗಂಟೆಗಳ ಕಾಲ ಮಾತ್ರ ಇರುತ್ತದೆ. ಇಲ್ಲಿ ಉಳಿದ ಸಮಯದಲ್ಲಿ ಕತ್ತಲೆ ಆವರಿಸುತ್ತದೆ.
ಇಲ್ಲಿರಲಿಲ್ಲ ಕೋವಿಡ್ನ ಕುರುಹು: ಕೋವಿಡ್-19 ಸಮಯದಲ್ಲಿ ಇಡೀ ವಿಶ್ವವೇ ಅಲ್ಲೋಲಕಲ್ಲೋಲವಾಗಿತ್ತು. ಭಾರತ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿತ್ತು. ಆದರೆ, ಈ ಅವಧಿಯಲ್ಲಿ ಪಾತಾಳಕೋಟ್ ಮಾತ್ರ ಶಾಂತವಾಗಿತ್ತು. ಇಲ್ಲಿ ಕೋವಿಡ್-19ರ ಯಾವುದೇ ಕುರುಹು ಕಂಡುಬಂದಿರಲಿಲ್ಲ. ಇಲ್ಲಿನ ಜನರಿಗೆ ಹೊರ ಜಗತ್ತಿನ ಸಂಪರ್ಕವೇ ಇಲ್ಲ. ಹಾಗಾಗಿ, ಈ ಪ್ರದೇಶದಲ್ಲಿ ಒಂದೇ ಒಂದು ಕೋವಿಡ್ ಪ್ರಕರಣ ದಾಖಲಾಗಿರಲಿಲ್ಲ.