ಕರ್ನಾಟಕ

karnataka

ETV Bharat / lifestyle

ಪ್ರಕೃತಿಯೊಂದಿಗೆ ಸಂಬಂಧ ಬೆಸೆಯುವ ಬಯೋಫಿಲಿಕ್​ ವಿನ್ಯಾಸ; ಮನೆಯ ಅಂದದ ಜೊತೆಗೆ ಮನಸಿಗೂ ಮುದ - BIOPHILIC DESIGN IN HOME

ಬಯೋಫಿಲಿಕ್​ ವಿನ್ಯಾಸ ಕೇವಲ ನಿಮ್ಮ ಒತ್ತಡ ತಗ್ಗಿಸುವುದಿಲ್ಲ. ಪ್ರಕೃತಿಯೊಂದಿಗೆ ನಮ್ಮನ್ನು ಬೆಸೆಯುತ್ತದೆ.

what-is-biophilic-living-how-to-decorate-home
ಬಯೋಫಿಲಿಕ್​ ವಿನ್ಯಾಸ (Getty Images)

By ETV Bharat Lifestyle Team

Published : Oct 9, 2024, 1:03 PM IST

Updated : Oct 9, 2024, 1:31 PM IST

ಹೈದರಾಬಾದ್​: ಕೋವಿಡ್​ ಬಳಿಕ ಬದಲಾದ ಅನೇಕ ಅಂಶಗಳಲ್ಲಿ ಒಂದು ರಜೆಯ ಪ್ರವಾಸ. ಕೋವಿಡ್​ ನಂತರ ಜನರು ತಮ್ಮ ಮನಸ್ಸನ್ನು ಮತ್ತಷ್ಟು ಉತ್ತೇಜನ ಮತ್ತು ಉಲ್ಲಾಸಭರಿತವಾಗಲು ಹೆಚ್ಚಾಗಿ ನಿಸರ್ಗದ ಜೊತೆ ಜಸಮಯ ಕಳೆಯುತ್ತಿದ್ದಾರೆ. ಇದಕ್ಕಾಗಿ ಬೆಟ್ಟ ಗುಡ್ಡ ಅಥವಾ ಸಮುದ್ರತಾಣದ ಸ್ಥಳಗಳಿಗೆ ಹೋಗುತ್ತಿದ್ದಾರೆ. ಈ ರೀತಿ ನಿಸರ್ಗದ ಹತ್ತಿರಕ್ಕೆ ಹೋಗುತ್ತಿರುವ ಜನರು ಇದೀಗ ತಮ್ಮ ಮನೆಯಲ್ಲೂ ಈ ನೈಸರ್ಗಿಕ ಅಂಶಗಳಿಗೆ ಒತ್ತು ನೀಡುವ ಮೂಲಕ ಪ್ರಕೃತಿ ಮಡಿಲಿನ ಆನಂದ ಪಡೆಯುಲು ಮುಂದಾಗುತ್ತಿದ್ದಾರೆ. ಇದರಿಂದಲೇ ಹುಟ್ಟಿಗೊಂಡ ಗೃಹಲಂಕಾರದ ವಿನ್ಯಾಸ ಬಯೋಫಿಲಿಕ್​.

ಮನೆಯ ವಾಸ ಸ್ಥಳಗಳಲ್ಲಿ ಹೆಚ್ಚಾಗಿ ಹಸಿರಿಗೆ ಒತ್ತು ನೀಡುವ ಈ ವಿನ್ಯಾಸದಲ್ಲಿ ನೈಸರ್ಗಿಕ ಬೆಳಕು ಮತ್ತು ಗಾಳಿಗೂ ಪ್ರಾಶಸ್ತ್ಯ ನೀಡಲಾಗುವುದು. ಅಂತಿಮವಾಗಿ ಇದರ ಹಿಂದಿನ ಉದ್ದೇಶ ಎಂದರೆ ಅದು ಆರೋಗ್ಯ ಮತ್ತು ಯೋಗಕ್ಷೇಮವಾಗಿದೆ ಎನ್ನುತ್ತಾರೆ ಟೀಮ್​3ರ ಇಂಟಿರಿಯರ್​ ಡಿಸೈನರ್​​ ದಹಿಯಾ.

ಒಳಾಂಗಣ ಸಸ್ಯಗಳು (Getty Images)

ಒಳಾಂಗಣ ಸಸ್ಯಗಳು: ಬಯೋಫಿಲಿಕ್​ ವಿನ್ಯಾಸದಲ್ಲಿ ಮನೆಯ ಒಳಗೆ ನಿಸರ್ಗವನ್ನು ತರುವ ಸುಲಭವಾದ ಮಾರ್ಗ ಎಂದರೆ ಒಳಾಂಗಣ ಸಸ್ಯಗಳು. ಸುಲಭ ನಿರ್ವಹಣೆಯಂತಹ ಸ್ನೇಕ್​ ಪ್ಲಾಂಟ್​ (ಸಸ್ಯ) ಇದು ಇಂಗಾಲದ ಡೈ ಆಕ್ಸೆಡ್​ ಮತ್ತು ಇತರೆ ಮಾಲಿನ್ಯವನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

ನಿಸರ್ಗದ ಅತಿ ಹೆಚ್ಚಿನ ಪ್ರಯೋಜನ ಪಡೆಯಬೇಕು ಎಂದರೆ ಮನೆಯ ಒಳಾಂಗಣ ಮತ್ತು ಹೊರಾಂಗಣದ ಜಾಗದಲ್ಲಿ ಸುಲಭ ನಿರ್ವಹಣೆಯ ಅತಿ ಹೆಚ್ಚು ಗಿಡಗಳನ್ನು ಇರಿಸುವುದಾಗಿದೆ. ಇವು ಹೊಸ ರೀತಿಯ ತಾಜಾತನ ನೀಡುತ್ತವೆ ಎನ್ನುತ್ತಾರೆ ವಿನ್ಯಾಸಗರರು.

ವರ್ಟಿಕಲ್​ ಗಾರ್ಡನ್​ (Getty Images)

ವರ್ಟಿಕಲ್​ ಗಾರ್ಡನ್​ :ಒಂದು ವೇಳೆ ಹೊರಾಂಗಣ ಜಾಗದಲ್ಲಿ ಅಂದುಕೊಳ್ಳುವಷ್ಟು ಗಿಡ ಬೆಳೆಯಲು ಸಾಧ್ಯವಿಲ್ಲ ಅಲ್ಲಿ ಸೀಮಿತ ಜಾಗ ಇದೆ ಎಂದರೆ ಅದಕ್ಕೆ ಪರಿಹಾರ ಲಂಬ ಉದ್ಯಾನವನ. ನಿಮ್ಮ ಬಾಲ್ಕನಿ ಅಥವಾ ಒಳಾಂಣದಲ್ಲಿ ಹಸಿರು ಗೋಡೆಗಳ ನಿರ್ಮಾಣ ಮಾಡಬಹುದು. ಇದು ನೋಡಲು ಅಂದ ಹೆಚ್ಚಿಸುವ ಜೊತೆಗೆ ಗಾಳಿಯ ಗುಣಮಟ್ಟ ಹೆಚ್ಚಿಸುತ್ತದೆ. ನಿಮ್ಮ ಮನೆ ಜಾಗ ಮತ್ತಷ್ಟು ಸೀಮಿತವಾಗಿದೆ ಎಂದರೆ, ಮಿಮಿಕ್​ ಬಯೋಫಿಲಾ ಅಂಶವನ್ನು ಸೇರಿಸಬಹುದು. ಅಂದರೆ ಬೊಟಾನಿಕಲ್​ ಮಾದರಿಯ ವಾಲ್​ ಪೇಪರ್​ ಅಥವಾ ಸಣ್ಣ ಒಳಾಂಗಣ ಸಸ್ಯಗಳಿಗೆ ಜಾಗ ನೀಡಬಹುದು. ಇದು ನಿಸರ್ಗದ ಜೊತೆಗೆ ನೀವು ಸಂಪರ್ಕದಲ್ಲಿದ್ದೀರ ಎಂಬ ಭಾವ ಮೂಡಿಸುವುದು ಸುಳ್ಳಲ್ಲ.

ಬೆಳಕಿನ ವಿನ್ಯಾಸ (Getty Images)

ವಸ್ತುಗಳು ಮುಖ್ಯ: ಮನೆಯಲ್ಲಿ ಬಳಸುವ ವಸ್ತುಗಳು ಕೂಡ ನಿಮಗೆ ನಿಸರ್ಗದ ಭಾವ ಮೂಡಿಸುವಂತಿರಬೇಕು. ಈ ಹಿನ್ನೆಲೆ ಮರದಂತಹ ನೈಸರ್ಗಿಕ ಅಂಶಗಳಿಗೆ ಹೆಚ್ಚು ಒತ್ತು ನೀಡಿ. ಮರದ ಪಿಠೋಪಕರಣವನ್ನು ಮರು ಬಳಕೆ ಅಥವಾ ಗೋಡೆಗಳಲ್ಲಿ ಕ್ಲಾಡಿಂಗ್​ (ಮರದ ರೀತಿಯ ವಿನ್ಯಾಸ) ಬಳಕೆ ಮಾಡಬಹುದು. ಜೊತೆಗೆ ಲೆನಿನ್​ನಂತಹ ಬಟ್ಟೆಗಳ ಬಳಕೆ ನಿಮಗೆ ನೈಸರ್ಗಿಕ ಅಂಶದ ಭಾವ ಮೂಡಿಸುತ್ತದೆ. ಜೊತೆಗೆ ಬಣ್ಣಗಳ ಆಯ್ಕೆಗಳನ್ನು ನಿಸರ್ಗದ ಅಂಶ ಇರುವಂತೆ ನೋಡಿಕೊಳ್ಳುವುದು ಅಗತ್ಯ.

ಗೋಡೆಯ ವಿನ್ಯಾಸ (Getty Images)

ಬೆತ್ತ ಅಥವಾ ಮರದ ಪಿಠೋಪಕರಣಗಳು ಒಳಾಂಗಣ ಮತ್ತು ಹೊರಾಂಗಣಕ್ಕೆ ಹೊಂದಿಕೆಯಾಗುತ್ತದೆ. ಇದು ನೈಸರ್ಗಿಕ ಸ್ಪರ್ಶವನ್ನು ನೀಡುತ್ತದೆ. ಮನೆಯ ವಿನ್ಯಾಸದಲ್ಲಿ ಬಳಕೆ ಮಾಡುವ ವಸ್ತುಗಳನ್ನು ಕೂಡ ನಿಸರ್ಗದ ಸೌಂದರ್ಯ ಆಹ್ಲಾದಿಸಲು ಸಹಾಯ ಮಾಡುತ್ತದೆ. ನಿಮ್ಮ ಸುತ್ತಮುತ್ತಲು ಇಂತಹ ವಸ್ತುಗಳೊಂದಿಗೆ ನೀವು ಪರಿಸರದೊಂದಿಗೆ ಸಂಪರ್ಕ ಸಾಧಿಸಿದ್ದೀರ ಎಂಬ ಭಾವ ಮೂಡಿಸುತ್ತವೆ ಎಂದು ಸಲಹೆ ನೀಡುತ್ತಾರೆ.

ಮನೆಯ ಪಿಠೋಪಕರಣ ವಿನ್ಯಾಸ (Getty Images)

ಬೆಳಕಿನ ಅಗತ್ಯತೆ:ಬಯೋಫಿಲಿಕ್​ ವಿನ್ಯಾಸದ ಮತ್ತೊಂದು ಪ್ರಮುಖ ನಿರ್ಣಾಯಕ ಅಂಶ ಎಂದರೆ ನೈಸರ್ಗಿಕ ಬೆಳಕು. ಅತಿ ಹೆಚ್ಚು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಮನೆಯ ಒಳಗಿನ ವಿನ್ಯಾಸದಲ್ಲಿ ಬೆಳಕಿಗೆ ಹೆಚ್ಚು ಪ್ರಾಶಸ್ಯ ನೀಡುವ ಮೂಲಕ ಹವಾಮಾನ ಬದಲಾವಣೆಯ ಅನುಭವವನ್ನು ಪಡೆಯಬೇಕು. ದೊಡ್ಡ ಕಿಟಕಿ ಅಥವಾ ತೆರೆದ ಸ್ಥಳಗಳ ಮೂಲಕ ಹೆಚ್ಚು ಬೆಳಕು ಬರುವಂತೆ ನೋಡಿಕೊಳ್ಳುವ ಜೊತೆಗೆ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ವಿನ್ಯಾಸ ಸೃಷ್ಟಿಸಬಹುದು ಎಂದು ಶಿಫಾರಸು ಮಾಡುತ್ತಾರೆ.

ಇದನ್ನೂ ಓದಿ: ಇದೊಂದು ಕೆಲಸ ಮಾಡಿದರೆ ತುಂಬಾ ಚುರುಕಾಗುತ್ತೆ ನಿಮ್ಮ ಮೆದುಳು, ಮರೆವಿನ ಸಮಸ್ಯೆಯೂ ದೂರ

Last Updated : Oct 9, 2024, 1:31 PM IST

ABOUT THE AUTHOR

...view details