ಘಮಘಮಿಸುವ 'ಟೊಮೆಟೊ ಕೆಂಪು ಮೆಣಸಿನಕಾಯಿ ಚಟ್ನಿ' ಮಾಡೋದು ಹೀಗೆ - TOMATO RED CHILLI CHUTNEY RECIPE
Tomato Red Hot Chilli Chutney Recipe: 'ಟೊಮೆಟೊ ಕೆಂಪು ಮೆಣಸಿನಕಾಯಿ ಚಟ್ನಿ' ಸಾಮಾನ್ಯ ಟೊಮೆಟೊ ಚಟ್ನಿಗಿಂತ ಉತ್ತಮ ರುಚಿ ಹೊಂದಿರುತ್ತದೆ. ಇದೀಗ ಈ ಚಟ್ನಿ ಸಿದ್ಧಪಡಿಸೋದು ಹೇಗೆ ಎಂಬುದನ್ನು ತಿಳಿಯೋಣ.
Tomato Red Hot Chilli Chutney Recipe :ಆಯಾ ಋತುಮಾನಕ್ಕೆ ತಕ್ಕಂತೆ ಲಭ್ಯವಿರುವ ತರಕಾರಿಗಳಲ್ಲಿ ಕೆಂಪು ಮೆಣಸಿನಕಾಯಿಯು ಒಂದಾಗಿದೆ. ಇದೀಗ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ದೊರೆಯುತ್ತಿವೆ. ಅನೇಕರು ಒಂದು ವರ್ಷದವರೆಗೆ ಒಣಗಿಸಿದ ಕೆಂಪು ಮೆಣಸಿನಕಾಯಿಗಳಿಂದ ಖಾರದ ಪುಡಿ ಸಿದ್ಧಪಡಿಸಿ ಅದನ್ನು ಸಂಗ್ರಹಿಸಿ ಇಡುತ್ತಾರೆ. ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ತಯಾರಿಸುತ್ತಾರೆ, ಬೇಕಾದಾಗಲೆಲ್ಲಾ ಸ್ವಲ್ಪ ಚಿಕ್ಕ ಡಬ್ಬಿಗೆ ತೆಗೆದುಕೊಂಡು ಅಡುಗೆಗೆ ಬಳಕೆ ಮಾಡುತ್ತಾರೆ.
ಈಗ ನಾವು ನಿಮಗಾಗಿ ಟೊಮೆಟೊ ಕೆಂಪು ಮೆಣಸಿನಕಾಯಿ ಚಟ್ನಿ ರೆಸಿಪಿಯನ್ನು ತಂದಿದ್ದೇವೆ. ಈ ಚಟ್ನಿಯನ್ನು ಹಲವು ತಿಂಗಳುಗಳ ಕಾಲ ಸಂಗ್ರಹಿಸಬಹುದು. ಈ ಚಟ್ನಿಯನ್ನು ನೀವು ಎಷ್ಟು ಬಾರಿ ಸೇವಿಸಿದರೂ ಬೇಸರವಾಗುವುದಿಲ್ಲ, ತುಂಬಾ ರುಚಿಕರವಾಗಿರುತ್ತದೆ.
ಕೆಂಪು ಮೆಣಸಿನಕಾಯಿ ಜೊತೆಗೆ ಹುಣಸೆಹಣ್ಣು ಸೇರಿಸಿಯು ತಯಾರಿಸಲಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿದೆ. ಆದರೆ, ನೀವು ಟೊಮೆಟೊ ಮತ್ತು ಕೆಂಪು ಹಸಿ ಮೆಣಸಿನಕಾಯಿಯಿಂದ ಅದ್ಭುತವಾದ ಚಟ್ನಿ ಕೂಡ ರೆಡಿ ಮಾಡಬಹುದು. ಶ್ರಮಿಸುವ ಅಗತ್ಯವಿಲ್ಲದೇ, ನಿಖರವಾದ ಅಳತೆಗಳೊಂದಿಗೆ ಈ ಚಟ್ನಿ ಸಿದ್ಧಪಡಿಸಿದರೆ ಹಲವು ತಿಂಗಳುಗಳವರೆಗೆ ಸಂಗ್ರಹಿಸಬಹುದು. ಈ ಚಟ್ನಿಗೆ ಬೇಕಾದ ಪದಾರ್ಥಗಳೇನು ಹಾಗೂ ತಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.
ಟೊಮೆಟೊ ಕೆಂಪು ಮೆಣಸಿನಕಾಯಿ ಚಟ್ನಿಗೆ ಅಗತ್ಯವಿರುವ ಪದಾರ್ಥಗಳು :
ಮೆಂತ್ಯ ಕಾಳು - 1 ಟೀಸ್ಪೂನ್
ಟೊಮೆಟೊ - ಅರ್ಧ ಕೆಜಿ
ಹುಣಸೆಹಣ್ಣು - 50 ಗ್ರಾಂ
ಎಣ್ಣೆ - ಕಾಲು ಕಪ್
ಕೆಂಪು ಹಸಿಮೆಣಸಿನಕಾಯಿ - ಪಾವ್ ಕೆಜಿ
ಉಪ್ಪು - 65 ಗ್ರಾಂ
ಅರಿಶಿನ - 1 ಟೀಸ್ಪೂನ್
ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳು - 25 ಗ್ರಾಂ
ಒಗ್ಗರಣೆ ನೀಡಲು ಬೇಕಾಗಿರುವ ಸಾಮಗ್ರಿಗಳು :
ಎಣ್ಣೆ - ಕಾಲು ಕಪ್
ಸಾಸಿವೆ - ಅರ್ಧ ಟೀಸ್ಪೂನ್
ಜೀರಿಗೆ - ಅರ್ಧ ಟೀಸ್ಪೂನ್
ನೆನೆಸಿದ ಕಡಲೆ ಬೇಳೆ- ಅರ್ಧ ಟೀಸ್ಪೂನ್
ಉದ್ದಿನ ಬೇಳೆ - ಅರ್ಧ ಟೀಸ್ಪೂನ್
ಒಣಮೆಣಸಿನಕಾಯಿ - 2
ಬೆಳ್ಳುಳ್ಳಿ ಎಸಳು - 4
ಕರಿಬೇವು - 2 ಎಲೆಗಳು
ಇಂಗು - ಒಂದು ಚಿಟಿಕೆ
ಟೊಮೆಟೊ ಕೆಂಪು ಮೆಣಸಿನಕಾಯಿ ಚಟ್ನಿ ತಯಾರಿಸುವ ವಿಧಾನ :
ಟೊಮೆಟೊಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ತೇವಾಂಶವಿಲ್ಲದೆ ಒಣ ಬಟ್ಟೆಯಿಂದ ಒರೆಸಬೇಕು. ನಂತರ ಟೊಮೆಟೊ ಮಧ್ಯಮ ಗಾತ್ರದ ಪೀಸ್ಗಳಾಗಿ ಕಟ್ ಮಾಡಿ ಪಕ್ಕಕ್ಕೆ ಇಡಿ.
ಕೆಂಪು ಹಸಿಮೆಣಸಿನಕಾಯಿಯನ್ನು ಸ್ವಚ್ಛವಾಗಿ ತೊಳೆದುಕೊಂಡು ಫ್ಯಾನ್‌ನ ಗಾಳಿಯಲ್ಲಿ ಸಂಪೂರ್ಣವಾಗಿ ಒಣಗಲು ಬಿಡಬೇಕು. ತೇವಾಂಶವಿಲ್ಲದೆ ಸಂಪೂರ್ಣವಾಗಿ ಒಣಗಿದ ಬಳಿಕ ಅದರ ಕಾಂಡಗಳನ್ನು ತೆಗೆದು ಸಣ್ಣ ಪೀಸ್ಗಳಾಗಿ ಕಟ್ ಮಾಡಿಕೊಳ್ಳಬೇಕಾಗುತ್ತದೆ.
ಹುಣಸೆಹಣ್ಣನ್ನು ಸಹ ಸ್ವಚ್ಛಗೊಳಿಸಬೇಕು. ಇದರರ್ಥ ನೀವು ಬೀಜಗಳು ಹಾಗೂ ಸಿಪ್ಪೆಯನ್ನು ತೆಗೆದು ಒಂದು ಬಟ್ಟಲಿನಲ್ಲಿ ಇಡಿ.
ಒಲೆ ಆನ್ ಮಾಡಿ ಅದರ ಮೇಲೆ ಬಾಣಲೆ ಇಡಿ. ಅದರೊಳಗೆ ಮೆಂತ್ಯ ಕಾಳು ಹಾಕಿ, ಕಂದು ಬಣ್ಣ ಬರುವವರೆಗೆ ಹುರಿದು ಪಕ್ಕಕ್ಕೆ ಇಡಿ. ಅದು ಸಂಪೂರ್ಣವಾಗಿ ತಣ್ಣಗಾದ ಬಳಿಕ ಅದನ್ನು ನುಣ್ಣಗೆ ಪುಡಿ ಮಾಡಿ ಇಡಿ.
ಇದೀಗ ಮತ್ತೆ ಒಲೆ ಆನ್ ಮಾಡಿ ಅದರ ಮೇಲೆ ಒಂದು ಪಾತ್ರೆ ಇಟ್ಟು ಕಾಲು ಕಪ್ ಎಣ್ಣೆ ಸುರಿಯಿರಿ. ಎಣ್ಣೆ ಬಿಸಿಯಾದ ಬಳಿಕ ಕತ್ತರಿಸಿದ ಟೊಮೆಟೊ ಹಾಗೂ ಸ್ವಚ್ಛಗೊಳಿಸಿದ ಹುಣಸೆಹಣ್ಣು ಸೇರಿಸಿ ಮೃದುವಾಗುವವರೆಗೆ ಬೇಯಿಸಿ.
ಟೊಮೆಟೊ ತುಂಡುಗಳು ಮೃದುವಾದಾಗ ಹಾಗೂ ನೀರು ಆವಿಯಾಗಿ ಎಣ್ಣೆ ಮೇಲಕ್ಕೆ ತೇಲಿದಾಗ, ಒಲೆ ಆಫ್ ಮಾಡಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
ಮಿಕ್ಸರ್ ಜಾರ್ ತೆಗೆದುಕೊಂಡು ಅದರೊಳಗೆ ಮೆಣಸಿನಕಾಯಿ ಪೀಸ್ಗಳನ್ನು, ಉಪ್ಪು, ಅರಿಶಿನ ಸೇರಿಸಿ ಹಾಗೂ ಅದು ತುಂಬಾ ಮೃದುವಾಗದೆ ಸ್ವಲ್ಪ ಒರಟಾಗಿರುವಂತೆ ರುಬ್ಬಿಕೊಳ್ಳಿ.
ನಂತರ ಸಂಪೂರ್ಣವಾಗಿ ತಣ್ಣಗಾದ ಟೊಮೆಟೊ ಪೀಸ್ಗಳನ್ನು, ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳು, ಈ ಹಿಂದೆ ತಯಾರಿಸಿದ ಮೆಂತ್ಯ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣವಾಗುವವರೆಗೆ ರುಬ್ಬಿಕೊಳ್ಳಿ.
ಪುಡಿಮಾಡಿದ ಚಟ್ನಿಯಲ್ಲಿ ಸಾಕಷ್ಟು ಉಪ್ಪು ಇರುವುದನ್ನು ಚೆಕ್ ಮಾಡಿ. ಇದನ್ನು ಗಾಳಿಯಾಡದ ಗಾಜಿನ ಜಾರ್‌ನಲ್ಲಿ ಸಂಗ್ರಹಿಸಿ ರೆಫ್ರಿಜರೇಟರ್‌ನಲ್ಲಿ ಇರಿಸಬೇಕಾಗುತ್ತದೆ. ನಿಮಗೆ ಬೇಕಾದರೆ ಸ್ವಲ್ಪ ಹಸಿ ಮೆಣಸಿನಕಾಯಿ ತೆಗೆದುಕೊಂಡು ಸ್ವಲ್ಪ ಸುವಾಸನೆ ಸೇರಿಸಿ.
ಒಗ್ಗರಣೆಗಾಗಿ ನೀಡಲು ಒಲೆ ಆನ್ ಮಾಡಿ. ಅದರ ಮೇಲೆ ಪ್ಯಾನ್ ಇಟ್ಟು ಎಣ್ಣೆಯನ್ನು ಬಿಸಿ ಮಾಡಬೇಕಾಗುತ್ತದೆ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಕಡಲೆ ಮತ್ತು ಉದ್ದಿನಬೇಳೆ ಸೇರಿಸಿ ಫ್ರೈ ಮಾಡಿ.
ಬಳಿಕ ಒಣಗಿದ ಮೆಣಸಿನಕಾಯಿಗಳು, ಬೆಳ್ಳುಳ್ಳಿ ಎಸಳುಗಳು ಹಾಗು ಕರಿಬೇವಿನ ಎಲೆಗಳನ್ನು ಸೇರಿಸಿ ಇನ್ನೊಂದು ನಿಮಿಷ ಹುರಿಯಿರಿ. ಅಂತಿಮವಾಗಿ ಇಂಗು, ಸ್ವಲ್ಪ ರುಬ್ಬಿಕೊಂಡಿರುವ ಚಟ್ನಿಯ ಮಿಶ್ರಣವನ್ನು ಸೇರಿಸಿ ಒಂದೆರಡು ನಿಮಿಷ ಮಿಕ್ಸ್ ಮಾಡಿ ಬಳಿಕ ಒಲೆ ಆಫ್ ಮಾಡಿ.
ಉಪ್ಪಿನಕಾಯಿ ಚಟ್ನಿ ತಣ್ಣಗಾದ ನಂತರ ಗಾಜಿನ ಡಬ್ಬದೊಳಗೆ ಸಂಗ್ರಹಿಸಿ ಇಡಬಹುದು. ಅದ್ಭುತ ರುಚಿಯ ಟೊಮೆಟೊ ಮೆಣಸಿನಕಾಯಿ ಚಟ್ನಿ ಸಿದ್ಧವಾಗಿದೆ. ಇಷ್ಟವಾದರೆ ನೀವು ಮನೆಯಲ್ಲೇ ಒಮ್ಮೆ ಟ್ರೈ ಮಾಡಿ.