How to Take Care of Plants in Winter:ಗಿಡಗಳನ್ನು ಬೆಳೆಸುವುದು ಈಗ ಅನೇಕ ಜನರ ನೆಚ್ಚಿನ ವಿಷಯ ಹಾಗೂ ಹವ್ಯಾಸವಾಗಿದೆ. ಹಲವರು ತಮ್ಮ ಮನೆಗಳಲ್ಲಿ ಮನಃಶಾಂತಿಗಾಗಿ ಮತ್ತು ಮನೆಯ ಅಗತ್ಯಗಳಿಗಾಗಿ ವಿವಿಧ ಗಿಡಗಳನ್ನು ಬೆಳೆಸುತ್ತಾರೆ. ಸ್ವಲ್ಪ ಜಾಗವಿದ್ದರೂ ಅದರಲ್ಲಿ ಗಿಡಗಳನ್ನು ನೆಡುತ್ತಿದ್ದಾರೆ. ನೆಟ್ಟಾಗ ಗಿಡಗಳು ಚೆನ್ನಾಗಿಯೇ ಇರುತ್ತವೆ. ಅದರ ಆರೈಕೆಯ ಬಗ್ಗೆ ಕೆಲವರು ಜಾಗರೂಕರಾಗಿರುತ್ತಾರೆ. ಇನ್ನು ಕೆಲವರು ನಿರ್ಲಕ್ಷ್ಯವಹಿಸುತ್ತಾರೆ. ಋತುಮಾನಗಳಿಗೆ ತಕ್ಕಂತೆ ಗಿಡಗಳ ಆರೈಕೆ ಮಾಡಬೇಕಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ವಿಶೇಷವಾಗಿ ಚಳಿಗಾಲದಲ್ಲಿ ಸಸ್ಯಗಳ ಆರೈಕೆಯ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಆಗ ಮಾತ್ರ ಅವು ಚೆನ್ನಾಗಿ ಬೆಳೆಯುತ್ತವೆ ಎಂದು ವಿವರಿಸುತ್ತಾರೆ. ಹಾಗಾದರೆ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದನ್ನು ತಿಳಿದುಕೊಳ್ಳೋಣ.
- ಚಳಿಗಾಲದಲ್ಲಿ ಸಸ್ಯಗಳ ಬೆಳವಣಿಗೆ ಕಡಿಮೆಯಾಗಿರುತ್ತದೆ. ಇದರಿಂದ ಪ್ರತಿ ಹದಿನೈದು ದಿನಕ್ಕೊಮ್ಮೆ ಎಲುಬಿನ ಗೊಬ್ಬರ ಹಾಗೂ ಕಾಂಪೋಸ್ಟ್ ಗೊಬ್ಬರಗಳನ್ನು ಕಡಿಮೆ ಪ್ರಮಾಣದಲ್ಲಿ ನೀಡಬೇಕು. ಆಗ ಮಾತ್ರ ಗಿಡಗಳು ಆರೋಗ್ಯವಾಗಿ ಬೆಳೆಯುತ್ತವೆ ಎಂದು ತಜ್ಞರು ಹೇಳುತ್ತಾರೆ.
- ಚಳಿಗಾಲದಲ್ಲಿ ಸಸ್ಯಗಳ ಸುತ್ತಲಿನ ಮಣ್ಣು ಒಣದಂತೆ ಗಮನ ಹರಿಸಬೇಕಾಗುತ್ತದೆ. ಅಲ್ಲದೇ, ಇದಕ್ಕೆ ಹೆಚ್ಚು ನೀರು ಹಾಕಬೇಡಿ. ಸಾಕಷ್ಟು ತೇವಾಂಶವನ್ನು ಕಾಪಾಡಿಕೊಳ್ಳಲು ಸಸ್ಯದ ಸುತ್ತಲೂ ಮಲ್ಚಿಂಗ್ ಮಾಡುವುದು ಉತ್ತಮ.
- ಮಲ್ಚಿಂಗ್ ಎಂದರೆ ಸಸ್ಯಗಳ ಸುತ್ತ ಮಣ್ಣನ್ನು ಆವರಿಸುವ ಕ್ರಿಯೆ. ಒಣ ಎಲೆಗಳು, ಹುಲ್ಲು, ಪೀಟ್ ಮಾಸ್, ಕಾಂಪೋಸ್ಟ್, ಭತ್ತದ ಹುಲ್ಲು, ಕಬ್ಬಿನ ಬಾಳೆ, ತೆಂಗಿನ ನಾರು ಮುಂತಾದ ವಸ್ತುಗಳನ್ನು ಗಿಡಗಳ ಸುತ್ತಲೂ ಇಡುವುದರಿಂದ ಮಣ್ಣಿನ ತೇವಾಂಶ ಉಳಿಸಿಕೊಳ್ಳುತ್ತದೆ. ಇದು ಸಸ್ಯಗಳಿಗೆ ಪ್ರಯೋಜನಕಾರಿ ಎಂದು ತಜ್ಞರು ತಿಳಿಸುತ್ತಾರೆ.
- ಕೆಲವು ಸಸ್ಯಗಳು ಯಾವುದೇ ಋತುವಿನಲ್ಲಿ ಬೆಳೆಯುತ್ತವೆ. ಕೆಲವು ಸಸ್ಯಗಳು ಸೂಕ್ಷ್ಮವಾಗಿರುತ್ತವೆ. ಅಂತಹ ಸಸ್ಯಗಳನ್ನು ರಾತ್ರಿಯಲ್ಲಿ ತಂಪಾದ ಗಾಳಿಯಿಂದ ರಕ್ಷಿಸಬೇಕು. ಈ ಉದ್ದೇಶಕ್ಕಾಗಿ ಪ್ಲಾಸ್ಟಿಕ್ ಕವರ್‌ಗಳನ್ನು ಬಳಸಲು ಸೂಚಿಸಲಾಗಿದೆ. ಅವುಗಳನ್ನು ರಾತ್ರಿಯಲ್ಲಿ ಪ್ಲಾಸ್ಟಿಕ್ ಕವರ್‌ಗಳಿಂದ ಮುಚ್ಚಬಹುದು. ಸಸ್ಯಗಳು ಸಾಕಷ್ಟು ಸೂರ್ಯನನ್ನು ಪಡೆಯದಿದ್ದರೆ, ಅವುಗಳಿಗೆ ಕೃತಕ ದೀಪಗಳ ಬೆಳಕನ್ನು ನೀಡಲು ಸೂಚಿಸಲಾಗುತ್ತದೆ.
- ಚಳಿಗಾಲದಲ್ಲಿ ಸಸ್ಯಗಳನ್ನು ಕತ್ತರಿಸಿದರೆ ಅವು ಬೇಗನೇ ಬೆಳೆಯುವುದಿಲ್ಲ ಎಂದು ಹಲವರು ಜನರು ಭಾವಿಸುತ್ತಾರೆ. ನೀವು ಎಲ್ಲ ಒಣಗಿದ ಹೂವುಗಳು ಮತ್ತು ಎಲೆಗಳನ್ನು ಕಾಲಕಾಲಕ್ಕೆ ತೆಗೆದು ಗಿಡಗಳ ಸುತ್ತಲಿನ ಮಣ್ಣನ್ನು ಸ್ವಚ್ಛಗೊಳಿಸಬೇಕು. ಆಗ ಮಾತ್ರ ಅವರು ಆರೋಗ್ಯವಾಗಿರುತ್ತವೆ. ಚಳಿಗಾಲದಲ್ಲಿ ಕೀಟಗಳ ಸಮಸ್ಯೆ ಹೆಚ್ಚು. ಇದಕ್ಕೆ ಪರಿಹಾರವಾಗಿ ಅಡುಗೆ ಸೋಡಾ, ಬೇವಿನ ಎಣ್ಣೆ ಮತ್ತು ನೀರಿನ ಮಿಶ್ರಣವನ್ನು ಆಗಾಗ್ಗೆ ಸ್ಪ್ರೇ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು ಎನ್ನುತ್ತಾರೆ ತಜ್ಞರು.