Instant Curd Making Process:ಮನೆಯಲ್ಲಿ ಊಟದ ಸಮಯದಲ್ಲಿ ತ್ವರಿತವಾಗಿ ಮೊಸರು ಬೇಕಾದಾಗ ನಾವು ಅಂಗಡಿಗಳಿಗೆ ತೆರಳಿ ಖರೀದಿಸುತ್ತೇವೆ. ಇಲ್ಲದಿದ್ದರೆ ಮನೆಯಲ್ಲಿ ಒಂದು ದಿನ ಮುಂಚಿತವಾಗಿ ಹಾಲಿಗೆ ಹೆಪ್ಪು ಹಾಕಿ ಮೊಸರು ತಯಾರಿಸುತ್ತೇವೆ. ಮೊಸರು ತಯಾರಿಸಲು ದಿನವಿಡೀ ಕಾಯಬೇಕಾದ ಅವಶ್ಯಕತೆಯಿಲ್ಲ. ಗಟ್ಟಿಯಾದ ಅಥವಾ ಕೆನೆ ಮೊಸರನ್ನು ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ನೀವು ಹಾಲಿನಿಂದ ಮೊಸರು ಮಾಡಲು ಒಂದು ಸಣ್ಣ ಟ್ರಿಕ್ ಅನ್ನು ಅನುಸರಿಸಬಹುದು. ಗಟ್ಟಿಯಾದ ಮೊಸರು ತಯಾರಿಸಲು ಬೇಕಾಗುವಂತಹ ಸರಳವಾದ ಟಿಪ್ಸ್ ಪಾಲಿಸಿ ನೋಡಿ.
ಕೆನೆ ಮೊಸರು (freepik)
ನೀವು ಎಷ್ಟೇ ರುಚಿಕರವಾದ ಪಲ್ಯಗಳ ತಿಂದರೂ ಕೊನೆಯಲ್ಲಿ ಒಂದು ಗ್ಲಾಸ್ ಮೊಸರು ಅಥವಾ ಮಜ್ಜಿಗೆ ಇಲ್ಲದೆ ಊಟವು ಎಂದಿಗೂ ಪೂರ್ಣಗೊಳ್ಳುವುದಿಲ್ಲ. ಮೊಸರು ಅಥವಾ ಮಜ್ಜಿಗೆ ಇಲ್ಲದಿದ್ದರೆ ಏನೋ ಮಿಸ್ ಆಗಿದೆ ಅನಿಸುತ್ತದೆ. ಹಾಗಾದರೆ, ನೀವು ಚಿಟಿಕೆ ಹೊಡೆಯುವುದರೊಳಗೆ ಗಟ್ಟಿಯಾದ ಮೊಸರು ಮಾಡಬಹುದು.
ಕೆನೆ ಮೊಸರು (ETV Bharat)
ಮೊಸರು ದೇಹದ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ. ಅನೇಕ ಪೋಷಕಾಂಶಗಳಿಂದ ತುಂಬಿರುವ ಮೊಸರು ರುಚಿಕರವಾಗಿದೆ. ದೇಹವನ್ನು ತಂಪಾಗಿಸುತ್ತದೆ. ಸಾಮಾನ್ಯವಾಗಿ ಹಾಲುನೊಂದಿಗೆ ಮೊಸರನ್ನು ಬೆರೆಸಿ ಹೆಪ್ಪು ಹಾಕಿದ ನಂತರ ಗಟ್ಟಿಯಾದ ಮೊಸರು ತಯಾರಿಸಲು ಕನಿಷ್ಠ 8 ಗಂಟೆಗಳು ಬೇಕಾಗುತ್ತದೆ. ಆದ್ರೆ, ಮನೆಯಲ್ಲಿ ತಯಾರಿಸಿದ ಮೊಸರು ಮಾರುಕಟ್ಟೆಯಲ್ಲಿ ಲಭ್ಯವಿರುವ ಮೊಸರಿಗಿಂತ ಗಟ್ಟಿಯಾಗಿರುತ್ತದೆ ಹಾಗೂ ತುಂಬಾ ರುಚಿಕರವಾಗಿರುತ್ತದೆ. ನೀವು ಈ ಟಿಪ್ಸ್ ಪಾಲಿಸಿದರೆ ಸಾಕು 10 ನಿಮಿಷಗಳಲ್ಲೇ ಮೊಸರು ಸಿದ್ಧಪಡಿಸಬಹುದು.
ಕೆನೆ ಮೊಸರು (freepik)
ತ್ವರಿತವಾಗಿ ಮೊಸರು ತಯಾರಿಸಲು ಇಲ್ಲಿವೆ ಟೀಪ್ಸ್:
ಮೊಸರು ಬೇಗ ರೆಡಿಯಾಗಲು ಮೊದಲು ಹಾಲನ್ನು ಒಂದು ಪಾತ್ರೆಯಲ್ಲಿ ಸುರಿಯಿರಿ. ಅದನ್ನು ಒಲೆಯ ಮೇಲೆ ಕಾಯಿಸಬೇಕಾಗುತ್ತದೆ. ಹಾಲನ್ನು ಚೆನ್ನಾಗಿ ಕುದಿಸಿದಷ್ಟೂ ಮೊಸರು ಗಟ್ಟಿಯಾಗಿ ಬರುತ್ತದೆ. ಜೊತೆಗೆ ತುಂಬಾ ರುಚಿಯಾಗಿರುತ್ತದೆ ಎಂಬುದನ್ನು ನೆನಪಿನಲ್ಲಿ ಇಡಬೇಕಾಗುತ್ತದೆ.
ಕುದಿಸಿದ ಹಾಲನ್ನು ಉಗುರು ಬೆಚ್ಚಗಿನ ಸ್ಥಿತಿಗೆ ತಣ್ಣಗಾಗಿಲು ಬಿಡಬೇಕು. ಈಗ ಇದಕ್ಕೆ ಸ್ವಲ್ಪ ಮೊಸರು ಸೇರಿಸಿ. ಮೊಸರು ಹುಳಿಯಾಗಿಲ್ಲದಿದ್ದರೆ, ನೀವು ಹೆಚ್ಚು ಮೊಸರು ಅನ್ನು ಸೇರಿಸಬೇಕಾಗುತ್ತದೆ.
ಹುಳಿಯ ಅಗತ್ಯವಿಲ್ಲದಿದ್ದರೆ, ಸ್ವಲ್ಪ ಕಡಿಮೆ ಮೊಸರು ಸೇರಿಸಬೇಕಾಗುತ್ತದೆ. ಇದೆಲ್ಲವೂ ಸಾಮಾನ್ಯವಾಗಿ ಮೊಸರು ತಯಾರಿಸುವ ಪ್ರಕ್ರಿಯೆಗೆ ಹೋಲುತ್ತದೆ. ಮುಖ್ಯವಾಗಿ ನೀವು 10 ನಿಮಿಷಗಳಲ್ಲಿ ಮೊಸರು ತಯಾರಿಸಬೇಕಾದರೆ, ನೀವು ಈ ಸಲಹೆಯನ್ನು ಪಾಲಿಸಬೇಕಾಗುತ್ತದೆ.
ಕೆನೆ ಮೊಸರು (freepik)
ಮೊಸರು ಹಾಕಿದ ಹಾಲನ್ನು ಮತ್ತೊಂದು ಪಾತ್ರೆಯಲ್ಲಿ ಸುರಿಯಿರಿ ಮತ್ತು ಅದನ್ನು ಅಲ್ಯೂಮಿನಿಯಂ ಫಾಯಿಲ್‌ನಿಂದ ಮುಚ್ಚಬೇಕಾಗುತ್ತದೆ. ಈಗ ಪ್ರೆಶರ್ ಕುಕ್ಕರ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ನೀರು ಸುರಿಯಿರಿ.
ಮೊಸರು ತಯಾರಿಸಲು ಅಲ್ಯೂಮಿನಿಯಂ ಫಾಯಿಲ್‌ನಿಂದ ಮುಚ್ಚಿದ ಪಾತ್ರೆಯನ್ನು ಅದರಲ್ಲಿ ಇರಿಸಿ, ಕುಕ್ಕರ್‌ನ ಸೀಟಿಯನ್ನು ಆಫ್ ಮಾಡುವ ಮೂಲಕ 10 ನಿಮಿಷ ಬೇಯಿಸಬೇಕಾಗುತ್ತದೆ.
ಬಳಿಕ ಒಲೆ ಆಫ್ ಮಾಡಿ ಮೊಸರಿನ ಪಾತ್ರೆಯನ್ನು ತೆಗೆದು ತಣ್ಣಗಾಗಲು ಬಿಡಿ. ಸಂಪೂರ್ಣವಾಗಿ ತಣ್ಣಗಾದ ನಂತರ, ದಪ್ಪ ಮೊಸರು ಸಿದ್ಧವಾಗುತ್ತದೆ. ಇದರ ರುಚಿಯೂ ತುಂಬಾ ಚೆನ್ನಾಗಿರುತ್ತದೆ.