How to Book Rooms in Sabarimala by Online: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವು ದೇಶದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವಾಲಯವು ಪ್ರಸಿದ್ಧ ಅಧ್ಯಾತ್ಮಿಕ ಮತ್ತು ಪುರಾತನ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ಭವ್ಯವಾದ ದೇವಾಲಯವು ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ಅಭಯಾರಣ್ಯದಲ್ಲಿದೆ. ಪ್ರತಿ ವರ್ಷ ಕಾರ್ತಿಕ ಮಾಸದಿಂದ ಮಕರ ಸಂಕ್ರಾಂತಿಯವರೆಗೆ ಅಯ್ಯಪ್ಪ ಸ್ವಾಮಿಯ ದೀಕ್ಷಾ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ.
ಧರ್ಮಿಕ ನಿಯಮಗಳ ಪ್ರಕಾರ, ಭಕ್ತರು 41 ದಿನಗಳ ಕಾಲ ಮಾಲೆ ಧರಿಸಿ ಶಾಸ್ತ್ರೋಕ್ತವಾಗಿ ಭಗವಂತನನ್ನು ಪೂಜಿಸುತ್ತಾರೆ. ಕೊನೆಯ ದಿನ ಇರುಮುಡಿ ಸಮೇತ ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆ ಬೆಟ್ಟಕ್ಕೆ ತೆರಳುತ್ತಾರೆ. ದೂರದ ಊರುಗಳಿಂದ ಹೊರಡುವ ಭಕ್ತರು ಮುಂಗಡವಾಗಿ ಆನ್‌ಲೈನ್‌ನಲ್ಲಿ ದರ್ಶನ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಾರೆ. ಇದಕ್ಕೆ ಫೋಟೋ ಹಾಗೂ ಆಧಾರ್ ಕಾರ್ಡ್ ಸಾಕು.
ಆದರೆ, ಅತಿಥಿಗೃಹಗಳು ಅಥವಾ ಹೋಟೆಲ್‌ಗಳಿಲ್ಲ. ಶಬರಿಮಲೆ ಟ್ರಾವೆನ್ ಕೋರ್ ದೇವಸ್ತಾನಂ ಮಂಡಳಿ... ಭಕ್ತರಿಗೆ ಕೊಠಡಿಗಳ ರೂಪದಲ್ಲಿ ವಸತಿ ವ್ಯವಸ್ಥೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳಿಗೆ ಆನ್‌ಲೈನ್ ಪೋರ್ಟಲ್ ಮೂಲಕ ಮುಂಗಡವಾಗಿ ಕೊಠಡಿ ಕಾಯ್ದಿರಿಸಲು ತಿರುವಾಂಕೂರು ಮಂಡಳಿ ಅವಕಾಶ ಕಲ್ಪಿಸುತ್ತಿದೆ. ಈ ವಿಷಯ ತಿಳಿಯದೇ ಹಲವು ಭಕ್ತರು ಅಲ್ಲಿಗೆ ತೆರಳಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆ ಪರಿಸ್ಥಿತಿಯನ್ನು ತಪ್ಪಿಸಲು ಮುಂಚಿತವಾಗಿ ಕೊಠಡಿ ಕಾಯ್ದಿರಿಸಿಕೊಳ್ಳಿ.