IRCTC Golden Triangle Package:ದೇಶದ ರಾಜಧಾನಿ ದೆಹಲಿಯು ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಇಲ್ಲಿ ಭೇಟಿ ನೀಡಲು ಹಲವು ಐತಿಹಾಸಿಕ ಕಟ್ಟಡಗಳು ಮತ್ತು ಸ್ಥಳಗಳಿವೆ. ಅದಕ್ಕಾಗಿಯೇ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ನೀವು ಸಹ ಆ ಸ್ಥಳಗಳಿಗೆ ಭೇಟಿ ಕೊಡಲು ಬಯಸುತ್ತೀರಾ? ಹಾಗಾದ್ರೆ, ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ನಿಮಗಾಗಿ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ.
ಐಆರ್ಸಿಟಿಸಿ ನಿಮಗಾಗಿ 'ಗೋಲ್ಡನ್ ಟ್ರಯಾಂಗಲ್' (Golden Triangle) ಹೆಸರಿನಲ್ಲಿ ಪ್ರವಾಸ ಪ್ಯಾಕೇಜ್ ಜಾರಿಗೊಳಿಸಿದೆ. ಈ ಪ್ರವಾಸದ ಒಟ್ಟು ಅವಧಿಯು 7 ರಾತ್ರಿಗಳು ಮತ್ತು 8 ಹಗಲುಗಳು ಆಗಿವೆ. ಪ್ಯಾಕೇಜ್‌ನಲ್ಲಿ ಘೋಷಿಸಲಾದ ದಿನಾಂಕಗಳ ಅನ್ವಯ, ಈ ಪ್ರವಾಸವು ಪ್ರತಿ ಬುಧವಾರ ಲಭ್ಯವಿರುತ್ತದೆ. ದೆಹಲಿ, ಜೈಪುರ, ಆಗ್ರಾ ಸೇರಿದಂತೆ ನೀವು ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು. ಪ್ರವಾಸದ ವಿವರಗಳು ಇಲ್ಲಿವೆ ನೋಡೋಣ.
1ನೇ ದಿನ: ಮೊದಲ ದಿನ ರೈಲು ಪ್ರಯಾಣವು (ರೈಲು ಸಂಖ್ಯೆ- 12723) ಹೈದರಾಬಾದ್‌ನಿಂದ ಬೆಳಿಗ್ಗೆ 6ಕ್ಕೆ ಆರಂಭವಾಗುತ್ತದೆ. ಇಡೀ ದಿನ ಪ್ರಯಾಣವಾಗಿರುತ್ತದೆ.
2ನೇ ದಿನ: ಎರಡನೇ ದಿನ ಬೆಳಗ್ಗೆ 8ಕ್ಕೆ ದೆಹಲಿ ರೈಲು ನಿಲ್ದಾಣ ತಲುಪುವುದು. ಅಲ್ಲಿಂದ ಹೋಟೆಲ್ ತಲುಪಿ ಚೆಕ್ ಇನ್ ಮಾಡಿ ಫ್ರೆಶ್ ಆಗಬೇಕಾಗುತ್ತದೆ. ಆ ನಂತರ ದೆಹಲಿಯ ಕುತುಬ್ ಮಿನಾರ್, ಲೋಟಸ್ ಟೆಂಪಲ್ ಹಾಗೂ ಅಕ್ಷರಧಾಮಕ್ಕೆ ಭೇಟಿ ಕೊಡಲಾಗುವುದು. ಅಂದು ರಾತ್ರಿ ಆ ಹೋಟೆಲ್‌ನಲ್ಲಿ ಉಳಿಯಲಾಗುವುದು.
3ನೇ ದಿನ: ಉಪಹಾರದ ನಂತರ ಮೂರನೇ ದಿನ ಕೆಂಪು ಕೋಟೆ, ತಿನ್ಮೂರ್ತಿ ಭವನ, ರಾಜ್ ಘಾಟ್ ಮತ್ತು ಇಂಡಿಯಾ ಗೇಟ್ ಅನ್ನು ವೀಕ್ಷಿಸಲಾಗುವುದು. ಆ ದಿನವೂ ದೆಹಲಿಯಲ್ಲೇ ವಾಸ್ತವ್ಯ ಹೂಡಲಾಗುವುದು.
4ನೇ ದಿನ:ಉಪಹಾರದ ನಂತರ ನಾಲ್ಕನೇ ದಿನ ಚೆಕ್ ಔಟ್ ಮಾಡಿ, ಜೈಪುರಕ್ಕೆ ತೆರಳಲಾಗುವುದು. ಅಲ್ಲಿಗೆ ತಲುಪಿದ ನಂತರ, ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿ, ಹವಾ ಮಹಲ್‌ಗೆ ಭೇಟಿ ಕೊಡಲಾಗುವುದು. ನಂತರ ಶಾಪಿಂಗ್ ಮಾಡಲು ಅವಕಾಶವಿರುತ್ತದೆ. ರಾತ್ರಿ ಅಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ.
5ನೇ ದಿನ:ಐದನೇ ದಿನ ಅಮೀರ್ ಕೋಟೆ, ಜಂತರ್ ಮಂತರ್ ಹಾಗೂ ಸಿಟಿ ಪ್ಯಾಲೇಸ್ನ್ನು ವೀಕ್ಷಿಸಲಾಗುವುದು. ಆ ರಾತ್ರಿ ಜೈಪುರದಲ್ಲಿ ವಾಸ್ತವ್ಯ ಹೂಡಲಾಗುವುದು.