ಕರ್ನಾಟಕ

karnataka

ETV Bharat / lifestyle

ಮಾರುಕಟ್ಟೆಯಲ್ಲಿ ಖರೀದಿಸುವ ಬದಲು ಮನೆಯಲ್ಲೇ ಸಿದ್ಧಪಡಿಸಿ 'ಪಾವ್ ಬಾಜಿ ಮಸಾಲಾ' - PAV BHAJI MASALA RECIPE

Pav Bhaji Masala Recipe: ನಿಮಗೆ ಪಾವ್ ಬಾಜಿ ಅಂದ್ರೆ ತುಂಬಾ ಇಷ್ಟವಾಗುತ್ತದೆಯೇ? ಹಾಗಾದ್ರೆ, ಕೆಲವೇ ನಿಮಿಷಗಳಲ್ಲಿ 'ಪಾವ್ ಬಾಜಿ ಮಸಾಲಾ' ಮಾಡುವುದು ಹೇಗೆ ಎಂಬುದನ್ನು ಕಲಿಯೋಣ.

PAV BHAJI MASALA  HOW TO MAKE PAV BHAJI MASALA  HOMEMADE PAV BHAJI MASALA POWDER  ಪಾವ್ ಬಾಜಿ ಮಸಾಲಾ
ಪಾವ್ ಬಾಜಿ ಮಸಾಲಾ (ETV Bharat)

By ETV Bharat Lifestyle Team

Published : Jan 2, 2025, 3:38 PM IST

Pav Bhaji Masala Recipe:ಪಾವ್ ಬಾಜಿ ಹೆಸರು ಕೇಳಿದರೆ ಸಾಕು ಬಹುತೇಕರ ಬಾಯಲ್ಲಿ ನೀರು ಬರುವುದು ಸಾಮಾನ್ಯ. ಪಾವ್ ಅಂದರೆ ಬನ್ ಹಾಗೂ ಬಾಜಿ ಅಂದರೆ ತರಕಾರಿ. ಇವುಗಳಿಂದ ತಯಾರಿಸಿದ ಪಾವ್ ಬಾಜಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ತುಂಬಾ ಇಷ್ಟವಾಗುತ್ತದೆ. ಹವಾಮಾನವು ತಂಪಾಗಿರುವಾಗ, ಈ ರೆಸಿಪಿಯನ್ನು ತಯಾರಿಸಿ, ಬಿಸಿಯಾಗಿರುವಾಗಲೇ ಸೇವಿಸಿದರೆ ಸಖತ್​ ಅನುಭವ ದೊರೆಯುತ್ತದೆ.

ಈ ಪಾವ್ ಬಾಜಿ ತಯಾರಿಸಲು ಮಸಾಲಾ ಪುಡಿ ಬೇಕಾಗುತ್ತದೆ. ಪಾವ್ ಬಾಜಿ ಮಸಾಲಾ ಪುಡಿಗಾಗಿ ಎಲ್ಲಿಯೂ ಹೋಗಬೇಕಾಗಿಲ್ಲ. ನೀವು ಅದನ್ನು ಮನೆಯಲ್ಲಿಯೇ ಸರಳವಾಗಿ ತಯಾರಿಸಬಹುದು. ಈ ಮಸಾಲೆ ಪುಡಿ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳೇನು? ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

ಪಾವ್ ಬಾಜಿ ಮಸಾಲಾ ಪುಡಿಗೆ ಬೇಕಾಗುವ ಪದಾರ್ಥಗಳು:

  • ಧನಿಯಾ - 3 ಟೀಸ್ಪೂನ್
  • ಜೀರಿಗೆ - ಎರಡೂವರೆ ಚಮಚ
  • ಕಾಳುಮೆಣಸು - 2 ಟೀಸ್ಪೂನ್
  • ಆಮ್ಚೂರ್ ಪುಡಿ (ಮಾವಿನಕಾಯಿ ಪುಡಿ) - 1 ಟೀಸ್ಪೂನ್
  • ಬಡೆಸೋಂಪು - 1 ಟೀಸ್ಪೂನ್
  • ಒಣಮೆಣಸಿನಕಾಯಿ - 12
  • ಲವಂಗ - 10
  • ಏಲಕ್ಕಿ - 4
  • ದಾಲ್ಚಿನ್ನಿ - 3 ಇಂಚಿನ ತುಂಡು
  • ಕಪ್ಪು ಏಲಕ್ಕಿ - 2
  • ಬಿರಿಯಾನಿ ಎಲೆಗಳು - 2
  • ಮರಾಠಿ ಮೊಗ್ಗು - 1
  • ಒಣ ಶುಂಠಿ ಪುಡಿ - ಅರ್ಧ ಚಮಚ

ಪಾವ್ ಬಾಜಿ ಮಸಾಲಾ ಪುಡಿ ತಯಾರಿಸುವ ವಿಧಾನ:

  • ಮೊದಲು ಕಡಾಯಿಯನ್ನು ಒಲೆಯ ಮೇಲೆ ಇಡಬೇಕು. ಅದರೊಳಗೆ ದಾಲ್ಚಿನ್ನಿ, ಮರಾಠಿ ಮೊಗ್ಗು, ಧನಿಯಾ, ಕಪ್ಪು ಏಲಕ್ಕಿ, ಕಾಳುಮೆಣಸು ಮತ್ತು ಬಿರಿಯಾನಿ ಎಲೆಗಳನ್ನು ಒಂದಾದ ನಂತರ ಒಂದರಂತೆ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕಾಗುತ್ತದೆ. ನಂತರ ಅವುಗಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ಪಕ್ಕಕ್ಕೆ ಇಡಿ.
  • ನಂತರ ಅದೇ ಕಡಾಯಿಯಲ್ಲಿ ಲವಂಗ, ಜೀರಿಗೆ, ಮೆಣಸು, ಸೋಂಪು ಹಾಗೂ ಏಲಕ್ಕಿ ಸೇರಿಸಿ, ವಾಸನೆ ಹೋಗುವವರೆಗೆ ಹುರಿದು ಪಕ್ಕಕ್ಕೆ ಇಡಿ.
  • ನಂತರ ಆಮ್ಚೂರ್ ಪುಡಿ ಹಾಗೂ ಒಣ ಶುಂಠಿ ಪುಡಿಯನ್ನು ಕೆಲವು ಹೊತ್ತು ಫ್ರೈ ಮಾಡಿದ ನಂತರ ಸ್ಟೌ ಆಫ್ ಮಾಡಿ.
  • ಈಗ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದರಲ್ಲಿ ಈ ಮೊದಲೇ ಹುರಿದ ಎಲ್ಲಾ ಪದಾರ್ಥಗಳನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
  • ನಂತರ ಈ ಪುಡಿಯನ್ನು ಡಬ್ಬದಲ್ಲಿ ಹಾಕಿ ಗಾಳಿಯಾಡದಂತೆ ಬಾಟಲಿಯಲ್ಲಿ ಸಂಗ್ರಹಿಸಿ ಇಡಿ. ಪಾವ್ ಬಾಜಿ ಮಸಾಲಾ ಪುಡಿ ಈಗ ಸಿದ್ಧವಾಗಿದೆ. ನೀವು ಪಾವ್ ಬಾಜಿ ಪ್ರಿಯರಾಗಿದ್ದರೆ, ಮತ್ತೇಕೆ ತಡ, ಅಗತ್ಯವಿರುವ ಮಸಾಲಾ ಪುಡಿಯನ್ನು ಈ ರೀತಿ ಸುಲಭವಾಗಿ ತಯಾರಿಸಿ.
  • ನಿಮಗೆ ಪಾವ್​ ಬಾಜಿ ಸೇವಿಸಬೇಕು ಅನಿಸಿದರೆ, ಈರುಳ್ಳಿ, ಟೊಮೆಟೊ, ಕ್ಯಾಪ್ಸಿಕಂ, ಆಲೂಗಡ್ಡೆ ಮತ್ತು ಬಟಾಣಿಗಳೊಂದಿಗೆ ಮಾಡಿದ ಬಾಜಿಗೆ ಈ ಮಸಾಲವನ್ನು ಸೇರಿಸಿ. ಆಗ ಪಾವ್​ಗಳನ್ನು ಬೆಣ್ಣೆಯೊಂದಿಗೆ ಹುರಿದು ಬಾಜಿಯೊಂದಿಗೆ ತಿಂದರೆ ಆ ಅನುಭವವೇ ಸೂಪರ್ ಆಗಿರುತ್ತದೆ.

ಇವುಗಳನ್ನೂ ಓದಿ:

ABOUT THE AUTHOR

...view details