ಬಾಯಲ್ಲಿ ನೀರೂರಿಸುವ ಗರಂ 'ಜೀರಿಗೆ ರಸಂ'; ರುಚಿ ಕೂಡ ಭರ್ಜರಿ - JEERA RASAM RECIPE
Jeera Rasam Recipe: ಆರೋಗ್ಯಕರ ಹಾಗೂ ರುಚಿಕರ ಜೀರಿಗೆ ರಸಂ ಸೇವಿಸಿದರೆ ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ಈ ಜೀರಿಗೆ ರಸಂ ಕೆಲವೇ ನಿಮಿಷಗಳಲ್ಲಿ ಹೇಗೆ ಸಿದ್ಧಪಡಿಬೇಕು ಎಂಬುದನ್ನು ನೋಡೋಣ.
Jeera Rasam Recipe:ಕೆಲವರಿಗೆ ಊಟದಲ್ಲಿ ಸಾರು ಅಥವಾ ರಸಂ ಇಲ್ಲದಿದ್ದರೆ ಹೊಟ್ಟೆ ತುಂಬುವುದೇ ಇಲ್ಲ. ಹೆಚ್ಚಿನ ಜನರು ಟೊಮೆಟೊ ರಸಂ, ಬೇಳೆ ಸಾರು ಮತ್ತು ಸಾಂಬಾರ್ ಅನ್ನು ತಯಾರಿಸುತ್ತಾರೆ. ಆದರೆ, ಯಾವಾಗಲೂ ಒಂದೇ ಫ್ಲೇವರ್ನ ರಸಂ ಸೇವಿಸಿದರೆ ಯಾರಿಗಾದರೂ ಬೇಸರ ತರಿಸುತ್ತದೆ. ಇದೀಗ ಈ ಜೀರಿಗೆ ರಸಂ ಒಮ್ಮೆ ಟ್ರೈ ಮಾಡಿ ನೋಡಿ. ಜೀರಿಗೆ ರಸಂ ತುಂಬಾ ರುಚಿಯಾಗಿರುತ್ತದೆ. ನೀವು ಕೂಡ ಹೆಚ್ಚು ಸೇವಿಸಲು ಬಯಸುತ್ತೀರಿ. ಇದಲ್ಲದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ವಿಶೇಷವಾಗಿ ಸಹಾಯಕವಾಗಿದೆ.
ಅಜೀರ್ಣ ಮತ್ತು ಗ್ಯಾಸ್ ಟ್ರಬಲ್ನಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ರಸಂ ಉತ್ತಮ ಆಯ್ಕೆಯಾಗಿದೆ. ಮಕ್ಕಳು ಕೂಡ ಈ ರಸಂ ಜೊತೆಗೆ ಅನ್ನ ಸೇವಿಸಲು ಇಷ್ಟಪಡುತ್ತಾರೆ. ಇದನ್ನು ತಯಾರಿಸುವುದು ತುಂಬಾ ಸುಲಭ. ರಸಂ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳೇನು? ತಯಾರಿಸುವ ಪ್ರಕ್ರಿಯೆ ಹೇಗೆ ಎಂಬುದನ್ನು ನೋಡೋಣ.
ಜೀರಿಗೆ ರಸಂ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:
ಜೀರಿಗೆ - ಒಂದೂವರೆ ಟೀಸ್ಪೂನ್
ತೊಗರಿ ಬೇಳೆ- 1 ಟೀಸ್ಪೂನ್
ಒಣಮೆಣಸಿನಕಾಯಿ - 8 ರಿಂದ 10
ಟೊಮೆಟೊ - 1
ಕರಿಬೇವಿನ ಎಲೆಗಳು - 2 ಚಿಗುರುಗಳು
ಹುಣಸೆಹಣ್ಣು - ನಿಂಬೆ ಗಾತ್ರ
ಅರಿಶಿನ - ಒಂದು ಟೀಸ್ಪೂನ್
ಉಪ್ಪು - ರುಚಿಗೆ ಬೇಕಾಗುವಷ್ಟು
ಒಗ್ಗರಣೆಗಾಗಿ:
ಎಣ್ಣೆ - 2 ಟೀಸ್ಪೂನ್
ಸಾಸಿವೆ - ಒಂದು ಟೀಸ್ಪೂನ್
ಇಂಗು - ಕಾಲು ಟೀಸ್ಪೂನ್
ಕೊತ್ತಂಬರಿ ಸೊಪ್ಪಿನ ಪುಡಿ - 2 ಟೀಸ್ಪೂನ್
ಜೀರಿಗೆ ರಸಂ ತಯಾರಿಸುವ ವಿಧಾನ:
ಇದಕ್ಕಾಗಿ ಮೊದಲು ಜೀರಿಗೆ, ತೊಗರಿಬೇಳೆ ಮತ್ತು ಒಣಮೆಣಸಿನಕಾಯಿ ಒಂದು ಪಾತ್ರೆಯಲ್ಲಿ ಬಟ್ಟಲಿನಲ್ಲಿ ತೆಗೆದುಕೊಂಡು ಸ್ವಚ್ಛವಾಗಿ ತೊಳೆದು 30 ನಿಮಿಷ ಕಾಲ ನೆನೆಸಿಡಿ. ಹಾಗೆಯೇ ಒಂದು ಚಿಕ್ಕ ಬಟ್ಟಲಿನಲ್ಲಿ ಹುಣಸೆ ಹಣ್ಣನ್ನು ನೆನೆಸಿಡಿ. ಅಷ್ಟರಲ್ಲಿ ಅಡುಗೆಗೆ ಬೇಕಾದ ಟೊಮೆಟೊವನ್ನು ಸಣ್ಣಗೆ ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ.
ಅರ್ಧ ಗಂಟೆಯ ನಂತರ ಮಿಕ್ಸಿ ಜಾರ್ ತೆಗೆದುಕೊಂಡು ನೆನೆಸಿದ ಜೀರಿಗೆ ಮಿಶ್ರಣವನ್ನು ಸೇರಿಸಿ ಮತ್ತು ಮೃದುವಾದ ಪೇಸ್ಟ್ ಮಾಡಿ. ಬಳಿಕ ಇದನ್ನು ಮಿಶ್ರಣ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ. ಹಾಗೆಯೇ ನೆನೆಸಿದ ಹುಣಸೆ ಹಣ್ಣಿನಿಂದ ರಸ ತೆಗೆದು ರೆಡಿ ಮಾಡಿ ಇಟ್ಟುಕೊಳ್ಳಿ.
ನಂತರ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಜೀರಿಗೆ ಮಿಶ್ರಣ, ಟೊಮೆಟೊ ಚೂರುಗಳು, ಕರಿಬೇವಿನ ಎಲೆಗಳು, ಹುಣಸೆ ಹಣ್ಣಿನ ರಸ ಮತ್ತು 750 ಎಂಎಲ್ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಅರಿಶಿನ ಹಾಗೂ ಉಪ್ಪು ಸೇರಿಸಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಬಳಿಕ ಪಾತ್ರೆಯನ್ನು ಒಲೆಯ ಮೇಲೆ ಇರಿಸಿ ಮತ್ತು ಅದನ್ನು ಮುಚ್ಚಿ ಮತ್ತು ರಸಂ ಆಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ಅದರ ನಂತರ ಪಾತ್ರೆಯ ಮುಚ್ಚಳವನ್ನು ತೆಗೆದುಹಾಕಬೇಕು. ಒಮ್ಮೆ ಮಿಶ್ರಣ ಮಾಡಿ ಮತ್ತು ಮಧ್ಯಮ ಉರಿಯಲ್ಲಿ 3 ರಿಂದ 4 ನಿಮಿಷಗಳ ಕಾಲ ಕುದಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಪಕ್ಕಕ್ಕೆ ಇಡಿ.
ಈಗ ನಾವು ರಸಂ ರೆಡಿ ಮಾಡಲು ಅಂತಿಮವಾಗಿ ಒಗ್ಗರಣೆ ಹಾಕಬೇಕು. ಚಿಕ್ಕ ಕಡಾಯಿ ಇಟ್ಟು ಎಣ್ಣೆ ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದಾಗ ಸಾಸಿವೆ ಒಗ್ಗರಣೆ ಹಾಕಿ. ಅದರ ನಂತರ ಇಂಗು ಸೇರಿಸಿ ಮತ್ತು ಸ್ವಲ್ಪ ಸಮಯ ಬೇಯಿಸಲು ಬಿಡಿ. ನಂತರ ಕೊತ್ತಂಬರಿ ಸೊಪ್ಪು ಹಾಕಿ ಹುರಿಯಿರಿ.
ಬಳಿಕ ತಕ್ಷಣ ಈ ಒಗ್ಗರಣೆಯನ್ನು ಪ್ರತ್ಯೇಕವಾಗಿ ತಯಾರಿಸಿದ ರಸಂಗೆ ಸೇರಿಸಿ, ಅದನ್ನು ಮುಚ್ಚಿ ಮತ್ತು 30 ಸೆಕೆಂಡುಗಳ ಕಾಲ ಹಾಗೆ ಬಿಡಿ.
ಅದರ ನಂತರ ಕೇವಲ ಬಿಸಿ ಬಿಸಿಯಾಗಿ ಬಡಿಸಿ. ಈ ಬಾಯಲ್ಲಿ ನೀರೂರಿಸುವ 'ಜೀರಿಗೆ ರಸಂ' ರೆಡಿಯಾಗುತ್ತದೆ.
ಇದನ್ನು ಬಿಸಿ ಅನ್ನದ ಜೊತೆಗೆ ಸೇವಿಸಿದರೆ ಅದ್ಭುತ ಅನುಭವ ದೊರೆಯುತ್ತದೆ. ನಿಮಗೆ ಇಷ್ಟವಾದರೆ, ಈ ಅಡುಗೆಯನ್ನು ಪ್ರಯತ್ನಿಸಿ.