IRCTC Madhya Pradesh Jyotirlinga Darshan Package:ಈಗಾಗಲೇ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಅನೇಕರು ಈ ವರ್ಷ ಪೂರ್ತಿ ಖುಷಿ ಖುಷಿಯಾಗಿ ಬದುಕಲು ಬಯಸಿದ್ದಾರೆ. ವರ್ಷದ ಆರಂಭದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ದೇಶದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲು ಪ್ಲಾನ್ ಮಾಡುತ್ತಿದ್ದಾರೆ. ನೀವೂ ಅಂತಹ ಯೋಜನೆಗಳ ಬಗ್ಗೆ ಯೋಚನೆ ಮಾಡುತ್ತಿದ್ದೀರಾ? ಹಾಗಾದರೆ, ಈ ಹೊಸ ವರ್ಷದ ಹಿನ್ನೆಲೆ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಒಂದೇ ಪ್ರವಾಸದಲ್ಲಿ ಎರಡು ಜ್ಯೋತಿರ್ಲಿಂಗಗಳ ದರ್ಶನ ಮಾಡಬಹುದು. ಈ ಪ್ರವಾಸದ ಪ್ಯಾಕೇಜ್ ಯಾವುದು? ಟೂರ್ ಪ್ಯಾಕೇಜ್ನ ದರ ಎಷ್ಟು? ಯಾವೆಲ್ಲಾ ಪ್ರವಾಸಿ ತಾಣಗಳು ಒಳಗೊಂಡಿದೆ ಎಂಬುದರ ವಿವರಗಳನ್ನು ತಿಳಿಯೋಣ.
ಮಧ್ಯಪ್ರದೇಶದಲ್ಲಿ ಎರಡು ಜ್ಯೋತಿರ್ಲಿಂಗಗಳಿವೆ. ಒಂದು ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಮತ್ತು ಎರಡನೆಯದು ಓಂಕಾರೇಶ್ವರ ದೇವಸ್ಥಾನ. ಇವೆರಡರ ಜೊತೆಗೆ ಇತರ ದೇವಾಲಯಗಳು ಹಾಗೂ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು. ಐಆರ್ಸಿಟಿಸಿ 'ಮಧ್ಯಪ್ರದೇಶ ಜ್ಯೋತಿರ್ಲಿಂಗ ದರ್ಶನ' ಎಂಬ ಹೆಸರಿನಲ್ಲಿ ಈ ಟೂರ್ ಪ್ಯಾಕೇಜ್ನ್ನು ತಂದಿದೆ. ಈ ಪ್ರವಾಸವು ಒಟ್ಟು ಐದು ರಾತ್ರಿಗಳು ಮತ್ತು ಆರು ಹಗಲುಗಳಾಗಿರುತ್ತದೆ. ಈ ರೈಲು ಪ್ರಯಾಣವು ಪ್ರತಿ ಬುಧವಾರದಂದು ನಿಗದಿಪಡಿಸಿದ ದಿನಾಂಕಗಳಲ್ಲಿ ಲಭ್ಯವಿರುತ್ತದೆ.
ಪ್ರವಾಸದ ಸಂಪೂರ್ಣ ವಿವರ:
1ನೇ ದಿನ:ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ: 12707) ಮೊದಲ ದಿನ ಸಂಜೆ 4:40ಕ್ಕೆ ಕಾಚಿಗುಡದಿಂದ ಹೊರಡುತ್ತದೆ. ಇಡೀ ಪ್ರಯಾಣವು ರಾತ್ರಿ ನಡೆಯುತ್ತದೆ.
2ನೇ ದಿನ:ಎರಡನೇ ದಿನ ಬೆಳಿಗ್ಗೆ 8:15ಕ್ಕೆ ಭೋಪಾಲ್ ರೈಲು ನಿಲ್ದಾಣಕ್ಕೆ ಬಂದು ತಲುಪಲಾಗುವುದು. ಅಲ್ಲಿ ಮೊದಲೇ ಕಾಯ್ದಿರಿಸಿದ ಹೋಟೆಲ್‌ಗೆ ತೆರಳಿ, ಚೆಕ್-ಇನ್ ಮಾಡಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಿ. ನಂತರ ಸಾಂಚಿ ಸ್ತೂಪ, ಭೋಜೇಶ್ವರ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು, ಮತ್ತೆ ಭೋಪಾಲ್‌ಗೆ ತಲುಪಲಾಗುವುದು. ಸಂಜೆ ಬುಡಕಟ್ಟು ವಸ್ತುಸಂಗ್ರಹಾಲಯಕ್ಕೆ ಭೇಟಿ ಕೊಡಲಾಗುವುದು. ಆ ರಾತ್ರಿ ಭೋಪಾಲ್ನಲ್ಲಿ ಉಳಿದುಕೊಳ್ಳಲಾಗುವುದು.
3ನೇ ದಿನ:ಮೂರನೇ ದಿನ ಉಪಹಾರ ಸೇವಿಸಿ, ಉಜ್ಜಯಿನಿಗೆ ಹೊರಡಲಾಗುವುದು. ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿದ ಬಳಿಕ, ಶ್ರೀ ಮಹಾಕಾಳೇಶ್ವರ ದೇವಸ್ಥಾನ, ಹರಸಿದ್ಧಿ ದೇವಸ್ಥಾನ, ಮಂಗಳನಾಥ ದೇವಸ್ಥಾನ, ನವಗ್ರಹ ಶನಿ ಮಂದಿರ, ಶ್ರೀ ಚಿಂತಾಮನ್ ಗಣೇಶ ದೇವಸ್ಥಾನ, ರಾಮ್ ಘಾಟ್, ಉಜ್ಜಯಿನಿಯ ಶ್ರೀ ಗಡ್ಕಾಲಿಕಾ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ಅಂದು ರಾತ್ರಿ ಉಜ್ಜಯಿನಿಯಲ್ಲಿ ವಾಸ್ತವ್ಯ ಹೂಡಲಾಗುವುದು.