IRCTC The Splendors of Dubai Tour:ದುಬೈ ಅಂದ ಕೂಡಲೇ ಪ್ರತಿಯೊಬ್ಬರೂ ಭೇಟಿ ನೀಡಲು ಬಯಸುವಂತಹ ಸುಂದರ ಹಾಗೂ ಅದ್ಭುತ ತಾಣವಾಗಿದೆ. ವಿಶ್ವದ ಅತ್ಯಂತ ಐಷಾರಾಮಿ ಅಂತಾರಾಷ್ಟ್ರೀಯ ನಗರಗಳಲ್ಲಿ ದುಬೈ ಕೂಡ ಒಂದು. ಎತ್ತರದ ಸ್ಕೈಡೈವಿಂಗ್‌ನಿಂದ ಹಿಡಿದು ಮರುಭೂಮಿ ವಿಹಾರದವರೆಗೆ, ತುಂಬಾ ಖುಷಿ ನೀಡುವ ಮನರಂಜನಾ ಚಟುವಟಿಕೆಗಳು ಲಭ್ಯ ಇವೆ. ಇದರಿಂದಲೇ ಹೆಚ್ಚಿನ ಜನರು ದುಬೈಗೆ ತೆರಳಲು ಬಯಸುತ್ತಾರೆ. ನೀವು ಕೂಡ ಇಲ್ಲಿಗೆ ಹೋಗಲು ಬಯಸುತ್ತೀರಾ? ಹಾಗಾದ್ರೆ ದುಬೈಗೆ ಹೇಗೆ ಹೋಗುವುದು? ಜೊತೆಗೆ ಹೆಚ್ಚು ವೆಚ್ಚವಾಗುವ ಯೋಚನೆ ನಿಮಗಿದೆಯೇ? ನಿಮಗಾಗಿ ಐಆರ್‌ಸಿಟಿಸಿ ಅದ್ಭುತ ಟೂರ್ ಪ್ಯಾಕೇಜ್ನ್ನು ತಂದಿದೆ. ದುಬೈ ಪ್ರವಾಸಕ್ಕೆ ತಗುಲುವ ವೆಚ್ಚ ಎಷ್ಟು? ಪ್ರವಾಸವು ಎಷ್ಟು ದಿನಗಳನ್ನು ಒಳಗೊಂಡಿರುತ್ತದೆ? ಯಾವೆಲ್ಲಾ ಸ್ಥಳಗಳನ್ನು ಈ ಪ್ರವಾಸದಲ್ಲಿ ಸೇರಿದೆ ಎಂಬುದನ್ನು ತಿಳಿಯೋಣ.
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ವತಿಯಿಂದ ದಿ ಸ್ಪ್ಲೆಂಡರ್ಸ್ ಆಫ್ ದುಬೈ ಎಂಬ ಹೆಸರಿನ ಪ್ಯಾಕೇಜ್ನ್ನು ಘೋಷಿಸಿದೆ. ಈ ಟೂರ್ ಹೈದರಾಬಾದ್‌ನಿಂದ ಆರಂಭವಾಗುತ್ತದೆ. ಈ ಪ್ರವಾಸದ ಒಟ್ಟು ಅವಧಿಯು 4 ರಾತ್ರಿಗಳು ಹಾಗೂ 5 ಹಗಲು ಸೇರಿವೆ. ಈ ಪ್ಯಾಕೇಜ್‌ನಲ್ಲಿ ದುಬೈ ಮತ್ತು ಅಬುಧಾಬಿಯ ಅನೇಕ ಸ್ಥಳಗಳನ್ನು ಕಂಣ್ತುಕೊಳ್ಳಬಹುದು. ಈ ಪ್ರವಾಸದಲ್ಲಿ 34 ಪ್ರಯಾಣಿಕರ ಗುಂಪನ್ನು ಹೊಂದಿರುತ್ತದೆ. ಟೂರ್ ಮಾಡಲು ಬಯಸುವವರು ಮೊದಲೇ ಬುಕ್ ಮಾಡಿಕೊಳ್ಳಬೇಕಾಗುತ್ತದೆ. ಇದೀಗ ಪ್ರಯಾಣದ ವಿವರಗಳನ್ನು ನೋಡೋಣ..
1ನೇ ದಿನ:ಮೊದಲ ದಿನ ಬೆಳಗ್ಗೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬೇಕಾಗುತ್ತದೆ. ಎಲ್ಲಾ ಪ್ರೋಸಿಜರ್ ಮುಗಿಸಿದ ಬಳಿಕ ದುಬೈಗೆ ತೆರಳಲಿದ್ದಾರೆ. ಮಧ್ಯಾಹ್ನ 1ಕ್ಕೆ ದುಬೈ ತಲುಪಲಾಗುವುದು. ಇಲ್ಲಿನ ಏರ್‌ಪೋರ್ಟ್‌ನಲ್ಲಿ ಎಲ್ಲಾ ಪ್ರೋಸಿಜರ್ ಪೂರ್ಣಗೊಳಿಸಿದ ನಂತರ, ಊಟಕ್ಕೆ ಭಾರತೀಯ ರೆಸ್ಟೋರೆಂಟ್‌ಗೆ ತೆರಳಲಾಗುವುದು. ಊಟದ ಬಳಿಕ, ಮೊದಲೇ ಬುಕ್ ಮಾಡಿದ ಹೋಟೆಲ್‌ಗೆ ಹೋಗಿ ಚೆಕ್-ಇನ್ ಮಾಡಬೇಕು. ನಂತರ ಮಿರಾಕಲ್ ಗಾರ್ಡನ್ ಮತ್ತು ಗ್ಲೋಬಲ್ ವಿಲೇಜ್ ಗೆ ಭೇಟಿ ನೀಡಲಾಗುವುದು. ರಾತ್ರಿಯಲ್ಲಿ ಗ್ಲೋಬಲ್ ವಿಲೇಜ್‌ನಲ್ಲಿ ಭೋಜನ ಪೂರ್ಣಗೊಳಿಸಿದ ಬಳಿಕ ಹೋಟೆಲ್‌ಗೆ ಹಿಂತಿರುಗಿ, ರಾತ್ರಿಯಲ್ಲಿ ಅಲ್ಲಿಯೇ ಉಳಿಯಬೇಕಾಗುತ್ತದೆ.
2ನೇ ದಿನ:ಎರಡನೇ ದಿನ ಉಪಹಾರದ ನಂತರ, ಅರ್ಧ ದಿನ ದುಬೈ ನಗರ ಪ್ರವಾಸವಿರುತ್ತದೆ. ಅದರ ಭಾಗವಾಗಿ ದುಬೈ ಮ್ಯೂಸಿಯಂಗೆ ತೆರಳಲಾಗುವುದು. ಭಾರತೀಯ ರೆಸ್ಟೋರೆಂಟ್‌ನಲ್ಲಿ ಮಧ್ಯಾಹ್ನದ ಊಟ ಸೇವಿಸಬೇಕಾಗುತ್ತದೆ. ಸಂಜೆ ಸಫಾರಿ ಜರುಗಲಿದೆ. ಊಟದ ಬಳಿಕ ಹೋಟೆಲ್ ತಲುಪಿ ಮತ್ತು ರಾತ್ರಿ ಉಳಿಯಬೇಕಾಗುತ್ತದೆ.
3ನೇ ದಿನ:ಮೂರನೇ ದಿನ ಬೆಳಗ್ಗೆ ಉಪಹಾರದ ನಂತರ, ದುಬೈ ಫ್ರೇಮ್ ಮತ್ತು ಭವಿಷ್ಯದ ಮ್ಯೂಸಿಯಂಗೆ ಭೇಟಿ ನೀಡಲಾಗುವುದು. ಭಾರತೀಯ ರೆಸ್ಟೋರೆಂಟ್‌ನಲ್ಲಿ ಮಧ್ಯಾಹ್ನದ ಊಟವಿರುತ್ತದೆ. ಭೋಜನ ನಂತರ ನೀವು ಶಾಪಿಂಗ್ ಮಾಡಬಹುದು. ಧೋ ಕ್ರೂಸ್‌ನಲ್ಲಿ ಭೋಜನ ಇರುತ್ತದೆ. ಅದಾದ ಬಳಿಕ ಹೋಟೆಲ್ ತಲುಪಿ ಆ ರಾತ್ರಿ ತಂಗಬೇಕಾಗುತ್ತದೆ.