ನವದೆಹಲಿ: ಮದುವೆ ಎಂದರೆ ಅಲ್ಲಿ ಸಂಭ್ರಮದ ಜೊತೆಗೆ ಎಲ್ಲಿಂದ ಹೇಗೆ ಶಾಪಿಂಗ್ ಮಾಡಬೇಕು ಎಂಬ ಲೆಕ್ಕಾಚಾರ ಕೂಡಾ ಆರಂಭವಾಗುತ್ತದೆ. ಅದರಲ್ಲೂ ವಧುವೆ ಅನ್ನೋದು ಭಾವನಾತ್ಮಕವಾಗಿ ಇರುವ ಹಿನ್ನಲೆ ಸಣ್ಣ ಸಣ್ಣ ವಸ್ತುಗಳನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡಲಾಗುತ್ತದೆ. ಅದರಲ್ಲೂ ಕೈ ಆಭರಣಗಳು ಒಂದು, ಅದಕ್ಕೆ ಉತ್ತಮ ಮಾರುಕಟ್ಟೆ ಎಂದರೆ ಚಾಂದಿನಿ ಚೌಕ್.
ಮಧುವಿನ ಬಳೆ ಮಾತ್ರವಲ್ಲದೇ, ಉತ್ತರ ಭಾರತದಲ್ಲಿ ಅದರಲ್ಲೂ ಪಂಜಾಬಿ ಮದುವೆಗಳಲ್ಲಿ ಕೈಗೆ ತೊಡುವ ಕಲಿರೆ ಆಭರಣ ಇಲ್ಲಿ ಪ್ರಖ್ಯಾತಿ ಪಡೆದಿದೆ. ಉತ್ತಮ ವಿನ್ಯಾಸದೊಂದಿಗೆ ಸಂಪ್ರದಾಯದ ಜೊತೆಗೆ ಆಧುನಿಕ ಶೈಲಿಯಲ್ಲಿ ಇಲ್ಲಿ ಕಲಿರೆ ಸಿಗುತ್ತದೆ. ಇಲ್ಲಿ ಎಲ್ಲಾ ರೀತಿಯ ಕಲಿರೆಗಳು ಲಭ್ಯವಾಗುವ ಜೊತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ತಕ್ಕಂತೆ ಅದರ ವಿನ್ಯಾಸ ಮಾಡಿರುವುದು ವಿಶೇಷವಾಗಿದೆ.
ಮಧುವಿನ ಸೌಂದರ್ಯ ಹೆಚ್ಚಿಸುವ ಕಲಿರೆ:ದೆಹಲಿ ಚಾಂದಿನಿ ಚೌಕ್ನಲ್ಲಿರುವ ಕಿನರಿ ಬಜಾರ್ನಲ್ಲಿ ಆಕರ್ಷಕ ಕಲಿರೆಗಳು ಲಭ್ಯವಾಗುತ್ತವೆ. ವಿವಿಧ ಮದುವೆ ಸಂಪ್ರದಾಯಗಳಿಗೆ ಅನುಗುಣವಾಗಿ ಇಲ್ಲಿ ಕಿಲಿರೆ ಲಭ್ಯವಾಗುತ್ತದೆ. ಹಿಂದೂ, ಮುಸ್ಲಿ ಸಮುದಾಯದ ನಿಖಾ ಹಾಗೂ ಪಂಜಾಬ್ ಸಮುದಾಯದ ರೀತಿಯ ಕಲಿರೆಗಳು ಇಲ್ಲಿ ಸುಲಭವಾಗಿ ಸಿಗುತ್ತವೆ ಎಂದು ಇಲ್ಲಿನ ಉದ್ಯಮಿ ಪ್ರದೀಪ್ ಜೈನ್ ತಿಳಿಸಿದ್ದಾರೆ.