Tips to getting Ready Kids on Christmas:ಪ್ರಪಂಚದಾದ್ಯಂತ ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸುವ ಸಮಯವು ಸಮೀಪಕ್ಕೆ ಬಂದಿದೆ. ಅನೇಕ ಜನರು ತಮ್ಮ ಮನೆಗಳನ್ನು ಸುಂದರವಾಗಿ ಅಲಂಕಾರ ಮಾಡುತ್ತಾರೆ. ಕ್ರಿಸ್‌ಮಸ್ ಟ್ರೀ ಮತ್ತು ಮನೆಯನ್ನು ಸ್ಟಾರ್ ಚಿಹ್ನೆಗಳಿಂದ ಅಲಂಕರಿಸಲಾಗುತ್ತದೆ. ಅನೇಕ ಜನರು ಚರ್ಚ್‌ಗೆ ಹೋಗಿ ಪ್ರಾರ್ಥಿಸುತ್ತಾರೆ. ಮತ್ತು ಕೇಕ್ ಕತ್ತರಿಸಿ ಕ್ರಿಸ್‌ಮಸ್ ಆಚರಿಸಲು ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸುತ್ತಾರೆ.
ಈ ಹಬ್ಬದಲ್ಲಿ ಮಕ್ಕಳದ್ದೇ ಸದ್ದು ಜೋರಾಗಿಯೇ ಇರುತ್ತದೆ. ಅವರು ಸಾಂಟಾ ಕ್ಲಾಸ್ ಬಂದು ಉಡುಗೊರೆಗಳನ್ನು ನೀಡುತ್ತಾರೆ ಎಂದು ಕಾಯುತ್ತಾರೆ. ಕೆಲವು ಪೋಷಕರು ತಮ್ಮ ಮಕ್ಕಳನ್ನು ಸಾಂಟಾ ಕ್ಲಾಸ್ ಮತ್ತು ದೇವತೆಗಳಂತೆ ರೆಡಿ ಮಾಡುತ್ತಾರೆ. ಮತ್ತು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಜೊತೆಗೆ ನೀವು ನಿಮ್ಮ ಮಕ್ಕಳನ್ನು ಈ ಹಬ್ಬಕ್ಕೆ ಸಿದ್ಧಪಡಿಸಲು ಬಯಸುವಿರಾ? ಅದಕ್ಕಾಗಿ ನಾವು ನಿಮಗಾಗಿ ಕೆಲವು ಸಲಹೆಗಳನ್ನು ತಂದಿದ್ದೇವೆ. ಈ ಟಿಪ್ಸ್ ಅನುಸರಿಸಿ ತಯಾರು ಮಾಡಿದರೆ ಎಲ್ಲರೂ ವ್ಹಾವ್ ಅನ್ನುತ್ತಾರೆ.
ಉಡುಗೆ ಆಯ್ಕೆ:ಕ್ರಿಸ್‌ಮಸ್ ಎಂದರೆ ಹೊಸ ಬಟ್ಟೆ ಇದ್ದೇ ಇರುತ್ತದೆ. ವಿಶೇಷವಾಗಿ ಉಡುಗೆಗಳನ್ನು ಕ್ರಿಸ್‌ಮಸ್ ಥೀಮ್‌ಗೆ ಹೊಂದಿಸಲು ಆಯ್ಕೆ ಮಾಡಲಾಗುತ್ತದೆ. ನೀವು ನಿಮ್ಮ ಮಕ್ಕಳಿಗೂ ಅದನ್ನೇ ತೆಗೆದುಕೊಳ್ಳಬೇಕು. ವಿಶೇಷವಾಗಿ ಸಾಂಟಾ ಕ್ಲಾಸ್ ಉಡುಗೆ ಕೆಂಪು ಮತ್ತು ಬಿಳಿ ಬಣ್ಣಗಳಿಗೆ ಹತ್ತಿರವಾಗುವಂತೆ ಆಯ್ಕೆ ಮಾಡಿಕೊಳ್ಳಿ. ಇಲ್ಲದೇ ಇದ್ದರೆ, ಕ್ರಿಸ್‌ಮಸ್ ಟ್ರೀಯ ಹಸಿರು ಬಣ್ಣದಲ್ಲಿ ಆಯ್ಕೆ ಮಾಡಿದರೆ ಒಳ್ಳೆಯದು. ಅಲ್ಲದೆ, ಅದರ ಮೇಲೆ ಹಿಮದ ಡಿಸೈನ್ನ ಸ್ವೆಟರ್ ಪರಿಪೂರ್ಣವಾಗಿದೆ. ಮತ್ತು ಹುಡುಗಿಯರಿಗೆ ದೇವತೆಗಳಂತೆ ಕಾಣಲು ಬಿಳಿಯ ಗೌನ್ ಮತ್ತು ರೆಕ್ಕೆಗಳನ್ನು ಆಯ್ಕೆ ಮಾಡಿದರೆ ಸೂಪರ್ ಎನ್ನಲಾಗುತ್ತದೆ.