Home Made Boondi Laddu Recipe Making:ಬಾಯಲ್ಲಿಟ್ಟರೆ ಕರಗುವ ಬೂಂದಿ ಲಡ್ಡು ಅನೇಕರಿಗೆ ಇಷ್ಟವಾಗುತ್ತದೆ. ಬೂಂದಿ ಲಡ್ಡು ಯಾವುದೇ ಸಂತೋಷದ ಸಂದರ್ಭದಲ್ಲಂತೂ ಇದ್ದೇ ಇರುತ್ತದೆ. ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿನ ಊಟದಲ್ಲಿ ಬೂಂದಿ ಲಡ್ಡು ಇರುತ್ತದೆ. ಅಗತ್ಯವಿದ್ದಾಗ ಸ್ವೀಟ್ ಅಂಗಡಿಗೆ ಹೋಗಿ ಬೂಂದಿ ಲಡ್ಡು ತರುತ್ತಾರೆ. ಈ ಸರಳವಾದ ಟಿಪ್ಸ್ ಅನುಸರಿಸಿ ಮನೆಯಲ್ಲಿಯೇ ತಯಾರಿಸಿದರೆ ಲಡ್ಡು ಸೂಪರ್ ಟೇಸ್ಟಿ ಆಗಿರುತ್ತದೆ. ಮನೆಯಲ್ಲಿ ಬೂಂದಿ ಲಡ್ಡು ಮಾಡುವುದು ಹೇಗೆ? ಬೂಂದಿ ಲಡ್ಡುಗೆ ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.
ಬೂಂದಿ ಲಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು:
- ಕಡಲೆ ಹಿಟ್ಟು - 1 ಕೆಜಿ
- ನೀರು - ಅಗತ್ಯಕ್ಕೆ ತಕ್ಕಷ್ಟು
- ಎಣ್ಣೆ- ಕರಿಯಲು ಬೇಕಾದಷ್ಟು
ಪಾಕಕ್ಕೆ ಬೇಕಾಗುವ ಪದಾರ್ಥಗಳು:
- ಸಕ್ಕರೆ - 1 ಕೆಜಿ
- ನೀರು - 700 ಮಿಲಿ
- ಏಲಕ್ಕಿ ಪುಡಿ - 1 ಟೀ ಸ್ಪೂನ್
- ನಿಂಬೆ ರಸ - ನಾಲ್ಕು ಹನಿಗಳು