ಕರ್ನಾಟಕ

karnataka

ETV Bharat / lifestyle

ಎಣ್ಣೆ ಇಲ್ಲದೆಯೇ ಪೂರಿ ಸಿದ್ಧಪಡಿಸೋದು ತುಂಬಾ ಸುಲಭ: ತೂಕ ಇಳಿಸಲು ಪ್ರಯತ್ನಿಸುವವರಿಗೆ ಒಳ್ಳೆಯದು!

ಎಣ್ಣೆಯಲ್ಲಿ ಕರಿಯದೇ ಸಾಫ್ಟ್ ಆದ ಪೂರಿಗಳನ್ನು ತುಂಬಾ ಸರಳವಾಗಿ ಸಿದ್ಧಪಡಿಸಬಹುದು. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಈ ಪೂರಿಗಳು ಉತ್ತಮ ಆಯ್ಕೆಯಾಗಿದೆ. ಆಯಿಲ್​ ಫ್ರೀ ಪೂರಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ..

HEALTHY POORI RECIPE  AIR FRYER POORI IN Kannada  HOW TO MAKE POORI WITHOUT FRYING  OIL FREE POORI RECIPE
ಸಾಂದರ್ಭಿಕ ಚಿತ್ರ (ETV Bharat)

By ETV Bharat Lifestyle Team

Published : 4 hours ago

How To Make Poori Without Oil:ಬಹುತೇಕ ಜನರು ಪೂರಿಗಳನ್ನು ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ. ಬೆಳಗಿನ ಉಪಹಾರಕ್ಕಾಗಿ ಬಿಸಿ ಬಿಸಿಯಾದ ಪೂರಿಗಳನ್ನು ಆಲೂ ಕರಿಯೊಂದಿಗೆ ಸೇವಿಸಿದರೆ ರುಚಿಯೂ ಅದ್ಭುತವಾಗಿರುತ್ತೆ. ಈ ಪೂರಿಗಳನ್ನು ಚಿಕನ್ ಹಾಗೂ ಮಟನ್ ಕರಿಗಳ ಜೊತೆಗೆ ಸೇವಿಸಿದರೆ, ಮನೆಯವರೆಲ್ಲರೂ ಇಡೀ ಪಾತ್ರೆಯನ್ನೇ ಖಾಲಿ ಮಾಡುತ್ತಾರೆ. ಎಣ್ಣೆಯಲ್ಲಿ ಕರಿದ ಪೂರಿಗಳನ್ನು ಸೇವಿಸಿದರೆ ವೇಟ್​ ಹೆಚ್ಚಾಗುವ ಭಯ ಕಾಡುತ್ತದೆ. ಆದ್ರೆ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಮತ್ತು ಡಯಟ್ ಮಾಡುತ್ತಿರುವವರಿಗಾಗಿಯೇ ಆಯಿಲ್​ ಫ್ರೀ ಪೂರಿಗಳನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ. ಎಣ್ಣೆಯಿಲ್ಲದ ನಯವಾದ ಪೂರಿಗಳನ್ನು ಸವಿಯಬಹುದು. ಎಣ್ಣೆ ಇಲ್ಲದೆ ಪೂರಿ ಮಾಡುವುದು ಹೇಗೆ? ತಯಾರಿಸುವ ವಿಧಾನಗಳ ಕುರಿತು ಅರಿತುಕೊಳ್ಳೋಣ.

ಆಯಿಲ್​ ಫ್ರೀ ಪೂರಿಗೆ ಬೇಕಾಗುವ ಪದಾರ್ಥಗಳು:

  • ಗೋಧಿ ಹಿಟ್ಟು - ಕಪ್
  • ಮೊಸರು - 2 ಟೀಸ್ಪೂನ್
  • ಉಪ್ಪು- ರುಚಿಗೆ ತಕ್ಕಷ್ಟು
  • ನೀರು - ಅಗತ್ಯಕ್ಕೆ ತಕ್ಕಷ್ಟು

ಆಯಿಲ್​ ಫ್ರೀ ಪೂರಿ ಮಾಡುವುದು ಹೇಗೆ?

  • ಮೊದಲು ಮಿಕ್ಸಿಂಗ್ ಬೌಲ್​ನಲ್ಲಿ ಗೋಧಿ ಹಿಟ್ಟು ಹಾಗೂ ರುಚಿಗೆ ತಕ್ಕಷ್ಟು ಉಪ್ಪುನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
  • ನಂತರ ಹಿಟ್ಟಿಗೆ ಮೊಸರು ಸೇರಿಸಿ, ಮತ್ತೆ ಸರಿಯಾಗಿ ಮಿಶ್ರಣ ಮಾಡಿ.
  • ಈಗ ಹಿಟ್ಟಿಗೆ ಅಗತ್ಯವಿದ್ದಷ್ಟು ನೀರನ್ನು ಅಂದ್ರೆ, ಸ್ವಲ್ಪ ಸ್ವಲ್ಪವೇ ಹಾಕಿ ಕಲಸಿಕೊಳ್ಳಬೇಕು.. ನೀವು ಸಿದ್ಧಪಡಿಸುವ ಹಿಟ್ಟನ್ನು ಚಪಾತಿ ಹಿಟ್ಟಿನ ರೀತಿಯಲ್ಲಿ ಕಲಸಿ.
  • ಹಿಟ್ಟನ್ನು ಮೃದುವಾಗಿ ಬೆರೆಸಿದ ನಂತರ, ಬೌಲ್ ಅನ್ನು ಮುಚ್ಚಿ ಇಡಬೇಕು, 20 ನಿಮಿಷಗಳ ಕಾಲ ಹಾಗೆ ಇಡಿ.
  • ಬಳಿಕ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಇಟ್ಟುಕೊಳ್ಳಬೇಕು. ಚಪಾತಿ ಮಣೆಯ ಮೇಲೆ ಹಿಟ್ಟಿನ ಉಂಡೆಯನ್ನು ಹಾಕಿ ಸ್ವಲ್ಪ ದಪ್ಪಗೆ ಆಗುವಂತೆ ಚಪಾತಿಯ ಲತ್ತುಗುಣಿಯಿಂದ ಪೂರಿಗಳನ್ನು ತಯಾರಿಸಿ ಇಟ್ಟುಕೊಳ್ಳಿ. ಹೀಗೆ ಎಲ್ಲಾ ಪೂರಿಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.
  • ನಂತರ ಒಲೆಯ ಮೇಲೆ ಪಾತ್ರೆ ಇಡಿ ಮತ್ತು 2 ಗ್ಲಾಸ್ ನೀರನ್ನು ಸುರಿಯಿರಿ. ನೀರು ಚೆನ್ನಾಗಿ ಕುದಿಯುವಾಗ, ಪೂರಿಗಳನ್ನು ಅದರೊಳಗೆ ಸೇರಿಸಿ ಮತ್ತು 2 ನಿಮಿಷ ಬೇಯಿಸಲು ಬಿಡಿ.
  • ಪೂರಿಗಳು ನೀರಿನ ಮೇಲೆ ತೇಲಿದ ತಕ್ಷಣವೇ, ಅವುಗಳನ್ನು ತಟ್ಟೆಗೆ ತೆಗೆದುಕೊಳ್ಳಿ. ಎಲ್ಲಾ ಪೂರಿಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಬೇಯಿಸಿ. ನಂತರ ಪಕ್ಕಕ್ಕೆ ಇರಿಸಿ.
  • ಈಗ ನೀರಿನಲ್ಲಿ ಬೇಯಿಸಿದ ಪೂರಿಗಳ ಮೇಲಿನ ತೇವಾಂಶವನ್ನು ಒಣ ಬಟ್ಟೆಯಿಂದ ಒರೆಸಿ ಇಡಬೇಕು.
  • ನಂತರ ಪೂರಿಗಳನ್ನು ಏರ್ ಫ್ರೈಯರ್‌ನಲ್ಲಿ ಹಾಕಿ. ಅವುಗಳನ್ನು 180 ಡಿಗ್ರಿಗಳಲ್ಲಿ ನಾಲ್ಕು ನಿಮಿಷಗಳ ಕಾಲ ತಯಾರಿಸಿ.
  • ಇಷ್ಟಾದರೆ ಸಾಕು, ಸಿಂಪಲ್ ಆಗಿ ಎಣ್ಣೆ ಇಲ್ಲದೆ ಸೂಪರ್ ಟೇಸ್ಟಿ ಪೂರಿ ರೆಡಿ ಆಗುತ್ತವೆ.
  • ಈ ಬಿಸಿ ಬಿಸಿ ಪೂರಿಗಳನ್ನು ಆಲೂ ಕರಿಯೊಂದಿಗೆ ತಿಂದರೆ ರುಚಿಯೂ ಅದ್ಭುತ.
  • ಆಯಿಲ್​ ಫ್ರೀ ಪೂರಿ ನಿಮಗೆ ಇಷ್ಟವಾಗಿದ್ದರೆ ಮನೆಯಲ್ಲಿಯೇ ಒಮ್ಮೆ ಪ್ರಯತ್ನಿಸಿ ನೋಡಿ.

ಇದನ್ನೂ ಓದಿ:ಬಾಯಲ್ಲಿಟ್ಟರೆ ಕರಗುವ ಆಯಿಲ್​ ಫ್ರೀ ಮಿಲ್ಕ್ ಗುಲಾಬ್ ಜಾಮೂನ್: ರೆಡಿ ಮಾಡಲು ಹಿಟ್ಟು- ತುಪ್ಪ ಬೇಕಿಲ್ಲ, ಹಾಲು ಮತ್ತು ಸಕ್ಕರೆ ಇದ್ದರೆ ಸಾಕು!

ABOUT THE AUTHOR

...view details