ಬಾಯಲ್ಲಿ ನೀರೂರಿಸುವ ನೆಲ್ಲಿಕಾಯಿ ಚಟ್ನಿ: ಈ ರೀತಿ ಮಾಡಿದರೆ ವರ್ಷದವರೆಗೆ ಕೆಡಲ್ಲ, ಸಖತ್ ಟೇಸ್ಟಿ ಟೇಸ್ಟಿ!
ನೆಲ್ಲಿಕಾಯಿ ಚೆಟ್ನಿ ಅಂದ್ರೆ ಬಹುತೇಕರಿಗೆ ತುಂಬಾ ಇಷ್ಟವಾಗುತ್ತದೆ. ನಾವು ತಿಳಿಸಿದಂತೆ ಈ ಚಟ್ನಿ ರೆಡಿ ಮಾಡಿದರೆ ಒಂದು ವರ್ಷದವರೆಗೆ ತಡೆಯುತ್ತದೆ. ಟೇಸ್ಟ್ ಕೂಡ ಸೂಪರ್ ಆಗಿರುತ್ತದೆ. ನೆಲ್ಲಿಕಾಯಿ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
How to make gooseberry chutney In Kannada:ಸದ್ಯ ನೆಲ್ಲಿಕಾಯಿ ಮಾರುಕಟ್ಟೆಯಲ್ಲಿ ಅಪಾರ ಪ್ರಮಾಣದಲ್ಲಿ ಬರುತ್ತಿದೆ. ಬಹಳಷ್ಟು ಜನರು ನೆಲ್ಲಿಕಾಯಿಯನ್ನು ಉಪ್ಪಿನಕಾಯಿ ಮತ್ತು ಸೇರಿದಂತೆ ವಿವಿಧ ಖಾದ್ಯಗಳನ್ನು ಮಾಡಲು ಬಳಸುತ್ತಾರೆ. ಈಗ ನಾವು ನೆಲ್ಲಿಕಾಯಿಯಿಂದ ರುಚಿಕರವಾದ ಚಟ್ನಿ ರೆಡಿ ಮಾಡಬಹುದು. ಈ ಚಟ್ನಿಯು ತುಂಬಾ ದಿನಗಳವರೆಗೆ ಕೆಲವು ನಿಯಮಗಳನ್ನು ಅನುಸರಿಸಿ ಸಿದ್ಧಪಡಿಸಬೇಕಾಗುತ್ತದೆ. ಕೆಲವರು ಚಟ್ನಿ ಹೆಚ್ಚು ದಿನಗಳವರೆಗೆ ಉಳಿಯಬೇಕಾದರೆ, ನೆಲ್ಲಿಕಾಯಿಗಳನ್ನು ನೇರವಾಗಿ ಎಣ್ಣೆಯಲ್ಲಿ ಹುರಿಯುತ್ತಾರೆ. ಮತ್ತೊಂದು ಅಡುಗೆ ವಿಧಾನವನ್ನು ಅನುಸರಿಸಿ ವರ್ಷದವರೆಗೆ ಕೆಡದಂತೆ ನೆಲ್ಲಿಕಾಯಿ ಚಟ್ನಿ ಮಾಡುವುದು ಹೇಗೆ? ಅದಕ್ಕೆ ಬೇಕಾದ ಪದಾರ್ಥಗಳೇನು ಎಂಬುದನ್ನು ತಿಳಿಯೋಣ.
ನೆಲ್ಲಿಕಾಯಿ ಚೆಟ್ನಿ ಬೇಕಾಗುವ ಪದಾರ್ಥಗಳೇನು?
ನೆಲ್ಲಿಕಾಯಿ - 250 ಗ್ರಾಂ
ಉಪ್ಪು- ರುಚಿಗೆ ತಕ್ಕಷ್ಟು
ಮಸಾಲೆ- ರುಚಿಗೆ ತಕ್ಕಷ್ಟು
ಅರಿಶಿನ- 1 ಟೀ ಸ್ಪೂನ್
ಕೆಂಪು ಮಣಸಿನಕಾಯಿ- 2
ಕರಿಬೇವಿನ ಎಲೆಗಳು - 2
ಬೆಳ್ಳುಳ್ಳಿ ಎಸಳು - 8
ಎಣ್ಣೆ - 300 ಗ್ರಾಂ
ನಿಂಬೆಹಣ್ಣು - 2
ಸಾಸಿವೆ ಹಾಗೂ ಮೆಂತ್ಯ ಪುಡಿಗೆ:
ಮೆಂತ್ಯ - 1 ಟೀಸ್ಪೂನ್
ಜೀರಿಗೆ - 2 ಟೀಸ್ಪೂನ್
ಸಾಸಿವೆ - 1 ಟೀಸ್ಪೂನ್
ಒಗ್ಗರಣೆಗೆ ಬೇಕಾಗುವ ಸಾಮಗ್ರಿ:
ಸಾಸಿವೆ- 1 ಟೀಸ್ಪೂನ್
ಕೆಂಪುಮೆಣಸಿನಕಾಯಿ - 2
ಬೆಳ್ಳುಳ್ಳಿ ಎಸಳು - 3
ಜೀರಿಗೆ- ಒಂದು ಚಿಟಿಕೆ
ಕರಿಬೇವಿನ ಎಲೆಗಳು - 1
ನೆಲ್ಲಿಕಾಯಿ ಚೆಟ್ನಿ ತಯಾರಿಕೆಯ ವಿಧಾನ:
ಮೊದಲು ನೆಲ್ಲಿಕಾಯಿಗಳನ್ನು ಸ್ವಚ್ಛವಾಗಿ ತೊಳೆಯಿರಿ. ಈ ನೆಲ್ಲಿಕಾಯಿಗಳನ್ನು ಒದ್ದೆಯಾಗದಂತೆ ಒಣ ಬಟ್ಟೆಯಿಂದ ಒರೆಸಿ.
ನಂತರ ನೆಲ್ಲಿಕಾಯಿಯನ್ನು ತುರಿದು ಇಟ್ಟುಕೊಳ್ಳಿ.
ಈಗ ಪಾತ್ರೆಯನ್ನು ಒಲೆಯ ಮೇಲೆ ಇಡಿ. ಸಾಸಿವೆ, ಮೆಂತ್ಯ ಮತ್ತು ಜೀರಿಗೆ ಹಾಕಿ ಕೆಂಪಗಾಗುವವರೆಗೆ ಹುರಿದುಕೊಳ್ಳಿ.
ತಣ್ಣಗಾದ ನಂತರ ಇವುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಒಗ್ಗರಣೆ ನೀಡಲು.. ಒಲೆಯ ಮೇಲೆ ಕಡಾಯಿ ಇಟ್ಟು ಎಣ್ಣೆ ಹಾಕಿಕೊಳ್ಳಿ.
ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಕರಿಮೆಣಸು, ಇಂಗು, ಬೆಳ್ಳುಳ್ಳಿ ಎಸಳು ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ ಗೋಲ್ಡ್ ಬಣ್ಣ ಬರುವರೆಗೆ ಹುರಿಯಿರಿ.
ನಂತರ ಮೊದಲೇ ತುರಿದು ಇಟ್ಟುಕೊಂಡಿರುವ ಮಿಶ್ರಣ ಸೇರಿಸಿ ಹಾಗೂ ಮೂರು ನಿಮಿಷಗಳ ಕಾಲ ಹುರಿದುಕೊಳ್ಳಿ. ಈಗ ಒಲೆ ಆಫ್ ಮಾಡಿ, ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು.
ನಂತರ ಅದಕ್ಕೆ ಬೇಕಾದಷ್ಟು ಉಪ್ಪು, ಖಾರ, ರುಬ್ಬಿದ ಸಾಸಿವೆ, ಮೆಂತ್ಯ ಪುಡಿ ಮತ್ತು ರುಚಿಗೆ ತಕ್ಕಷ್ಟು ಅರಿಶಿನ ಹಾಕಿ ಚೆನ್ನಾಗಿ ಕಲಸಿ.
ಹಾಗೆಯೇ ಎರಡು ನಿಂಬೆಹಣ್ಣಿನ ರಸವನ್ನು ಹಿಂಡಿ.
ಈ ಚಟ್ನಿಯನ್ನು ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಿ ಇಟ್ಟು ಎರಡು ದಿನ ಬಿಡಬೇಕಾಗುತ್ತದೆ.
ಆಗ ಈ ನೆಲ್ಲಿಕಾಯಿ ಚಟ್ನಿ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ.
ನಿಮಗೆ ಇಷ್ಟವಾದರೆ, ನೆಲ್ಲಿಕಾಯಿ ಚಟ್ನಿಯನ್ನು ಒಮ್ಮೆ ಟ್ರೈ ಮಾಡಬಹುದು.