ಕರ್ನಾಟಕ

karnataka

ETV Bharat / lifestyle

ಮನೆಯಲ್ಲಿ ಯಾವುದೇ ತರಕಾರಿ ಇಲ್ಲದ ವೇಳೆ ರೆಡಿ ಮಾಡಿ 'ಹಸಿಮೆಣಸಿನಕಾಯಿ ಈರುಳ್ಳಿ ಚಟ್ನಿ': ರುಚಿ ಕೂಡ ಅದ್ಭುತ - GREEN CHILLI ONION CHUTNEY RECIPE

Green Chilli Onion Chutney: ಮನೆಯಲ್ಲಿ ಯಾವುದೇ ತರಕಾರಿ ಇಲ್ಲದಿದ್ದಾಗ ಏನು ಮಾಡಬೇಕು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಅದಕ್ಕಾಗಿ ನಾವು ನಿಮಗಾಗಿ ಭರ್ಜರಿ ರುಚಿಯ ಹಸಿ ಮೆಣಸಿನಕಾಯಿ ಈರುಳ್ಳಿ ಚಟ್ನಿ ರೆಸಿಪಿಯನ್ನು ತಂದಿದ್ದೇವೆ.

GREEN CHILLI ONION CHUTNEY  GREEN CHILLI ONION CHUTNEY AT HOME  GREEN CHILLI ONION CHUTNEY PROCESS  GREEN CHILLI ONION CHUTNEY
ಹಸಿಮೆಣಸಿನಕಾಯಿ ಈರುಳ್ಳಿ ಚಟ್ನಿ (ETV Bharat)

By ETV Bharat Lifestyle Team

Published : Jan 7, 2025, 5:29 PM IST

How to Make Green Chilli Onion Chutney:ಕೆಲವೊಮ್ಮೆ ಮನೆಯಲ್ಲಿ ಯಾವುದೇ ತರಕಾರಿ ಕೂಡ ಇರುವುದಿಲ್ಲ. ಒಂದು ಕಡೆ ಮಾರುಕಟ್ಟೆಗೆ ಹೋಗಲು ಸಮಯವೂ ಇರುವುದಿಲ್ಲ. ಮತ್ತೊಂದೆಡೆ ಮಕ್ಕಳು ಶಾಲೆಗೆ ತೆರಳಲು ಸಮಯವಾಗುತ್ತದೆ. ಯಾವ ಅಡುಗೆ ರೆಡಿ ಮಾಡಬೇಕು ಎನ್ನುವ ಬಗ್ಗೆ ಯೋಚನೆ ಮಾಡುತ್ತಾ ಇರಬೇಕಾಗುತ್ತದೆ. ಅಂತಹ ಸಮಯದಲ್ಲಿ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಚಟ್ನಿ ಸಿದ್ಧಪಡಿಸಬಹುದು.

ಈ ಚಟ್ನಿಯನ್ನು ಅನ್ನದೊಂದಿಗೆ ಸೇವಿಸಿದರೆ ಸಖತ್​ ಮಜಾ ಬರುತ್ತದೆ. ಈ ಅಡುಗೆ ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಬೇರೆ ಯಾವುದೇ ತರಕಾರಿ ಅಗತ್ಯವಿಲ್ಲದೆ, ಮನೆಯಲ್ಲಿ ಸಿಗುವ ಪದಾರ್ಥಗಳಿಂದಲೇ ಇದನ್ನು ತುಂಬಾ ಸುಲಭವಾಗಿ ಮಾಡಬಹುದು. ಈ ರೆಸಿಪಿಗೆ ಬೇಕಾಗುವ ಪದಾರ್ಥಗಳು ಹಾಗೂ ತಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.

ಹಸಿ ಮೆಣಸಿನಕಾಯಿ ಈರುಳ್ಳಿ ಚಟ್ನಿಗೆ ಬೇಕಾಗುವ ಪದಾರ್ಥಗಳೇನು?:

  • ಹಸಿಮೆಣಸಿನಕಾಯಿ - 15
  • ಈರುಳ್ಳಿ - 1 (ಮಧ್ಯಮ ಗಾತ್ರ)
  • ಹುಣಸೆಹಣ್ಣು - ದೊಡ್ಡ ನಿಂಬೆ ಗಾತ್ರ
  • ಎಣ್ಣೆ - 2 ಟೀಸ್ಪೂನ್
  • ಮೆಂತ್ಯ - ಕಾಲು ಟೀಸ್ಪೂನ್
  • ಧನಿಯಾ ಪುಡಿ - ಅರ್ಧ ಟೀಸ್ಪೂನ್
  • ಜೀರಿಗೆ - ಅರ್ಧ ಟೀಸ್ಪೂನ್
  • ಎಳ್ಳು ಬೀಜಗಳು - 2 ಟೀಸ್ಪೂನ್
  • ಅರಿಶಿನ - ಕಾಲು ಟೀಸ್ಪೂನ್
  • ಕರಿಬೇವಿನ ಎಲೆಗಳು - 2 ಚಿಗುರು
  • ಉಪ್ಪು - ರುಚಿಗೆ ಬೇಕಾಗುವಷ್ಟು
  • ಬೆಳ್ಳುಳ್ಳಿ ಎಸಳು - 15
  • ಜೀರಿಗೆ - ಅರ್ಧ ಟೀಸ್ಪೂನ್
  • ಕೊತ್ತಂಬರಿ ಸೊಪ್ಪು - ಸ್ವಲ್ಪ

ಹಸಿ ಮೆಣಸಿನಕಾಯಿ ಈರುಳ್ಳಿ ಚಟ್ನಿ ತಯಾರಿಸುವ ವಿಧಾನ:

  • ಹಸಿಮೆಣಸಿನಕಾಯಿಗಳನ್ನು ತೆಗೆದುಕೊಂಡು ಮೊದಲು ಸ್ವಚ್ಛವಾಗಿ ತೊಳೆದು ತಟ್ಟೆಯಲ್ಲಿ ತೆಗೆದುಕೊಳ್ಳಿ. ಆದರೆ, ಇಲ್ಲಿ ತುಂಬಾ ಖಾರವಾದ ಹಸಿ ಮೆಣಸಿನಕಾಯಿಯನ್ನು ತೆಗೆದುಕೊಳ್ಳಬೇಡಿ.
  • ನೀವು ಯಾವ ಪ್ರಮಾಣದಲ್ಲಿ ಖಾರವನ್ನು ಸೇವನೆ ಮಾಡುತ್ತೀರಿ ಎಂಬುದರ ಆಧಾರದ ಮೇಲೆ, ನೀವು ಮೆಣಸಿನಕಾಯಿಯನ್ನು ತೆಗೆದುಕೊಳ್ಳಬೇಕು. ಈಗ ಮೆಣಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ಹುರಿದುಕೊಳ್ಳಿ.
  • ಹುಣಸೆ ಹಣ್ಣನ್ನು ತೊಳೆದು ನೀರಿನಲ್ಲಿ ನೆನೆಸಿಡಿ.
  • ಈಗ ಒಲೆ ಆನ್ ಮಾಡಿ ಪಾತ್ರೆಯನ್ನು ಇಡಿ, ಎಣ್ಣೆ ಸುರಿಯಿರಿ. ಎಣ್ಣೆ ಕಾದ ನಂತರ, ಕತ್ತರಿಸಿದ ಹಸಿಮೆಣಸಿನಕಾಯಿಯನ್ನು ಸೇರಿಸಿ. ಇದಕ್ಕೆ ಮೆಂತ್ಯ ಕಾಳು, ಕೊತ್ತಂಬರಿ ಸೊಪ್ಪು ಹಾಗೂ ಜೀರಿಗೆ ಸೇರಿಸಿ ಮಧ್ಯಮ ಉರಿ ಫ್ರೈ ಮಾಡಿ.
  • ನಂತರ ಎಳ್ಳು ಮತ್ತು ಅರಿಶಿನ ಸೇರಿಸಿ ಮತ್ತು ಇನ್ನೊಂದು ನಿಮಿಷ ಫ್ರೈ ಮಾಡಿ. ಕೊನೆಗೆ ಕರಿಬೇವಿನ ಸೊಪ್ಪು ಹಾಕಿ ಹುರಿದು ಪಕ್ಕಕ್ಕೆ ಇಡಿ.
  • ಹಸಿಮೆಣಸಿನಕಾಯಿ ಮಿಶ್ರಣವು ತಣ್ಣಗಾಗುವ ಮೊದಲು, ಈರುಳ್ಳಿಯನ್ನು ಪೀಸ್​ಗಳಾಗಿ ಕತ್ತರಿಸಿ.
  • ತಣ್ಣಗಾದ ಹಸಿಮೆಣಸಿನಕಾಯಿ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮಿಕ್ಸರ್ ಜಾರ್‌ನಲ್ಲಿ ನೆನೆಸಿದ ಹುಣಸೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  • ಬಳಿಕ, ಕತ್ತರಿಸಿದ ಈರುಳ್ಳಿ ಪೀಸ್​ಗಳು, ಬೆಳ್ಳುಳ್ಳಿ ಎಸಳು, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತು ಅವುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ಹೀಗೆ ರುಬ್ಬಿಕೊಂಡು ಚಟ್ನಿಯನ್ನು ಬಟ್ಟಲಿಗೆ ತೆಗೆದುಕೊಂಡು ಬಡಿಸಿದರೆ ಸೂಪರ್ ಟೇಸ್ಟಿಯಾದ ಹಸಿ ಮೆಣಸಿನಕಾಯಿ ಈರುಳ್ಳಿ ಚಟ್ನಿ ಸಿದ್ಧವಾಗುತ್ತದೆ. ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ಈ ಚಟ್ನಿ ಜೊತೆಗೆ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ.

ಇವುಗಳನ್ನೂ ಓದಿ :

ABOUT THE AUTHOR

...view details