HOW TO STUDY WITHOUT FALLING ASLEEP:ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹತ್ತಿರವಿರುವಾಗ ಸಮಯ ಕೂಡ ಕಡಿಮೆ ಇರುತ್ತದೆ. ಓದಲು ಬಹಳಷ್ಟು ವಿಷಯಗಳು ಇರುತ್ತವೆ. ಇದರಿಂದ ಈ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡುವುದು ಸವಾಲಿನ ಕಾರ್ಯವಾಗುತ್ತದೆ. ಕೆಲವರಿಗೆ ಪುಸ್ತಕ ತೆರೆದು ಓದಲು ಕುಳಿತ ತಕ್ಷಣವೇ ನಿದ್ರೆ ಬರುತ್ತದೆ. ಹಾಗಾದ್ರೆ, ಚಿಂತಿಸಬೇಕಾದ ಅಗತ್ಯವಿಲ್ಲ. ಅಧ್ಯಯನ ಮಾಡುವಾಗ ಎಚ್ಚರವಾಗಿರಲು ಮತ್ತು ಗಮನಕೇಂದ್ರೀಕರಿಸಲು ನಿಮಗೆ ಸಹಾಯ ಮಾಡಲು ತಜ್ಞರು, ಕೆಲವು ಸರಳ ಹಾಗೂ ಪರಿಣಾಮಕಾರಿಯಾದ ಸಲಹೆಗಳನ್ನು ನೀಡಿದ್ದಾರೆ. ತಜ್ಞರು ತಿಳಿಸಿದ ಟಾಪ್ ಟೆನ್ ಟಿಪ್ಸ್ ಇಲ್ಲಿವೆ ನೋಡಿ...
1. ಸರಿಯಾದ ಭಂಗಿ ಕುಳಿತುಕೊಳ್ಳಬೇಕು: ಓದಲು ಅನುಕೂಲವಾಗಬಾರದು ಎಂಬ ಉದ್ದೇಶದಿಂದ ಮೇಜಿನ ಮುಂದೆ ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳಿ. ಹಾಸಿಗೆಯ ಮೇಲೆ ಮಲಗಿರುವಾಗ ಅಧ್ಯಯನ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ, ಹಾಸಿಗೆ ಮೇಲೆ ಕುಳಿತು ಓದಿದರೆ, ನಿಮ್ಮ ದೇಹವು ವಿಶ್ರಾಂತಿ ಪಡೆಯುವಂತೆ ಸೂಚಿಸುತ್ತದೆ. ಇದರಿಂದ ನಿಮಗೆ ನಿದ್ರೆ ಬರುತ್ತದೆ. ಆದ್ದರಿಂದ ಇನ್ನು ಆದಷ್ಟು ತಪ್ಪಿಸಬೇಕು.
2. ದೇಹವನ್ನು ಹೈಡ್ರೇಟೆಡ್ ಆಗಿರುವಂತೆ ನೋಡಿಕೊಳ್ಳಿ: ಅಧ್ಯಯನ ಮಾಡುವಾಗ ಆಗಾಗ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುತ್ತಲೇ ಇರಬೇಕು. ಇಲ್ಲದಿದ್ದರೆ, ನಿರ್ಜಲೀಕರಣದಿಂದ ಆಯಾಸ, ತಲೆನೋವು ಹಾಗೂ ಜಾಗರೂಕತೆಯ ಕೊರತೆಗೆ ಕಾರಣವಾಗುತ್ತದೆ.
3. ಸರಿಯಾದ ಬೆಳಕಿರುವ ಕಡೆ ಕುಳಿತುಕೊಳ್ಳಿ:ಹಾಸಿಗೆಯ ಪಕ್ಕದಲ್ಲಿರುವ ದೀಪಗಳ ಮಂದ ಬೆಳಕಿನಲ್ಲಿ ಓದಲು ಕುಳಿತುಕೊಳ್ಳಬಾರದು. ಸರಿಯಾದ ಬೆಳಕಿನಲ್ಲಿ ಅಧ್ಯಯನ ಮಾಡುವುದು ಏಕಾಗ್ರತೆ ಹಾಗೂ ಗಮನಕೇಂದ್ರಿಕರೀಸಲು ಸಹಾಯ ಮಾಡುತ್ತದೆ. ಇದರಿಂದ ಓದಿದ್ದು ಸರಿಯಾಗಿ ನೆನಪಿನಲ್ಲಿ ಉಳಿಯುತ್ತದೆ.
4. ನಿಯಮಿತವಾಗಿ ಉಪಹಾರ, ಊಟ ಸೇವಿಸಿ:ಅಧ್ಯಯನ ಮಾಡುವ ಮೊದಲು ಅತಿಯಾಗಿ ಆಹಾರ ಸೇವಿಸುವುದು ಕೂಡ ಹೆಚ್ಚು ನಿದ್ರೆ ಬರುವಂತೆ ಮಾಡುತ್ತದೆ. ಎಚ್ಚರವಾಗಿರಲು ಮತ್ತು ಚೈತನ್ಯದಿಂದ ಇರಲು ನಿಯಮಿತವಾಗಿ ಉಪಹಾರ, ಊಟ ಸೇವಿಸುವುದು ಒಳ್ಳೆಯದು.
5. ರಾತ್ರಿ ಚೆನ್ನಾಗಿ ನಿದ್ರೆ ಮಾಡಿ: ಹಗಲಿನಲ್ಲಿ ಉಲ್ಲಾಸದಿಂದಿರಲು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕಾಗುತ್ತದೆ. ಬೇಗ ಮಲಗಿ ಹಾಗೂ ಬೇಗ ಎದ್ದೇಳಲು ರೂಢಿ ಮಾಡಿಕೊಳ್ಳಿ. ಇದರಿಂದ ಅಧ್ಯಯನ ಮಾಡುವಾಗ ಮನಸ್ಸು ಶಾಂತವಾಗಿರುತ್ತದೆ. ರಾತ್ರಿ ಚೆನ್ನಾಗಿ ನಿದ್ರೆ ಮಾಡಿದ್ರೆ ಹಗಲಿನಲ್ಲಿ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.