ಕರ್ನಾಟಕ

karnataka

ETV Bharat / lifestyle

ಕಲಬೆರಕೆ ಅಡುಗೆ ಎಣ್ಣೆಯಿಂದ ಆರೋಗ್ಯಕ್ಕೆ ಅಪಾಯ: FSSAI ಹೇಳಿದಂತೆ ಸೆಕೆಂಡುಗಳಲ್ಲಿ ಶುದ್ಧತೆ ಕಂಡುಹಿಡಿಯಿರಿ - COOKING OIL PURITY TEST TIPS

ಕಲಬೆರಕೆ ಅಡುಗೆ ಎಣ್ಣೆ ಬಳಕೆಯಿಂದ ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಅಪಾಯವಿದೆ. ಕಲಬೆರಕೆ ಅಡುಗೆ ಎಣ್ಣೆಯನ್ನು ಪತ್ತೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

COOKING OIL PURITY TEST TIPS  TIPS TO FIND COOKING OIL PURITY  HOW TO FIND PURITY OF COOKING OIL  HOW TO FIND ADULTERATION OF OIL
ಸಾಂದರ್ಭಿಕ ಚಿತ್ರ (ETV Bharat)

By ETV Bharat Lifestyle Team

Published : 4 hours ago

How To Find Purity Of Cooking Oil:ಬಹುತೇಕ ಆಹಾರ ಮತ್ತು ಅಗತ್ಯ ಪದಾರ್ಥಗಳು ಇಂದು ಕಲಬೆರಕೆಯಾಗುತ್ತಿವೆ. ಅಕ್ರಮ ವಿಧಾನಗಳ ಮೂಲಕ ಹಾಲು, ನೀರು, ಎಣ್ಣೆ ಕೂಡ ವಿಷವಾಗಿ ಪರಿಣಮಿಸಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಾವು ಬಳಸುವ ಅಡುಗೆ ಎಣ್ಣೆಗಳು ಶುದ್ಧವಾಗಿದೆಯೇ? ಎಂಬ ಸಂದೇಹ ಬಂದರೆ ಅದನ್ನು ಚೆಕ್​ ಮಾಡುವುದು ಹೇಗೆ ಎಂಬುದನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತಿಳಿಸಿಕೊಟ್ಟಿದೆ.

ಅಡುಗೆ ಎಣ್ಣೆಯಲ್ಲಿ ಮುಖ್ಯವಾಗಿ 'ಟ್ರೈ-ಆರ್ಥೋ-ಕ್ರೆಸಿಲ್-ಫಾಸ್ಫೇಟ್' ಎಂಬ ರಾಸಾಯನಿಕ ಬಳಸಿ ಕಲಬೆರಕೆ ಮಾಡಲಾಗುತ್ತದೆ. ಇದು ಮುಖ್ಯವಾಗಿ ರಂಜಕ ಹೊಂದಿರುವ ಕೀಟನಾಶಕ. ಕಲಬೆರಕೆ ಎಣ್ಣೆಯ ಬಳಕೆಯಿಂದ ನರಮಂಡಲದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ ಹಾಗೂ ಪಾರ್ಶ್ವವಾಯು ಸೇರಿದಂತೆ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚು ಎಂದು ತಜ್ಞರು ತಿಳಿಸುತ್ತಾರೆ. ಯಾವ ಅಡುಗೆ ಎಣ್ಣೆ ಶುದ್ಧ ಯಾವುದು ಕಲಬೆರಕೆ ಎಂಬುದನ್ನು ಒಂದು ಚಿಕ್ಕ ಪರೀಕ್ಷೆಯಿಂದ ತಿಳಿದುಕೊಳ್ಳೋಣ ಬನ್ನಿ.

  • ಮೊದಲು ಸಣ್ಣ ಪಾತ್ರೆಯಲ್ಲಿ ಎರಡು ಮಿಲಿ ಲೀಟರ್​ ಎಣ್ಣೆ ತೆಗೆದುಕೊಳ್ಳಿ.
  • ಅದರೊಳಗೆ ಹಳದಿ ಬಣ್ಣದ ಬೆಣ್ಣೆ ಸೇರಿಸಿ.
  • ಸ್ವಲ್ಪ ಸಮಯದ ನಂತರ ಪಾತ್ರೆಯಲ್ಲಿರುವ ಎಣ್ಣೆಯ ಬಣ್ಣ ಬದಲಾಗದಿದ್ದರೆ, ಅದು ಶುದ್ಧ ಎಣ್ಣೆ. ಇದರರ್ಥ ಇದು ಟ್ರೈ-ಆರ್ಥೋ-ಕ್ರೆಸಿಲ್-ಫಾಸ್ಫೇಟ್ ಅನ್ನು ಹೊಂದಿರುವುದಿಲ್ಲ.
  • ಅದೇ ಎಣ್ಣೆ ಕೆಂಪು ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದು ತಿಳಿಯಬೇಕು. ಈ ಅಡುಗೆ ಎಣ್ಣೆಯನ್ನು ಬಳಸದಿರುವುದು ಒಳ್ಳೆಯದು.

ತೆಂಗಿನೆಣ್ಣೆಯಲ್ಲಿನ ಕಲಬೆರಕೆ ಕಂಡುಹಿಡಿಯೋದು ಹೇಗೆ?: ತೆಂಗಿನ ಎಣ್ಣೆಯನ್ನು ಅನೇಕ ಜನರು ಅಡುಗೆಗೆ ಬಳಸುತ್ತಾರೆ. ಇದಲ್ಲದೆ, ಇದು ಚರ್ಮ ಮತ್ತು ಕೂದಲಿನ ಆರೈಕೆಗೆ ಹೆಚ್ಚು ಉಪಯುಕ್ತ. ಆದರೆ, ಇದೂ ಕೂಡಾ ಇತರ ಎಣ್ಣೆಗಳೊಂದಿಗೆ ಕಲಬೆರಕೆಯಾಗುತ್ತಿದೆ. ಕಲಬೆರಕೆಯನ್ನು ಹೇಗೆ ಗುರುತಿಸುವುದು ಎಂಬುದನ್ನು ನೋಡೋಣ.

  • ಮೊದಲು ಒಂದು ಲೋಟದಲ್ಲಿ ತೆಂಗಿನ ಎಣ್ಣೆ ತೆಗೆದುಕೊಳ್ಳಿ.
  • ಈಗ ಲೋಟ​ವನ್ನು ಫ್ರಿಜ್ಡ್​ನಲ್ಲಿ 30 ನಿಮಿಷಗಳ ಕಾಲ ಇರಿಸಿ. ಅದನ್ನು ಮಂಜು ನಿರ್ಮಾಣವಾಗುವ ಸ್ಥಳ (ಫ್ರೀಜರ್‌)ದಲ್ಲಿ ಇಡಬೇಡಿ.
  • ಅದರ ನಂತರ, ನೀವು ಲೋಟ ನೋಡಿದಾಗ ಯಾವುದೇ ತೈಲ ಮೇಲಕ್ಕೆ ಬರದೇ ಇದ್ದರೆ, ಅದು ಶುದ್ಧ ತೆಂಗಿನ ಎಣ್ಣೆಯಾಗಿ ಹೊರಹೊಮ್ಮುತ್ತದೆ.
  • ಅದೇ ಎಣ್ಣೆಯನ್ನು ಕಲಬೆರಕೆ ಮಾಡಿದರೆ, ಅದರಲ್ಲಿ ಬಳಸಿದ ತೈಲಗಳು ಮೇಲಕ್ಕೆ ತೇಲುತ್ತವೆ. ಉಳಿದ ಕೊಬ್ಬರಿ ಎಣ್ಣೆ ಗಟ್ಟಿಯಾಗುತ್ತದೆ.

ಇದನ್ನೂ ಓದಿ:ಗುಲಾಬಿ ಚಹಾ ಗೊತ್ತೇ?: ಇದನ್ನು ಹೀಗೆ ತಯಾರಿಸಿ, ಆರೋಗ್ಯ ಲಾಭಗಳು ಹಲವು

ABOUT THE AUTHOR

...view details