Chilli Tamarind Chutney Recipe:ಕೇವಲ ಐದರಿಂದ ಹತ್ತೇ ನಿಮಿಷದಲ್ಲಿ ಸಿದ್ಧಪಡಬಹುದಾದ ರೆಸಿಪಿಯನ್ನು ನಾವಿಂದು ನಿಮಗಾಗಿ ತಂದಿದ್ದೇವೆ. ಒಲೆ ಹೊತ್ತಿಸದೆ, ಎಣ್ಣೆ ಬಳಸದೆ ಕೆಲವೇ ನಿಮಿಷಗಳಲ್ಲಿ ಸಖತ್ ಟೇಸ್ಟಿಯಾದ 'ಮೆಣಸಿನಕಾಯಿ ಹುಣಸೆಹಣ್ಣಿನ ಚಟ್ನಿ' ರೆಡಿ ಮಾಡಬಹುದು.
ಬೇಕಾಗುವ ಪದಾರ್ಥಗಳು:
- ಹುಣಸೆಹಣ್ಣು - ನಿಂಬೆ ಗಾತ್ರದಷ್ಟು
- ಹಸಿ ಮೆಣಸಿನಕಾಯಿ - ಐದು (ಬ್ಯಾಡಗಿ ಮೆಣಸಿನಕಾಯಿ)
- ದೊಡ್ಡ ಗಾತ್ರದ ಒಂದು ಈರುಳ್ಳಿ
- ಬೆಳ್ಳುಳ್ಳಿ ಎಸಳು - ಐದು
- ಉಪ್ಪು - ರುಚಿಗೆ ತಕ್ಕಷ್ಟು
- ಜೀರಿಗೆ- ಸ್ವಲ್ಪ
- ಕೊತ್ತಂಬರಿ ಸೊಪ್ಪಿನ ಪುಡಿ- ಸ್ವಲ್ವ