BEST COLOURS TO WEAR ON NEW YEAR:ಹೊಸ ವರ್ಷ (2025) ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತದೆ. ಅನೇಕರು ಜನವರಿ 1ರಂದು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಅವರು ನೆಚ್ಚಿನ ಬಣ್ಣದ ಉಡುಪುಗಳನ್ನು ಧರಿಸುತ್ತಾರೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆನಂದಿಸುತ್ತಾರೆ. ವರ್ಷಪೂರ್ತಿ ಒಳ್ಳೆಯದಾಗಲಿ ಎಂದು ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆಯುತ್ತದೆ. ಆದರೆ, ಹೊಸ ವರ್ಷದ ದಿನದಂದು ಈ ಬಣ್ಣವನ್ನು ಧರಿಸಿದರೆ ವರ್ಷವಿಡೀ ಅದೃಷ್ಟ ಮತ್ತು ಸಂಪತ್ತು ಸಿಗುತ್ತದೆ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ಮಾಚಿರಾಜು ಕಿರಣ್ ಕುಮಾರ್. ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ.
2025ರ ಜನವರಿ 1ನೇ ತಾರೀಖು ಬುಧವಾರ ಬಂದಿದೆ. ಆ ವಾರದ ಅಧಿಪತಿ ಬುಧ. ಬುಧವು ನವಗ್ರಹಗಳಲ್ಲಿ ಹಸಿರು ಬಣ್ಣದಲ್ಲಿ ಹೊಳೆಯುತ್ತದೆ. ಹಾಗಾಗಿ ಹೊಸ ವರ್ಷದ ಮೊದಲ ದಿನ ಹಸಿರು ಬಣ್ಣದ ಉಡುಪಿ ಧರಿಸಿದರೆ ಒಳ್ಳೆಯದು ಎಂದು ಮಾಚಿರಾಜು ತಿಳಿಸುತ್ತಾರೆ. ಈ ಕಲರ್ ಡ್ರೆಸ್ ಧರಿಸಲು ಸಾಧ್ಯವಾಗದವರು ಕನಿಷ್ಠ ಹಸಿರು ಬಣ್ಣದ ಕರ್ಚೀಫ್ ಆದ್ರೂ ಇಟ್ಟುಕೊಳ್ಳಲು ಸಲಹೆ ನೀಡುತ್ತಾರೆ. ಇದರಿಂದ ಬುಧ ಬಲ ಹೆಚ್ಚುತ್ತದೆ ಎಂದು ಮಾಚಿರಾಜು ಹೇಳುತ್ತಾರೆ.
ವರ್ಷದ ಮೊದಲ ದಿನ ಯಾವ ಬಣ್ಣ ಬೆಸ್ಟ್:ಜನವರಿ 1ರಂದು ಹಸಿರು ಬಟ್ಟೆಯ ಹೊರತಾಗಿ ಬೇರೆ ಬಣ್ಣದ ಬಟ್ಟೆಗಳನ್ನೂ ಧರಿಸಬಹುದು ಎಂದು ತಿಳಿಸುತ್ತಾರೆ ಮಾಚಿರಾಜು ಕಿರಣ್. ಜ್ಯೋತಿಷ್ಯದ ಪ್ರಕಾರ, ನೀವು ಹಸಿರು ಬಣ್ಣವನ್ನು ಧರಿಸಿದರೆ, ಸಂಖ್ಯಾಶಾಸ್ತ್ರದ ಪ್ರಕಾರ ನೀವು ಇನ್ನೊಂದು ಬಣ್ಣವನ್ನು ಧರಿಸಬಹುದು. ಜನವರಿ 1, 2025 ಎಂದರೆ, 0+1+0+1+2+0+2+5=11, 1+1=2. ಇದನ್ನು ಡೆಸ್ಟಿನಿ ಸಂಖ್ಯೆ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ ಲಗ್ನದಷ್ಟೇ ಮಹತ್ವವಿದೆ ಎಂದು ಅವರು ತಿಳಿಸುತ್ತಾರೆ.