ಚಳಿಗಾಲದ ಸೂಪರ್ ರೆಸಿಪಿ: ಘಮಘಮಿಸುವ ರುಚಿಕರ ಅಜವಾನ ರಸಂ ಬಗ್ಗೆ ನಿಮಗೆ ಗೊತ್ತೇ? - AJWAIN RASAM RECIPE
Ajwain Rasam Recipe: ಚಳಿಗಾಲದಲ್ಲಿ ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರೆ, ನಿಮಗಾಗಿ ಇಲ್ಲಿದೆ ನೋಡಿ ಮಸಾಲೆಯುಕ್ತ ಮನೆ ಮದ್ದು ಅಜವಾನ ರಸಂ. ಇದೀಗ ಅಜವಾನ ರಸಂ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ..
Ajwain Rasam Recipe:ಚಳಿಗಾಲದಲ್ಲಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಶೀತ, ಕೆಮ್ಮು ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚು ತೊಂದರೆ ಕೊಡುತ್ತವೆ. ಇಂತಹ ಸಮಯದಲ್ಲಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಈ ಅಜವಾನದ ರಸಂ ತಯಾರಿಸಿ ತಿಂದರೆ ಒಳ್ಳೆಯ ಫಲಿತಾಂಶ ಲಭಿಸುತ್ತದೆ. ಅದರಲ್ಲೂ ಮುಖ್ಯವಾಗಿ ನಾನ್ವೆಜ್ ಸೇವಿಸಿದ ನಂತರ, ಈ ರಸಂ ಸೇವಿಸಿದರೆ ಸಾಕು, ಆಹಾರ ಸಲೀಸಾಗಿ ಜೀರ್ಣವಾಗುವುದರ ಜೊತೆಗೆ ದೇಹವೂ ಹಗುರವಾಗುತ್ತದೆ.
ಅಲ್ಲದೆ ಅಜವಾನ ರಸಂ ತಿನ್ನುವುದರಿಂದ ನೆಗಡಿ, ಕೆಮ್ಮು, ವಾಕರಿಕೆ ಮುಂತಾದ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಇದಲ್ಲದೆ, ಈ ರಸಂ ತಯಾರಿಸಲು ನೀವು ಹೆಚ್ಚು ಸಮಯ ವಿನಿಯೋಗಿಸುವ ಅಗತ್ಯವಿಲ್ಲ. ಅತಿ ಕಡಿಮೆ ಸಮಯದಲ್ಲಿ ಈ ರಸಂ ಅನ್ನು ಸಿದ್ಧಪಡಿಸಬಹುದು. ಇದೀಗ ಈ ಆರೋಗ್ಯಕರ ಹಾಗೂ ಟೇಸ್ಟಿ ಅಜವಾನ ರಸಂ ರೆಡಿ ಮಾಡಲು ಬೇಕಾಗುವ ಪದಾರ್ಥಗಳೇನು? ಈ ರಸಂ ಉತ್ಪಾದನಾ ಪ್ರಕ್ರಿಯೆ ಹೇಗೆ ಎಂಬುದನ್ನು ನೋಡೋಣ.
ಅಜವಾನ ರಸಂ ರೆಡಿ ಮಾಡಲು ಬೇಕಾಗುವ ಪದಾರ್ಥಗಳು:
ಅಜವಾನ ರಸಂ ಪೌಡರ್ಗಾಗಿ:
ಅಜವಾನ - 1 ಟೀಸ್ಪೂನ್
ಒಣಮೆಣಸಿನಕಾಯಿ - 2
ಕೊತ್ತಂಬರಿ - 1 ಟೀಸ್ಪೂನ್
ಜೀರಿಗೆ - ಒಂದು ಟೀಸ್ಪೂನ್
ರಸಂ ಮಾಡಲು ಬೇಕಾಗುವ ಸಾಮಗ್ರಿ:
ಎಣ್ಣೆ - 1 ಟೀಸ್ಪೂನ್
ಮೆಂತ್ಯ - ಒಂದು ಟೀಸ್ಪೂನ್
ಸಾಸಿವೆ - ಒಂದು ಟೀಸ್ಪೂನ್
ಜೀರಿಗೆ - ಒಂದು ಟೀಸ್ಪೂನ್
ಬೆಳ್ಳುಳ್ಳಿ ಎಸಳು - 4
ಒಣಮೆಣಸಿನಕಾಯಿ - 1
ಹಸಿಮೆಣಸಿನಕಾಯಿ - 2
ಹುಣಸೆಹಣ್ಣು - ನಿಂಬೆ ಗಾತ್ರ
ಅರಿಶಿನ - ಕಾಲು ಟೀಸ್ಪೂನ್
ಕಲ್ಲು ಉಪ್ಪು - ರುಚಿಗೆ
ಕರಿಬೇವಿನ ಎಲೆಗಳು - 2 ಚಿಗುರುಗಳು
ಅಜವಾನ ರಸಂ ತಯಾರಿಸುವ ವಿಧಾನ:
ಇದಕ್ಕಾಗಿ ಮೊದಲು ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ ಜೀರಿಗೆ, ಕರಿಮೆಣಸು, ಕೊತ್ತಂಬರಿ ಸೊಪ್ಪು ಹಾಗೂ ಜೀರಿಗೆಯನ್ನು ಹಾಕಿ ಸಣ್ಣಗೆ ಪುಡಿ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ.
ಈಗ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಸ್ವಲ್ಪ ಬಿಸಿಯಾದ ಬಳಿಕ ಸಾಸಿವೆ ಹಾಗೂ ಮೆಂತ್ಯ ಹಾಕಿ ಹುರಿಯಿರಿ. ಜೀರಿಗೆ, ರುಬ್ಬಿದ ಬೆಳ್ಳುಳ್ಳಿ ಎಸಳು ಹಾಗೂ ಒಣಮೆಣಸಿನಕಾಯಿ ಸೇರಿಸಿ ಸ್ವಲ್ಪ ಸಮಯ ಫ್ರೈ ಮಾಡಿಕೊಳ್ಳಿ.
ಬಳಿಕ 250ಎಂಎಲ್ ಹುಣಸೆ ರಸ, ಅರಿಶಿನ, ಕಲ್ಲು ಉಪ್ಪು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
ನಂತರ 250 ಮಿಲಿ ನೀರು ಮತ್ತು ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡ ಅಜವಾನ ರಸಂ ಪುಡಿಯನ್ನು ಸೇರಿಸಿ ಹಾಗೂ ಮಧ್ಯಮ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಬೇಕಾಗುತ್ತದೆ.
ನಂತರ ಒಲೆ ಆಫ್ ಮಾಡಿ ಹಾಗೂ ಬಿಸಿಯಾಗಿ ಬಡಿಸಿ. ಆಗ ತುಂಬಾ ರುಚಿಯಾದ ಘಮಘಮಿಸುವ 'ವಾಮು ರಸಂ' ಸೇವಿಸಲು ಸಿದ್ಧ!
ಈ ರಸಂ ಅನ್ನದೊಂದಿಗೆ ಬಿಸಿಬಿಸಿಯಾಗಿ ತಿನ್ನಬಹುದು ಇಲ್ಲವೇ, ನೇರವಾಗಿ ಕುಡಿಯಬಹುದು. ಅಜವಾನ ರಸಂ ತುಂಬಾ ರುಚಿಕರವಾಗಿರುತ್ತದೆ. ನಿಮಗೆ ಇಷ್ಟವಾದರೆ, ಒಮ್ಮೆ ಈ ರೆಸಿಪಿಯನ್ನು ಪ್ರಯತ್ನಿಸಿ ನೋಡಿ.