ಕರ್ನಾಟಕ

karnataka

ETV Bharat / international

ಡೊನಾಲ್ಡ್​​ ಟ್ರಂಪ್​ ಅಧ್ಯಕ್ಷರಾಗಲು ಅನರ್ಹ: ಕಮಲಾ ಹ್ಯಾರಿಸ್ ಟೀಕಾಪ್ರಹಾರ

ಅಮೆರಿಕಾದ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಮಾಜಿ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಡೊನಾಲ್ಡ್​​ ಟ್ರಂಪ್​ ಅಧ್ಯಕ್ಷರಾಗಲು ಅನರ್ಹ: ಕಮಲಾ ಹ್ಯಾರಿಸ್
ಡೊನಾಲ್ಡ್​​ ಟ್ರಂಪ್​ ಅಧ್ಯಕ್ಷರಾಗಲು ಅನರ್ಹ: ಕಮಲಾ ಹ್ಯಾರಿಸ್ (AP AND IANS)

By PTI

Published : 4 hours ago

ವಾಷಿಂಗ್ಟನ್(ಅಮೆರಿಕ):ಡೊನಾಲ್ಡ್​​ ಟ್ರಂಪ್​​ ದೇಶವನ್ನು ಮುನ್ನಡೆಸಲು ಅನರ್ಹವೆಂದು ಅಮೆರಿಕಾದ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಬುಧವಾರ ಟೀಕಾಪ್ರಹಾರ ನಡೆಸಿದ್ದಾರೆ. ನವೆಂಬರ್ 5 ರಂದು ಅಮೆರಿಕದ​ ಚುನಾವಣೆಗೆ ಅಂತಿಮ ಸುತ್ತಿನ ಮತದಾನ ನಡೆಯಲಿದೆ.

ಟ್ರಂಪ್ ಅವರ ಆಡಳಿತಾವಧಿಯಲ್ಲಿ ಅಧಿಕಾರದಲ್ಲಿದ್ದ ಚೀಫ್​ ಆಫ್​​​​​​ ಸ್ಟಾಪ್​​ ಕೆಲ್ಲಿ ಮಾಜಿ ಅಧ್ಯಕ್ಷರ ವಿರುದ್ಧ ಮಾತನಾಡಿದ ಒಂದು ದಿನದ ನಂತರ ಈ ಆರೋಪಗಳನ್ನು ಹ್ಯಾರಿಸ್​ ಮಾಡಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ತಮ್ಮ ಅಧ್ಯಕ್ಷೀಯ ಪ್ರತಿಸ್ಪರ್ಧಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಮಾಜಿ ಚೀಫ್​ ಆಫ್​​​​​​ ಸ್ಟಾಪ್ ,ನಿವೃತ್ತ ಫೋರ್-ಸ್ಟಾರ್ ಜನರಲ್ ಜಾನ್ ಕೆಲ್ಲಿ, ಅಡಾಲ್ಫ್ ಹಿಟ್ಲರ್‌ನಂತಹ ಜನರಲ್‌ಗಳು ತನಗೆ ಬೇಕು ಎಂದು ಟ್ರಂಪ್​ ಅವರು ಹೇಳಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ವಿಷಯ ನನಗೆ ನಿನ್ನೆಯಷ್ಟೇ ತಿಳಿಯಿತು ಎಂದು ಕಮಲಾ ಹ್ಯಾರಿಸ್​ ಹೇಳಿದ್ದಾರೆ. ಅಮೆರಿಕದ ರಾಜಧಾನಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಟ್ರಂಪ್​​ಗೆ ದೇಶ ರಕ್ಷಣೆಯ ಮಿಲಿಟರಿ ಬೇಡ, ಸ್ವರಕ್ಷಕ ಅಧಿಕಾರಿಗಳುಬೇಕು- ಹ್ಯಾರಿಸ್​​​​​​ ಸಿಡಿಮಿಡಿ:ಟೀಕಾಸ್ತ್ರ ಮುಂದುವರೆಸಿದ ಕಮಲಾ ಹ್ಯಾರಿಸ್​ "ಡೊನಾಲ್ಡ್​​​​​​​​ ಟ್ರಂಪ್​​ ಅವರು ಅಮೆರಿಕದ​ ಸಂವಿಧಾನಕ್ಕೆ ನಿಷ್ಠರಾಗಿರುವ ಮಿಲಿಟರಿ ಪಡೆಯನ್ನು ಬಯಸುವುದಿಲ್ಲ. ಅವರು ತನಗೆ ಯಾರು ನಿಷ್ಠವಾಗಿರುತ್ತಾರೋ ಅಂತಹ ಮಿಲಿಟರಿ ಅಧಿಕಾರಿಗಳು ಮಾತ್ರ ತಮ್ಮೊಂದಿಗೆ ಇರಬೇಕು ಎಂದು ಬಯಸುತ್ತಾರೆ. ಕಳೆದ ವಾರ ಡೊನಾಲ್ಡ್ ಟ್ರಂಪ್ ತನ್ನ ಸಹ ಅಮೆರಿಕನ್ನರನ್ನು ಒಳಗಿನಿಂದ ಶತ್ರು ಎಂದು ಪದೇ ಪದೆ ಕರೆದಿದ್ದಾರೆ. ಅಲ್ಲದೇ ಅಮೆರಿಕದ ನಾಗರಿಕರನ್ನು ಹಿಂಬಾಲಿಸಲು ಅವರು ಯುನೈಟೆಡ್ ಸ್ಟೇಟ್ಸ್ ಮಿಲಿಟರಿಯನ್ನು ಬಳಸಿಕೊಳ್ಳುತ್ತಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

ಕೆಲ್ಲಿ ಹೇಳಿದ್ದೇನು?:'ನಿಸ್ಸಂಶಯವಾಗಿ ಮಾಜಿ ಅಧ್ಯಕ್ಷ ಟ್ರಂಪ್​ ಬಲಪಂಥೀಯರಾಗಿದ್ದಾರೆ, ನಿರಂಕುಶಾಧಿಕಾರಿಯಾಗಿದ್ದಾರೆ ಮತ್ತು ಅವರು ಸರ್ವಾಧಿಕಾರಿ ಜನರನ್ನು ಮೆಚ್ಚುತ್ತಾರೆ. ಆದ್ದರಿಂದ, ಅವರು ಖಂಡಿತವಾಗಿಯೂ ಫ್ಯಾಸಿಸ್ಟ್‌ನ ಎಂಬ ಸಾಮಾನ್ಯ ವ್ಯಾಖ್ಯಾನದಲ್ಲಿ ಬರುತ್ತಾರೆ. ಅವರು ಖಂಡಿತವಾಗಿಯೂ ಸರ್ಕಾರದಲ್ಲಿ ಸರ್ವಾಧಿಕಾರಿ ವಿಧಾನಕ್ಕೆ ಆದ್ಯತೆ ನೀಡುತ್ತಾರೆ ಎಂದು ಕೆಲ್ಲಿ 'ದಿ ನ್ಯೂಯಾರ್ಕ್ ಟೈಮ್ಸ್‌'ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಆದರೆ ಅಮೆರಿಕದ ಮಾಜಿ ಅಧ್ಯಕ್ಷರು, ಹಾಲಿ ರಿಪಬ್ಲಿಕನ್​ ಅಭ್ಯರ್ಥಿ ಡೊನಾಲ್ಡ್​ ಟ್ರಂಪ್​ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ:ಬ್ರಿಕ್ಸ್​​​​​​​ ಶೃಂಗಸಭೆ ಅಂತ್ಯಗೊಳಿಸಿ ಭಾರತಕ್ಕೆ ವಾಪಸ್​ ಆದ ಪ್ರಧಾನಿ: ಭೇಟಿ ಫಲಪ್ರದ ಎಂದ ಮೋದಿ

ABOUT THE AUTHOR

...view details