ಕರ್ನಾಟಕ

karnataka

ETV Bharat / international

ರಷ್ಯಾ ಮೇಲೆ ಉಕ್ರೇನ್​ 9/11 ಮಾದರಿ ಡ್ರೋನ್​ ದಾಳಿ: ಬಹುಮಹಡಿ ಕಟ್ಟಡಗಳಿಗೆ ಹಾನಿ - UKRAINIAN DRONES ATTACK

ರಷ್ಯಾದ ಆಕ್ರಮಣಕ್ಕೆ ಪ್ರತಿಯಾಗಿ ಉಕ್ರೇನ್​ ಕೂಡ ಡ್ರೋನ್​ ದಾಳಿಸಿದೆ. ಇದರಿಂದ ವಸತಿ ಮತ್ತು ವಾಣಿಜ್ಯ ಬಹುಮಹಡಿ ಕಟ್ಟಡಗಳು ಪುಡಿಯಾಗಿವೆ.

ರಷ್ಯಾ ಮೇಲೆ ಉಕ್ರೇನ್​ 9/11 ಮಾದರಿ ಡ್ರೋನ್​ ದಾಳಿ
ರಷ್ಯಾ ಮೇಲೆ ಉಕ್ರೇನ್​ 9/11 ಮಾದರಿ ಡ್ರೋನ್​ ದಾಳಿ (X handle)

By ETV Bharat Karnataka Team

Published : 17 hours ago

ಕೀವ್​ (ಉಕ್ರೇನ್) :ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಸಾವಿರಾರು ಜನರನ್ನು ಬಲಿಪಡೆದಿದೆ. ಇದೀಗ ಅದು ಮತ್ತೊಂದು ಮಜಲು ಪಡೆದಿದೆ. ರಷ್ಯಾದ ಪ್ರಮುಖ ನಗರವಾದ ಕಜಾನ್​ ಮೇಲೆ ಉಕ್ರೇನ್​ ಡ್ರೋನ್​ ದಾಳಿಯನ್ನು ಶನಿವಾರ ನಡೆಸಿದೆ.

ಉಕ್ರೇನ್​​ನಿಂದ ಹಾರಿಬಂದ ಡ್ರೋನ್​ಗಳು ದೊಡ್ಡ ದೊಡ್ಡ ವಾಣಿಜ್ಯ ಮತ್ತು ವಸತಿ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಭಾರೀ ಹಾನಿ ಉಂಟು ಮಾಡಿವೆ. ಇದು 2001 ರಲ್ಲಿ ಅಮೆರಿಕದಲ್ಲಿನ ಡಬ್ಲ್ಯೂಟಿಒ ವಾಣಿಜ್ಯ ಕಟ್ಟಡದ ಮೇಲಿನ 9/11 ದಾಳಿ ಮಾದರಿಯಲ್ಲಿದೆ.

ಪ್ರಾಣ ಹಾನಿ ಇಲ್ಲ:ಉಕ್ರೇನ್​​ನಿಂದ ಸಾವಿರ ಕಿಲೋ ಮೀಟರ್​ ದೂರವಿರುವ ಕಜಾನ್​​ ನಗರದ ಮೇಲೆ ಎಂಟು ಡ್ರೋನ್​ಗಳು ದಾಳಿ ಮಾಡಿವೆ. ಆರು ವಸತಿ, ಒಂದು ವಾಣಿಜ್ಯ ಕಟ್ಟಡಗಳಿಗೆ ಇವುಗಳು ಅಪ್ಪಳಿಸಿವೆ. ಒಂದನ್ನು ನದಿ ದಡದಲ್ಲಿ ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಡ್ರೋನ್​ಗಳ ಆಕ್ರಮಣದಿಂದಾಗಿ ಕಜಾನ್‌ನ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಶನಿವಾರ ಮತ್ತು ಭಾನುವಾರ ಎಲ್ಲಾ ಬೃಹತ್​​ ಸಭೆಗಳನ್ನು ರದ್ದು ಮಾಡಲು ಸರ್ಕಾರ ಸೂಚಿಸಿದೆ.

ಶುಕ್ರವಾರವಷ್ಟೇ ಉಕ್ರೇನ್​ ಅಮೆರಿಕ ನಿರ್ಮಿತ ಕ್ಷಿಪಣಿಗಳನ್ನು ರಷ್ಯಾದ ಕುರ್ಸ್ಕ ಪ್ರದೇಶದ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಒಂದು ಮಗು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ, ವಿಮಾನ ಆಕಾರದ ಡ್ರೋನ್​ ದಾಳಿಗಳನ್ನು ನಡೆಸಿದೆ.

ದಾಳಿ ವಿಡಿಯೋ ವೈರಲ್​:ಇನ್ನೂ, ಉಕ್ರೇನ್​ ನಡೆಸಿದ ವಿಮಾನಗಳ ಮಾದರಿಯಲ್ಲಿ ಡ್ರೋನ್​ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ. ಡ್ರೋನ್​ಗಳು ದೊಡ್ಡದಾದ ಬಹುಮಹಡಿ ಕಟ್ಟಡಗಳಿಗೆ ರಭಸವಾಗಿ ಬಂದು ಡಿಕ್ಕಿ ಹೊಡೆದು ಸ್ಫೋಟಗೊಂಡದ್ದನ್ನು ಕಾಣಬಹುದು. ದಾಳಿಯಲ್ಲಿ ಕಟ್ಟಡಗಳು ತೀವ್ರ ಹಾನಿಗೊಂಡಿವೆ. ತಕ್ಷಣವೇ ಅಧಿಕಾರಿಗಳು ಕಟ್ಟಡಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.

ಇತ್ತ, ಉಕ್ರೇನ್​ ಮೇಲೂ ರಷ್ಯಾ ಡ್ರೋನ್​ ದಾಳಿ ನಡೆಸಿದೆ. 113 ಡ್ರೋನ್​ಗಳು ಹಾರಿಬಂದಿವೆ. ಇದರಲ್ಲಿ 57 ಹೊಡೆದುರುಳಿಸಲಾಗಿದೆ. ಉಳಿದ 56 ತಾವಾಗಿಯೇ ನಾಪತ್ತೆಯಾಗಿವೆ ಅಥವಾ ಎಲ್ಲಾದರೂ ಸ್ಫೋಟಗೊಂಡಿವೆ ಎಂದು ಉಕ್ರೇನ್​​ ಅಧಿಕಾರಿಗಳು ತಿಳಿಸಿದ್ದಾರೆ.

ಖಾರ್ಕಿವ್ ಪ್ರದೇಶದ ಗವರ್ನರ್ ಒಲೆಹ್ ಸಿನಿಹುಬೊವ್ ನೀಡಿದ ಮಾಹಿತಿಯಂತೆ, ಖಾರ್ಕಿವ್​ ಮೇಲೆ ಶುಕ್ರವಾರ ರಾತ್ರಿ ನಡೆದ ಡ್ರೋನ್ ದಾಳಿಯಲ್ಲಿ 8 ಜನರು ಗಾಯಗೊಂಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:ಭಾರತ ವಿರೋಧಿ ಕೆನಡಾ ಪ್ರಧಾನಿ ಟ್ರುಡೊಗೆ ಶಾಕ್​: ಮಿತ್ರ ಪಕ್ಷದಿಂದಲೇ ಅವಿಶ್ವಾಸ ನಿರ್ಣಯಕ್ಕೆ ಕರೆ

ABOUT THE AUTHOR

...view details