ವಾಷಿಂಗ್ಟನ್:''ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಸೆನ್ಸಾರ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಆದ್ರೆ, ಡೆಮೋಕ್ರಾಟ್‌ಗೆ ಬೆಂಬಲಿಸುವುದಿಲ್ಲ ಎಂದು ಜುಕರ್‌ಬರ್ಗ್ ತಿಸಿಳಿದ್ದಾರೆ'' ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಗೂಗಲ್ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಸುದ್ದಿ ಮತ್ತು ಚಿತ್ರಗಳನ್ನು ಸೆನ್ಸಾರ್ ಮಾಡಿದೆ. ಇದು ಗೂಗಲ್‌ನ ಅತ್ಯಂತ ಬೇಜವಾಬ್ದಾರಿ ವರ್ತನೆ ಎಂದು ಟ್ರಂಪ್ ಮತ್ತೊಂದು ಕಡೆ ಟೀಕಿಸಿದ್ದಾರೆ. ಟ್ರಂಪ್ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, "ಗೂಗಲ್ ತುಂಬಾ ಕೆಟ್ಟದು ಮತ್ತು ಬೇಜವಾಬ್ದಾರಿಯಾಗಿದೆ. ಗೂಗಲ್ ಬಂದ್ ಆಗಲಿದೆ. ಏಕೆಂದರೆ, ಗೂಗಲ್ ಕಾಂಗ್ರೆಸ್ ಅನ್ನು ನಿರ್ಲಕ್ಷ್ಯ ಮಾಡಿದೆ ಎಂದು ನಾನು ಭಾವಿಸುತ್ತೇನೆ. ಇದು ಗೂಗಲ್‌ನ ಅತ್ಯಂತ ಬೇಜವಾಬ್ದಾರಿ ವರ್ತನೆಯಾಗಿದೆ" ಅವರು ಕಿಡಿಕಾರಿದ್ದಾರೆ.
ಈ ವಾರದ ಆರಂಭದಲ್ಲಿ, ಗೂಗಲ್‌ನಲ್ಲಿ ಜುಲೈ 13 ರಂದು ತನ್ನ ಮೇಲೆ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಫೋಟೋಗಳನ್ನು ಕಂಡುಹಿಡಿಯುವುದು ಅಸಾಧ್ಯವೆಂದು ಟ್ರಂಪ್ ಆರೋಪಿಸಿದ್ದರು. ಆದರೆ, ಈ ಎಲ್ಲಾ ಆರೋಪಗಳನ್ನು ಗೂಗಲ್ ತಳ್ಳಿಹಾಕಿದೆ. ಏಕೆಂದರೆ ಅದು ರಾಜಕೀಯ ಹಿಂಸಾಚಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ನಮ್ಮ ಸಿಸ್ಟಂಗಳು ಹೆಚ್ಚಿನ ಸಮಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.