ETV Bharat / bharat

ಮಹಾಕುಂಭ ಮೇಳ: ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ ಸ್ಟೀವ್ ಜಾಬ್ಸ್ ಪತ್ನಿ - MAHAKUMBH MELA

ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು.

ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ
ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ (ANI)
author img

By ETV Bharat Karnataka Team

Published : Jan 12, 2025, 4:41 PM IST

ವಾರಣಾಸಿ(ಉತ್ತರ ಪ್ರದೇಶ): ಆ್ಯಪಲ್ ಕಂಪೆನಿಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ನಿರಂಜನಿ ಅಖಾಡದ ಕೈಲಾಸಾನಂದ ಗಿರಿ ಮಹಾರಾಜರೊಂದಿಗೆ ಶನಿವಾರ ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಮಹಾಕುಂಭ ಮೇಳವು ಯಾವುದೇ ಅಡೆತಡೆ ಮತ್ತು ತೊಂದರೆಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಕೈಲಾಸಾನಂದ ಗಿರಿ ಮಹಾರಾಜರು ಈ ಸಂದರ್ಭದಲ್ಲಿ ಹೇಳಿದರು.

"ಕುಂಭಮೇಳವು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳಲಿ ಎಂದು ಮಹಾದೇವನಲ್ಲಿ ಪ್ರಾರ್ಥಿಸಲು ನಾವು ಇಂದು ಕಾಶಿಗೆ ಬಂದಿದ್ದೇವೆ. ಭಗವಾನ್ ಮಹಾದೇವರನ್ನು ಆಹ್ವಾನಿಸಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಅವರು ದೇವಾಲಯದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ಇದೇ ವೇಳೆ, "ಲಾರೆನ್ ಪೊವೆಲ್ ಜಾಬ್ಸ್ ದೇವಾಲಯದ ಸಂಪ್ರದಾಯಗಳನ್ನು ಪಾಲಿಸುತ್ತಿದ್ದು, ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಲು ಉದ್ದೇಶಿಸಿದ್ದಾರೆ" ಎಂದು ಮಹಾರಾಜ್ ತಿಳಿಸಿದರು.

ದೇಗುಲದ ಹೊರಗಿನಿಂದಲೇ ದರ್ಶನ ಪಡೆದ ಲಾರೆನ್: "ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ, ಹಿಂದೂ ಅಲ್ಲದವರಿಗೆ ಕಾಶಿ ವಿಶ್ವನಾಥ ದೇವಾಲಯದಲ್ಲಿನ ಶಿವಲಿಂಗವನ್ನು ಮುಟ್ಟಲು ಅವಕಾಶವಿಲ್ಲ. ಹೀಗಾಗಿ ಅವರು ಹೊರಗಿನಿಂದಲೇ ಶಿವಲಿಂಗದ ದರ್ಶನ ಮಾಡಿದರು. ಅವರು ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದು, ಗಂಗಾ ನದಿಯಲ್ಲಿ ಸ್ನಾನವನ್ನೂ ಮಾಡಲಿದ್ದಾರೆ" ಎಂದು ಅವರು ಹೇಳಿದರು.

ನಿರಂಜನಿ ಅಖಾಡಕ್ಕೆ ಯುಎಸ್ಎ ಮೂಲದ ಮಹರ್ಷಿ ವ್ಯಾಸಾನಂದ ಎಂಬುವರು ಹೊಸ ಮಹಾಮಂಡಲೇಶ್ವರರಾಗಿ ನೇಮಕವಾಗಲಿದ್ದಾರೆ ಎಂದು ಮಹಾರಾಜ್ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

"ನಮ್ಮ ಶಿಷ್ಯ ಅಮೆರಿಕದ ಮಹರ್ಷಿ ವ್ಯಾಸಾನಂದರು ನಮ್ಮೊಂದಿಗಿದ್ದಾರೆ. ನಾಳೆ ಅವರು ನನ್ನ ಅಖಾಡದಲ್ಲಿ ಮಹಾಮಂಡಲೇಶ್ವರರಾಗುತ್ತಿದ್ದಾರೆ" ಎಂದು ಕೈಲಾಸಾನಂದ ಗಿರಿ ಹೇಳಿದರು.

ಮಹಾಮಂಡಲೇಶ್ವರರಾಗಿ ಆಯ್ಕೆಯಾದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ವ್ಯಾಸಾನಂದ ಗಿರಿ, ಇಡೀ ಜಗತ್ತಿಗೆ ಶಂಕರಾಚಾರ್ಯ ಪರಂಪರೆಯ ರಾಯಭಾರಿಯಾಗಿ ಸೇವೆ ಸಲ್ಲಿಸುವುದಾಗಿ ಹೇಳಿದರು.

ಕಾಶಿ 12 ಜ್ಯೋತಿರ್ಲಿಂಗಗಳಲ್ಲಿ ಒಂದು: ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ ಮತ್ತು ಈಗ ದೇಶಾದ್ಯಂತದ ಸನಾತನರಿಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಜನರಿಗೆ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ. ಪ್ರಾಚೀನ ಭಗವಾನ್ ಕಾಶಿ ವಿಶ್ವನಾಥ ದೇವಾಲಯದ ಭವ್ಯ ರೂಪವನ್ನು ಕಾಶಿ ವಿಶ್ವನಾಥ ಧಾಮ್ ಎಂಬ ಹೆಸರಿನಲ್ಲಿ ಡಿಸೆಂಬರ್ 13, 2021ರಂದು ಉದ್ಘಾಟಿಸಲಾಯಿತು. ಅಂದಿನಿಂದ, ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಮಹಾಕುಂಭ ಮೇಳಕ್ಕೆ 45 ಕೋಟಿಗೂ ಹೆಚ್ಚು ಜನರ ಆಗಮನ ನಿರೀಕ್ಷೆ: 12 ವರ್ಷಗಳ ನಂತರ ಮಹಾಕುಂಭ ಮೇಳವನ್ನು ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ 45 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಮಹಾಕುಂಭಮೇಳದ ಮುಖ್ಯ ಸ್ನಾನದ ಆಚರಣೆಗಳು ಹೀಗಿವೆ:

  • ಶಾಹಿ ಸ್ನಾನ- ಜನವರಿ 14 (ಮಕರ ಸಂಕ್ರಾಂತಿ).
  • ಮೌನಿ ಅಮಾವಾಸ್ಯೆ- ಜನವರಿ 29
  • ಬಸಂತ್ ಪಂಚಮಿ- ಫೆಬ್ರವರಿ 3

ಇದನ್ನೂ ಓದಿ: ನಾಗ್ಪುರದಲ್ಲಿ ಕಂಗನಾ, ಅನುಪಮ್ ಖೇರ್ ಜೊತೆ ಕುಳಿತು 'ಎಮರ್ಜೆನ್ಸಿ' ಸಿನಿಮಾ ವೀಕ್ಷಿಸಿದ ಸಚಿವ ಗಡ್ಕರಿ - EMERGENCY FILM SPECIAL SCREENING

ETV Bharat Logo

Copyright © 2025 Ushodaya Enterprises Pvt. Ltd., All Rights Reserved.