ವಾಷಿಂಗ್ಟನ್,ಅಮೆರಿಕ: ಕಳೆದ ನವೆಂಬರ್ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುತ್ತಿದ್ದೆ ಎಂದು ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಒಗ್ಗಟ್ಟನ್ನು ಕಾಪಾಡುವ ನಿಟ್ಟಿನಲ್ಲಿ ಸ್ಪರ್ಧೆಯಿಂದ ಅರ್ಧದಲ್ಲೇ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಅಧ್ಯಕ್ಷರೇ, ಮರು ಚುನಾವಣೆಗೆ ಸ್ಪರ್ಧಿಸದಿರುವ ನಿಮ್ಮ ನಿರ್ಧಾರಕ್ಕೆ ನೀವು ವಿಷಾದಿಸುತ್ತೀರಾ? ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೈಡನ್ ಅವರನ್ನು ಪ್ರಶ್ನಿಸಲಾಯಿತು. ಮಾಧ್ಯಮಗಳ ಈ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹಾಗೆ ಯೋಚಿಸುವುದಿಲ್ಲ. ಆದರೆ, ಟ್ರಂಪ್ ಅವರನ್ನು ಸೋಲಿಸಬಹುದಿತ್ತು, ಕಮಲಾ ಹ್ಯಾರಿಸ್ ಕೂಡಾ ಟ್ರಂಪ್ ಅವರನ್ನ ಪರಾಜಯಗೊಳಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ ಎಂದರು.
ಅಮೆರಿಕ ಅಧ್ಯಕ್ಷರಾಗಿದ್ದು ನನ್ನ ಜೀವನದ ಅತ್ಯಂತ ದೊಡ್ಡ ಗೌರವ: ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ. ಆದರೆ, ಚುನಾವಣೆಯಲ್ಲಿ ಪಕ್ಷವನ್ನು ಒಗ್ಗಟ್ಟಿನಿಂದ ಒಯ್ಯುವುದಕ್ಕಾಗಿ ಈ ನಿರ್ಧಾರ ಕೈಗೊಂಡೆ, ಮತ್ತು ಕಮಲಾ ಹ್ಯಾರಿಸ್ ಗೆಲ್ಲಬಹುದೆಂಬ ವಿಶ್ವಾಸವಿತ್ತು ಎಂದು ಬೈಡನ್ ಹೇಳಿದರು.
ಜೂನ್‌ನಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಜೋ ಬೈಡನ್: ಜೂನ್‌ನಲ್ಲಿ ಅಟ್ಲಾಂಟಾದಲ್ಲಿ ನಡೆದ ಅಧ್ಯಕ್ಷೀಯ ಸಂವಾದದ ವೇಳೆ 82 ವರ್ಷದ ಬೈಡನ್ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವ ತೀರ್ಮಾನ ಕೈಗೊಂಡಿದ್ದರು. ತಮ್ಮದೇ ಪಕ್ಷದ ನಾಯಕರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರಿಂದ ಬೈಡನ ಅವರು ಚುನಾವಣಾ ಕಣದಿಂದ ಮಧ್ಯದಲ್ಲೇ ಹಿಂದೆ ಸರಿಯುವ ತೀರ್ಮಾನ ಕೈಗೊಂಡಿದ್ದರು. ಹಾಗೂ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಅವರ ಸಹವರ್ತಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು.
ಆದರೆ ಕಮಲಾ ಹ್ಯಾರಿಸ್ ಟ್ರಂಪ್ ವಿರುದ್ಧ ಸೋಲು ಅನುಭವಿಸಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಕ್ಲೀನ್ ಸ್ಪೀಪ್ ಮಾಡಿ ಅಧಿಕಾರಕ್ಕೆ ಏರಿದೆ. ಮಾತ್ರವಲ್ಲದೇ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಹುಮತ ಉಳಿಸಿಕೊಂಡಿದೆ.
ಜನವರಿ 20 ರಂದು ಟ್ರಂಪ್ ಅಧಿಕಾರ ಸ್ವೀಕಾರ, ಬೈಡನ್ ನಿರ್ಗಮನ: ಜನವರಿ 20 ರಂದು ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅದಕ್ಕೂ ಮೊದಲು ಜೋ ಬೈಡನ್ ಶ್ವೇತಭವನ ತೊರೆಯಲಿದ್ದಾರೆ. ಜೋ ಬೈಡನ್ ನಾಲ್ಕು ವರ್ಷಗಳ ಅವಧಿ ಮುಗಿಸಿದ್ದು, ವಯಸ್ಸಿನ ಕಾರಣ ಚುನಾವಣಾ ಕಣದಿಂದ ಅರ್ಧದಲ್ಲೇ ಹಿಂದೆ ಸರಿದು, ಕಮಲಾ ಹ್ಯಾರಿಸ್ಗೆ ಅವಕಾಶ ಮಾಡಿಕೊಟ್ಟಿದ್ದರು.
ಇದನ್ನು ಓದಿ: ಸ್ವಪಕ್ಷದಲ್ಲೇ ಭುಗಿಲೆದ್ದ ಭಿನ್ನಮತ; ಕೆನಡಾ ಪ್ರಧಾನಿ ಜಸ್ಪಿನ್ ಟ್ರೂಡೋ ಶೀಘ್ರದಲ್ಲೇ ರಾಜೀನಾಮೆ ಸಾಧ್ಯತೆ