ಕರ್ನಾಟಕ

karnataka

ETV Bharat / international

ಚೀನಾದ 33 ಮಿಲಿಟರಿ ವಿಮಾನ, 6 ಹಡಗುಗಳನ್ನು ಪತ್ತೆ ಹಚ್ಚಿದ ತೈವಾನ್ - ಚೀನಾ

ಚೀನಾ ಕಳುಹಿಸಿದ ಮಿಲಿಟರಿ ವಿಮಾನಗಳು, ನೌಕಾ ಹಡಗುಗಳನ್ನು ತೈವಾನ್ ಪತ್ತೆ ಮಾಡಿದೆ.

China  Taiwan  33 military aircraf  six navy ships  ಚೀನಾ  ತೈವಾನ್  33 ಮಿಲಿಟರಿ ವಿಮಾನಗಳು  ಆರು ನೌಕಾ ಹಡಗು
ಚೀನಾ ಕಳುಹಿಸಿದ 33 ಮಿಲಿಟರಿ ವಿಮಾನಗಳು, ಆರು ನೌಕಾ ಹಡಗುಗಳನ್ನು ಪತ್ತೆ ಹಚ್ಚಿದ ತೈವಾನ್

By ANI

Published : Jan 28, 2024, 10:33 AM IST

ತೈಪೆ(ತೈವಾನ್):ಶುಕ್ರವಾರ ಬೆಳಿಗ್ಗೆ 6ರಿಂದ ಶನಿವಾರದ ನಡುವಿನ ಅವಧಿಯಲ್ಲಿ ತೈವಾನ್ ದೇಶಾದ್ಯಂತ ಚೀನಾದ 33 ಮಿಲಿಟರಿ ವಿಮಾನಗಳು ಮತ್ತು ಆರು ನೌಕಾ ಹಡಗುಗಳನ್ನು ಕಂಡು ಹಿಡಿದಿದೆ ಎಂದು ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯ ತಿಳಿಸಿದೆ.

ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ತೈವಾನ್ ವಿಮಾನ ಮತ್ತು ನೌಕಾಪಡೆಯ ಹಡಗುಗಳನ್ನು ಕಳುಹಿಸುವುದರೊಂದಿಗೆ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನೂ ನಿಯೋಜಿಸುವ ಮೂಲಕ ಪ್ರತಿಕ್ರಿಯಿಸಿದೆ. ತೈವಾನ್ ನ್ಯೂಸ್ ಪ್ರಕಾರ, ದೇಶದ ರಕ್ಷಣಾ ಸಚಿವಾಲಯವು 13 ಚೀನಾದ ವಿಮಾನಗಳು ದಕ್ಷಿಣ ಮತ್ತು ಉತ್ತರ ವಾಯು ರಕ್ಷಣಾ ಗುರುತಿಸುವಿಕೆ ವಲಯವನ್ನು (ADIZ) ಉಲ್ಲಂಘಿಸಿವೆ ಎಂದು ಹೇಳಿದೆ.

ಮಾಧ್ಯಮ ವರದಿಗಳ ಪ್ರಕಾರ, ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಬ್ಯಾಂಕಾಕ್‌ನಲ್ಲಿ ಭೇಟಿಯಾಗುವ ಸಂದರ್ಭದಲ್ಲೇ ತೈವಾನ್‌ ಮೇಲೆ ಚೀನಾ ಒತ್ತಡ ತಂತ್ರ ಹೆಚ್ಚಿಸುತ್ತಿದೆ.

ಸೆಪ್ಟೆಂಬರ್ 2020ರಿಂದ ಚೀನಾ ಬೂದು ವಲಯದ ಕಾರ್ಯತಂತ್ರಗಳನ್ನು ಹೆಚ್ಚಾಗಿ ಬಳಸುತ್ತಿದೆ. ಉದಾಹರಣೆಗೆ, ಮಿಲಿಟರಿ ವಿಮಾನಗಳು ಮತ್ತು ನೌಕಾ ಹಡಗುಗಳನ್ನು ಮಧ್ಯದ ರೇಖೆಯಾದ್ಯಂತ ಮತ್ತು ತೈವಾನ್‌ನ ADIZನಲ್ಲಿ ನಿಯೋಜಿಸಿದೆ. CSIS ಪ್ರಕಾರ, ಬೂದು ವಲಯದ ತಂತ್ರಗಳು\ ಸ್ಥಿರ-ಸ್ಥಿತಿಯ ತಡೆ ಮತ್ತು ಭರವಸೆ ಮೀರಿದ ಪ್ರಯತ್ನಗಳು ಮುಂದುವರಿದಿದೆ. ಚೀನಾ ಸೇನೆ ತಮ್ಮ ಮೇಲೆ ಹಿಡಿ ಸಾಧಿಸಲು ಪ್ರಯತ್ನಿಸುತ್ತದೆ ಎಂದು ತೈವಾನ್ ನ್ಯೂಸ್ ವರದಿ ಮಾಡಿದೆ. ಈ ವರ್ಷ ಇಲ್ಲಿಯವರೆಗೆ ತೈವಾನ್ ಮಿಲಿಟರಿ 266 ಚೀನಾದ ಮಿಲಿಟರಿ ವಿಮಾನಗಳು ಮತ್ತು 116 ನೌಕಾ ಪಡೆ ಹಡಗುಗಳನ್ನು ಪತ್ತೆ ಮಾಡಲಾಗಿದೆ.

ಇದನ್ನೂ ಓದಿ:ಹೌತಿ ಉಗ್ರರಿಂದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ: ಬೆಂಕಿ ನಂದಿಸಿದ ಭಾರತೀಯ ನೌಕಾಪಡೆ

ABOUT THE AUTHOR

...view details