ತೈಪೆ, ತೈವಾನ್:ಭಾನುವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ನಡುವೆ ತೈವಾನ್ ಸುತ್ತಮುತ್ತ ಐದು ಚೀನೀ ಮಿಲಿಟರಿ ವಿಮಾನಗಳು ಮತ್ತು ಆರು ನೌಕಾ ಹಡಗುಗಳು ಪತ್ತೆ ಆಗಿವೆ ಎಂದು ತೈವಾನ್ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಎಂಟು ಪೀಪಲ್ಸ್ ಲಿಬರೇಶನ್ ಆರ್ಮಿ ವಿಮಾನಗಳು ದೇಶದ ನೈಋತ್ಯ ಮತ್ತು ಆಗ್ನೇಯ ವಾಯು ರಕ್ಷಣಾ ಗುರುತಿನ ವಲಯದಲ್ಲಿ ಹಾರಾಟ ನಡೆಸಿವೆ ಎಂದು ತೈವಾನ್ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.
ತೈವಾನ್ ರಕ್ಷಣಾ ಸಚಿವಾಲಯದ ಟ್ವೀಟ್:ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ತೈವಾನ್‌ನ MND, ತೈವಾನ್‌ನ ಸುತ್ತಲೂ ಕಾರ್ಯನಿರ್ವಹಿಸುತ್ತಿರುವ 5 ಚೀನಾ ವಿಮಾನಗಳು ಮತ್ತು ಚೀನಾ ನೌಕಾ ಪಡೆಯ ಹಡಗುಗಳು ಪತ್ತೆಯಾಗಿವೆ ಎಂದು ಹೇಳಿದೆ. 1 ವಿಮಾನವು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿ ಕಾರ್ಯಾಚರಣೆ ನಡೆಸಿದೆ. ನಾವು ಪರಿಸ್ಥಿತಿಯನ್ನು ಅತ್ಯಂತ ಹತ್ತಿರದಿಂದ ಗಮನಿಸುತ್ತಿದ್ದೇವೆ ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದ್ದೇವೆ ಎಂದು ತೈವಾನ್ ರಾಷ್ಟ್ರೀಯ ರಕ್ಷಣಾ ಸಚಿವಾಲಯ MND ಹೇಳಿದೆ.
ಆತಂಕದಲ್ಲಿ ತೈವಾನ್:ಈ ಘಟನೆಯು ತೈವಾನ್‌ನಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೀಜಿಂಗ್ ತೈವಾನ್ ದ್ವೀಪದ ಮೇಲೆ ತನ್ನ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಬರುತ್ತಿದೆ. ಚೀನಾದ ಈ ವರ್ತನೆಯು ಪ್ರಾದೇಶಿಕ ಸ್ಥಿರತೆಯ ಬಗ್ಗೆ ಕಳವಳ ಉಂಟುಮಾಡುತ್ತಿದೆ. PLA ಯ ಚಟುವಟಿಕೆಗಳಿಗೆ ಪ್ರತಿಕ್ರಿಯೆಯಾಗಿ, ತೈವಾನ್ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಕೂಡಾ, ದ್ವೀಪದಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಯುದ್ಧ-ಸನ್ನದ್ಧತೆಯ ಕಸರತ್ತುಗಳನ್ನು ಪ್ರಾರಂಭಿಸಿದೆ. ಚೀನಾದ ಯಾವುದೇ ಕ್ರಿಯೆಗಳಿಗೆ - ಪ್ರತಿಕ್ರಿಯೆ ನೀಡಲು ಸೂಕ್ತವಾದ ಪ್ರತಿಕ್ರಮಗಳನ್ನು ಕಾರ್ಯಗತಗೊಳಿಸಲು ಅಲ್ಲಿನ ಕೋಸ್ಟ್ ಗಾರ್ಡ್ ಆಡಳಿತದೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದೆ.
ನ್ಯಾಟೋ ಆಕ್ರೋಶ:ತೈವಾನ್‌ನ ಸಾರ್ವಭೌಮತ್ವದ ಮೇಲೆ ಚೀನಾ ಪ್ರಹಾರ ಮಾಡುತ್ತಲೇ ಬಂದಿದೆ. ತೈವಾನ್ ತನ್ನ ಪ್ರದೇಶ ಎಂದು ಚೀನಾ ಪ್ರತಿಪಾದನೆ ಮಾಡಿಕೊಂಡೇ ಬರುತ್ತಿದೆ. ಅಷ್ಟೇ ಅಲ್ಲ ಇದು ಸಂಕೀರ್ಣ ಮತ್ತು ದೀರ್ಘಕಾಲದ ಭೌಗೋಳಿಕ ರಾಜಕೀಯ ಸಂಘರ್ಷವಾಗಿದೆ. NATO ಸೆಕ್ರೆಟರಿ ಜನರಲ್ ಮಾರ್ಕ್ ರುಟ್ಟೆ ಅವರು ತೈವಾನ್ ಬಗೆಗಿನ ಚೀನಾದ ನಿಲುವನ್ನು ಟೀಕಿಸಿದ್ದಾರೆ. ಚೀನಾ ತೈವಾನ್ ಅನ್ನು ಬೆದರಿಸುತ್ತಿದೆ ಮತ್ತು ಸಮಾಜಗಳನ್ನು ದುರ್ಬಲಗೊಳಿಸುವ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಟ್ರಂಪ್ ಅಚ್ಚರಿಯ ನಡೆ: ಪದಗ್ರಹಣ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್‌ಗೆ ಆಹ್ವಾನ