ಕರ್ನಾಟಕ

karnataka

ETV Bharat / international

ಪ್ರಧಾನಿ ಮೋದಿ ಆಲಂಗಿಸಿಕೊಂಡು ಸ್ವಾಗತ ಕೋರಿದ ಅಧ್ಯಕ್ಷ ಟ್ರಂಪ್ - PM MODI IN US

ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹಿಂತಿರುಗುತ್ತಿದ್ದಾರೆ.

ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್
ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್ (etv bharat)

By ETV Bharat Karnataka Team

Published : Feb 14, 2025, 2:05 PM IST

ವಾಷಿಂಗ್ಟನ್ ಡಿಸಿ, ಅಮೆರಿಕ: ಗುರುವಾರ ಶ್ವೇತ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಲಂಗಿಸಿಕೊಂಡು ಯುಎಸ್ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸ್ವಾಗತಿಸಿದ್ದು ವಿಶೇಷವಾಗಿತ್ತು. ಯುಎಸ್ ಸ್ಟೇಟ್ ಸೆಕ್ರೆಟರಿ ಮಾರ್ಕೊ ರುಬಿಯೊ ಮತ್ತು ಯುಎಸ್ ಡಿಪಾರ್ಟ್ ಮೆಂಟ್ ಆಫ್ ಗವರ್ನಮೆಂಟ್ ಎಫಿಷಿಯೆನ್ಸಿ (ಡಿಒಜಿಇ) ಮುಖ್ಯಸ್ಥ ಎಲೋನ್ ಮಸ್ಕ್ ಸೇರಿದಂತೆ ಇತರ ಅಧಿಕಾರಿಗಳಿಗೆ ಅಧ್ಯಕ್ಷ ಟ್ರಂಪ್ ಪ್ರಧಾನಿ ಮೋದಿಯವರನ್ನು ಪರಿಚಯಿಸಿದರು.

ಶ್ವೇತಭವನದ ಉಪ ಮುಖ್ಯಸ್ಥ ಡಾನ್ ಸ್ಕಾವಿನೊ ಪಿಎಂ ಮೋದಿ ಮತ್ತು ಟ್ರಂಪ್ ಅವರು ಆಲಂಗಿಸಿಕೊಂಡಿರುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. "ವೆಸ್ಟ್ ವಿಂಗ್ ಲಾಬಿಯಲ್ಲಿ ತೆರೆಮರೆಯಲ್ಲಿ ಅಧ್ಯಕ್ಷ ಟ್ರಂಪ್ ಭಾರತದ ಪ್ರಧಾನಿ ಅವರನ್ನು ಸ್ವಾಗತಿಸಿದರು" ಎಂದು ಸ್ಕಾವಿನೊ ಬರೆದಿದ್ದಾರೆ.

ಶ್ವೇತಭವನದಲ್ಲಿ ಭಾರತೀಯ ಧ್ವಜಗಳ ರಾರಾಜನೆ:ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಮತ್ತು ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರನ್ನೊಳಗೊಂಡ ಭಾರತೀಯ ನಿಯೋಗವು ಪ್ರಧಾನಿ ಮೋದಿಯವರ ಆಗಮನದ ನಂತರ ಶ್ವೇತಭವನಕ್ಕೆ ಆಗಮಿಸಿತು. ಪ್ರಧಾನಿ ಮೋದಿಯವರ ಆಗಮನದ ಮೊದಲು, ಶ್ವೇತಭವನದಲ್ಲಿ ಭಾರತೀಯ ಧ್ವಜಗಳನ್ನು ಇರಿಸಲಾಗಿತ್ತು.

ಅಧ್ಯಕ್ಷ ಟ್ರಂಪ್ ಅವರ ಅಧಿಕಾರ ಸ್ವೀಕಾರದ ನಂತರ ಯುನೈಟೆಡ್ ಸ್ಟೇಟ್ಸ್​ಗೆ ಭೇಟಿ ನೀಡಿದ ಮೊದಲ ಕೆಲವು ವಿಶ್ವ ನಾಯಕರಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರು. ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ಮೂರು ವಾರಗಳಲ್ಲಿಯೇ ತನ್ನ ದೇಶಕ್ಕೆ ಭೇಟಿ ನೀಡುವಂತೆ ಅಮೆರಿಕ ಮೋದಿಯವರನ್ನು ಆಹ್ವಾನಿಸಿದ್ದು ವಿಶೇಷ.

ಸಂಪರ್ಕವನ್ನ ಕೈ ಬಿಡದೇ ಕಾಯ್ದುಕೊಂಡ ನಾಯಕರು:ನವೆಂಬರ್ 2024 ರಿಂದ ಪ್ರಧಾನಿ ಮೋದಿ ಮತ್ತು ಟ್ರಂಪ್ ಎರಡು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಪ್ರಧಾನಿ ಮೋದಿಯವರ ವಿಶೇಷ ರಾಯಭಾರಿಯಾಗಿ ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು. ಭೇಟಿಯ ಸಮಯದಲ್ಲಿ, ವಿದೇಶಾಂಗ ಸಚಿವ ಜೈಶಂಕರ್ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿಯಾಗಿದ್ದರು ಮತ್ತು ಜನವರಿ 2025 ರಲ್ಲಿ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು.

ಅಧ್ಯಕ್ಷರ ಭೇಟಿಗೂ ಮುನ್ನ ಹಲವು ಪ್ರಮುಖರೊಂದಿಗೆ ಮೋದಿ ಮಾತು:

ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗಿನ ಸಭೆಗೂ ಮುನ್ನ ಪ್ರಧಾನಿ ಮೋದಿ ಅವರು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್, ಟೆಸ್ಲಾ ಸಿಇಒ ಎಲೋನ್ ಮಸ್ಕ್, ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಮತ್ತು ಯುಎಸ್ ರಾಷ್ಟ್ರೀಯ ಗುಪ್ತಚರ (ಡಿಎನ್ಐ) ನಿರ್ದೇಶಕ ತುಳಸಿ ಗಬ್ಬಾರ್ಡ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಇದನ್ನೂ ಓದಿ : 26/11 ಭಯೋತ್ಪಾದಕ ಆರೋಪಿ ತಹಾವ್ವುರ್ ರಾಣಾ ಭಾರತಕ್ಕೆ ಹಸ್ತಾಂತರಿಸುವುದಾಗಿ ಟ್ರಂಪ್ ಘೋಷಣೆ - TAHAWWUR RANA TO INDIA

ABOUT THE AUTHOR

...view details