ಕರ್ನಾಟಕ

karnataka

ETV Bharat / international

ಅನಾನಸ್ ಎಕ್ಸ್‌ಪ್ರೆಸ್​ಗೆ ತತ್ತರಿಸಿದ ಕ್ಯಾಲಿಫೋರ್ನಿಯಾ: ದಾಖಲೆಯ ಮಳೆಯಿಂದ ಪ್ರವಾಹ, ಸಾವು-ನೋವು

ಭಾರೀ ಮಳೆ ಮತ್ತು ಹಿಮಪಾತದಿಂದಾಗಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಹಲವೆಡೆ ದಿಢೀರ್ ಪ್ರವಾಹ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

power outages to California  Powerful storm brings flood  ಅನಾನಸ್ ಎಕ್ಸ್‌ಪ್ರೆಸ್​ ದಾಖಲೆಯ ಮಳೆ  ಜನಜೀವನ ಅಸ್ತವ್ಯಸ್ತ
ದಾಖಲೆಯ ಮಳೆ, ಪ್ರವಾಹ, ಸಾವು-ನೋವು, ಜನಜೀವನ ಅಸ್ತವ್ಯಸ್ತ

By ETV Bharat Karnataka Team

Published : Feb 6, 2024, 12:39 PM IST

ಲಾಸ್ ಏಂಜಲೀಸ್ (ಅಮೆರಿಕ): ಕ್ಯಾಲಿಫೋರ್ನಿಯಾದಲ್ಲಿ ಹವಾಮಾನದ ಸ್ವರೂಪ ಬದಲಾಗಿದೆ. ಚಂಡಮಾರುತದಿಂದಾಗಿ ರಾಜ್ಯದಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸಿದೆ. ರಾಜ್ಯದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಒಂದು ವಾರದೊಳಗೆ ಪಶ್ಚಿಮ ಕರಾವಳಿಗೆ ಅಪ್ಪಳಿಸಿದ ಎರಡನೇ "ಅನಾನಸ್ ಎಕ್ಸ್‌ಪ್ರೆಸ್" ಚಂಡಮಾರುತವು ಸೋಮವಾರ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭೂಕುಸಿತವನ್ನುಂಟು ಮಾಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಅನಾನಸ್ ಎಕ್ಸ್‌ಪ್ರೆಸ್​ಗೆ ತತ್ತರಿಸಿದ ಕ್ಯಾಲಿಫೋರ್ನಿಯಾ

ಚಂಡಮಾರುತದಿಂದಾಗಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಭಾರೀ ಮಳೆಯಾಗಿದೆ. ಇದೇ ವೇಳೆ ಕೆಲವೆಡೆ ಹಿಮಪಾತವಾಗಿದೆ. ಬಲವಾದ ಗಾಳಿಯೊಂದಿಗೆ, ದಾಖಲೆಯ ಮಳೆ ದಾಖಲಾಗಿದೆ. ಒಟ್ಟು 130 ಸ್ಥಳಗಳಿಂದ ಪ್ರವಾಹದ ಮಾಹಿತಿ ಬಂದಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಪರಿಣಾಮವಾಗಿ, ರಾಜ್ಯಪಾಲರು ರಾಜ್ಯದ ಎಂಟು ಕೌಂಟಿಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಚಂಡಮಾರುತದ ಹಾನಿಯಿಂದಾಗಿ ಪೆಸಿಫಿಕ್ ಕರಾವಳಿ ಹೆದ್ದಾರಿಯನ್ನು ಮುಚ್ಚಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಅನಾನಸ್ ಎಕ್ಸ್‌ಪ್ರೆಸ್​ಗೆ ತತ್ತರಿಸಿದ ಕ್ಯಾಲಿಫೋರ್ನಿಯಾ

ರಾಜ್ಯದ ದಕ್ಷಿಣ ಭಾಗದಲ್ಲಿರುವ ಗುಡ್ಡಗಾಡು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸರ್ಕಾರ ತಿಳಿಸಿದೆ. ಲಾಸ್ ಏಂಜಲೀಸ್‌ನ ಮೇಯರ್ ಜನರು ತುರ್ತು ಪರಿಸ್ಥಿತಿಯಿಂದಾಗಿ ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಿದ್ದಾರೆ. ಹಲವೆಡೆ ರಸ್ತೆಗಳಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿದೆ. 100 ಕಡೆ ಮಣ್ಣಿನ ದಿಬ್ಬಗಳು ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ. ಬೆಲ್ ಏರ್ ಮತ್ತು ಬೆವರ್ಲಿ ಹಿಲ್ಸ್‌ನಲ್ಲಿ ಭಾರೀ ಹಾನಿ ಸಂಭವಿಸಿದೆ. ಕಳೆದ 150 ವರ್ಷಗಳಲ್ಲಿ ಲಾಸ್ ಏಂಜಲೀಸ್ ಪ್ರದೇಶದಲ್ಲಿ ದಾಖಲಾದ ಐದು ಭಾರಿಯ ಅತೀ ಭೀಕರ ಮಳೆಗಳಲ್ಲಿ ಇದೂ ಒಂದು. ಎರಡು ದಿನದಲ್ಲಿ 6.35 ಇಂಚು ಮಳೆಯಾಗಿದೆ. ಇಲ್ಲಿ 1934 ರಲ್ಲಿ 7.98 ಇಂಚುಗಳಷ್ಟು ಮಳೆಯಾಗಿತ್ತು.

ಅನಾನಸ್ ಎಕ್ಸ್‌ಪ್ರೆಸ್​ಗೆ ತತ್ತರಿಸಿದ ಕ್ಯಾಲಿಫೋರ್ನಿಯಾ

ಸ್ಯಾನ್ ಫ್ರಾನ್ಸಿಸ್ಕೋದ ಅನೇಕ ಸ್ಥಳಗಳಲ್ಲಿ ಭೂಕುಸಿತಗಳು ಸಂಭವಿಸಿವೆ. ಕೆಲವೆಡೆ ಮರ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಇಂದು ಸಹ ಇದೇ ವಾತಾವರಣ ಮುಂದುವರಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ಅದೇ ಚಂಡಮಾರುತವು ಲಾಸ್ ವೇಗಾಸ್ ಮತ್ತು ನೆವಾಡಾದಲ್ಲಿ ಭಾರೀ ಹಿಮಪಾತವನ್ನು ಉಂಟುಮಾಡಿದೆ. ಲೆ ಕ್ಯಾನೈನ್ ಸ್ಕೀ ರೆಸಾರ್ಟ್‌ನಲ್ಲಿ ಹಿಮದ ರಾಶಿಗಳು ಅಪ್ಪಳಿಸಿವೆ. ಮ್ಯಾಮತ್ ಸ್ಕಿಬೇಸ್ 33 ಇಂಚುಗಳಷ್ಟು ಹಿಮಪಾತವನ್ನು ದಾಖಲಿಸಿದೆ.

ಅನಾನಸ್ ಎಕ್ಸ್‌ಪ್ರೆಸ್​ಗೆ ತತ್ತರಿಸಿದ ಕ್ಯಾಲಿಫೋರ್ನಿಯಾ

ಸಾವಿರಾರು ವಿಮಾನಗಳು ತಡವಾಗಿ ಸಂಚಾರ ಮತ್ತು ಕೆಲ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ, 1,100 ವಿಮಾನಗಳು ವಿಳಂಬಗೊಂಡಿವೆ. ಸುಮಾರು 60ಕ್ಕೂ ಹೆಚ್ಚು ರದ್ದಾಗಿವೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 255 ವಿಮಾನಗಳು ರದ್ದಾಗಿದ್ದರೆ, ಇನ್ನೂ 840 ಸೇವೆಗಳು ವಿಳಂಬವಾಗಿವೆ. ರಾಜ್ಯಾದ್ಯಂತ 2,90,000 ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಕ್ಯಾಲಿಫೋರ್ನಿಯಾ, ಅರಿಜೋನಾ ಮತ್ತು ನೆವಾಡಾದಲ್ಲಿ ಪ್ರಸ್ತುತ 3.5 ಮಿಲಿಯನ್ ಜನರು ಪ್ರವಾಹದ ಅಪಾಯದಲ್ಲಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಅನಾನಸ್ ಎಕ್ಸ್‌ಪ್ರೆಸ್​ಗೆ ತತ್ತರಿಸಿದ ಕ್ಯಾಲಿಫೋರ್ನಿಯಾ
ಅನಾನಸ್ ಎಕ್ಸ್‌ಪ್ರೆಸ್​ಗೆ ತತ್ತರಿಸಿದ ಕ್ಯಾಲಿಫೋರ್ನಿಯಾ

ರಾಷ್ಟ್ರೀಯ ಹವಾಮಾನ ಸೇವೆ (NWS) ಪ್ರಕಾರ ಭಾನುವಾರದಿಂದ ಲಾಸ್ ಏಂಜಲೀಸ್‌ನಾದ್ಯಂತ 10 ಇಂಚುಗಳಷ್ಟು (25.4 cm) ಮಳೆ ಬಿದ್ದಿದೆ. ದೇಶದ ಎರಡನೇ ಅತಿದೊಡ್ಡ ನಗರವಾಗಿರುವ ಈ ಪ್ರದೇಶದಲ್ಲಿ ವಾರವಿಡೀ ಮಳೆ ಬೀಳುವ ನಿರೀಕ್ಷೆಯಿದೆ. NWS ಪೋಸ್ಟ್ ಮಾಡಿದ ಮಾಹಿತಿ ಪ್ರಕಾರ, "ಭೀಕರವಾದ ಪ್ರವಾಹವು ಮುಂದುವರಿಯುತ್ತದೆ ಮತ್ತು ಹೆಚ್ಚಾಗುವ ನಿರೀಕ್ಷೆಯಿದೆ" ಎಂದು ಎಚ್ಚರಿಸಿದೆ. ರಕ್ಷಣಾ ಕಾರ್ಯಾಚರಣೆಗಳು ತೀವ್ರಗತಿಯಿಂದ ಸಾಗಿವೆ.

ಅನಾನಸ್ ಎಕ್ಸ್‌ಪ್ರೆಸ್​ಗೆ ತತ್ತರಿಸಿದ ಕ್ಯಾಲಿಫೋರ್ನಿಯಾ

ಓದಿ:ದೇಶದ ಮೊದಲ ಹೈಪರ್​​​​ವೆಲಾಸಿಟಿ ವಿಸ್ತರಣೆ ಸುರಂಗ ಸೌಲಭ್ಯ ಅಭಿವೃದ್ಧಿಪಡಿಸಿದ ಐಐಟಿ ಕಾನ್ಪುರ್

ABOUT THE AUTHOR

...view details