ಕರ್ನಾಟಕ

karnataka

ETV Bharat / international

ಬ್ರಿಕ್ಸ್​​ ಶೃಂಗಸಭೆ: ಚೀನಾ ಅಧ್ಯಕ್ಷರ ಜೊತೆ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ನರೇಂದ್ರ ಮೋದಿ - PM MODI TO HOLD TALKS WITH CHINA

ಭಾರತ ಮತ್ತು ಚೀನಾದ ರಾಜತಾಂತ್ರಿಕ ಮತ್ತು ಮಿಲಿಟರಿ ಸಮಾಲೋಚಕರ ಜತೆ ಭಾರತ ಕಳೆದ ಹಲವು ವಾರಗಳಿಂದ ವಿವಿಧ ವೇದಿಕೆಗಳಲ್ಲಿ ನಿಕಟ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

PM Modi to Hold First In-Person Talks with Chinese President Xi Jinping on the Sidelines of BRICS
ಬ್ರಿಕ್ಸ್​​ ಶೃಂಗಸಭೆ: ಚೀನಾ ಅಧ್ಯಕ್ಷರ ಜೊತೆ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ನರೇಂದ್ರ ಮೋದಿ (File Photo)

By ETV Bharat Karnataka Team

Published : Oct 23, 2024, 6:34 AM IST

ಕಜಾನ್​, ರಷ್ಯಾ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಬುಧವಾರ ಅಕ್ಟೋಬರ್ 23 ರಂದು ದ್ವಿಪಕ್ಷೀಯ ಸಭೆ ನಡೆಯಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಂಗಳವಾರ ಖಚಿತಪಡಿಸಿದ್ದಾರೆ. ರಷ್ಯಾದ ಅಧ್ಯಕ್ಷತೆಯಲ್ಲಿ ಕಜಾನ್‌ನಲ್ಲಿ ಅಕ್ಟೋಬರ್​ 22 ರಿಂದ 16 ನೇ ಬ್ರಿಕ್ಸ್ ಸಭೆ ಆರಂಭವಾಗಿದೆ. ಈ ಶೃಂಗ ಅಕ್ಟೋಬರ್​ 24 ರವರೆಗೆ ನಡೆಯಲಿದೆ.

ಕಳೆದ ಹಲವು ವಾರಗಳಿಂದ ಭಾರತ ಮತ್ತು ಚೀನಾದ ರಾಜತಾಂತ್ರಿಕ ಮತ್ತು ಮಿಲಿಟರಿ ಸಮಾಲೋಚಕರು ವಿವಿಧ ವೇದಿಕೆಗಳಲ್ಲಿ ಪರಸ್ಪರ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಈ ಹೇಳಿಕೆ ನಂತರ ಭಾರತದ ಪ್ರಧಾನಿ ಹಾಗೂ ಚೀನಾ ಅಧ್ಯಕ್ಷರ ನಡುವೆ ಇಂದು ದ್ವಿಪಕ್ಷೀಯ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.

ರಾಜತಾಂತ್ರಿಕರು ಮತ್ತು ಮಿಲಿಟರಿ ಸಮಾಲೋಚಕರ ನಡುವಣ ಹಲವು ಸುತ್ತುಗಳ ಮಾತುಕತೆಗಳ ಬಳಿಕ ಭಾರತ - ಚೀನಾ ಗಡಿ ಪ್ರದೇಶಗಳಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ LCAದ ಉದ್ದಕ್ಕೂ ಗಸ್ತು ವ್ಯವಸ್ಥೆಗಳ ಕುರಿತು ಒಪ್ಪಂದಕ್ಕೆ ಬರಲಾಗಿದೆ. 2020 ರಲ್ಲಿ ಈ ಪ್ರದೇಶಗಳಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಹಾರ ಮತ್ತು ತಟಸ್ಥತೆಗೆ ಕಾರಣವಾಗುತ್ತದೆ. ಭಾರತ ಮತ್ತು ಚೀನಾ ಈ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಸುದ್ಧಿಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಿಷ್ಟು:ಇಂದು ಕಜಾನ್‌ಗೆ ಪ್ರಧಾನಿ ಮೋದಿಯವರ ಭೇಟಿಯ ಕುರಿತು ವಿಶೇಷ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಎಲ್‌ಎಸಿ ಉದ್ದಕ್ಕೂ ಗಡಿ ಗಸ್ತು ತಿರುಗುವ ಕುರಿತು ಭಾರತ - ಚೀನಾ ಒಪ್ಪಂದಕ್ಕೆ ಬರುತ್ತಿರುವ ಪ್ರಶ್ನೆಗೆ ಉತ್ತರಿಸಿದರು. "ಚರ್ಚೆಯಲ್ಲಿರುವ ಬಾಕಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆ ಮತ್ತು ವಾಸ್ತವವಾಗಿ ಕುರಿಗಾಯಿಗಳ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಗಿದೆ. 2020 ರಲ್ಲಿ ಗಡಿಯಲ್ಲಿ ಯಾವ ಪ್ರಕ್ರಿಯೆಗಳಿದ್ದವು ಅವೆಲ್ಲವನ್ನು ಮರುಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

"ಈ ಹಿಂದೆ ಮಾಡಿಕೊಂಡಿರುವ ಒಪ್ಪಂದಗಳ ಬಗ್ಗೆ ಹೇಳುವುದಾದರೆ, ಈ ಚರ್ಚೆಗಳಲ್ಲಿ ಆ ಒಪ್ಪಂದಗಳನ್ನು ಮತ್ತೆ ಪ್ರಸ್ತಾಪ ಮಾಡಲಾಗಿಲ್ಲ. ನಿನ್ನೆ ತಲುಪಿದ ಒಪ್ಪಂದವು ಕಳೆದೆರಡು ವರ್ಷಗಳಲ್ಲಿ ಬಾಕಿ ಉಳಿದಿರುವ ವಿಷಯಗಳ ಮೇಲೆ ಕೇಂದ್ರೀಕರಿಸಿದೆ" ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಮೇ 2020 ರಲ್ಲಿ ಏನಾಗಿತ್ತು?:ಮೇ 2020 ರಲ್ಲಿ, ಲಡಾಖ್ ಪ್ರದೇಶದಲ್ಲಿನ ಗಡಿ ವಿವಾದದಿಂದಾಗಿ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಉಂಟಾಗಿತ್ತು. ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆಗಳು ಸಂಭವಿಸಿದ್ದವು, ಅಲ್ಲಿ ಎರಡೂ ಕಡೆಯ ಸೈನಿಕರು ಮುಖಾಮುಖಿಯಾದರು. ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಎರಡೂ ದೇಶಗಳು ತಮ್ಮ ಸ್ಥಾನಗಳನ್ನು ಬಲಪಡಿಸುವುದರೊಂದಿಗೆ ಗಮನಾರ್ಹವಾದ ಮಿಲಿಟರಿ ಸಂಘರ್ಷಕ್ಕೆ ಕಾರಣವಾಗಿತ್ತು.

ಈ ಸಂಘರ್ಷವು ಜೂನ್ 15, 2020 ರಂದು ಹಿಂಸಾತ್ಮಕ ಮುಖಾಮುಖಿಯಲ್ಲಿ ಉತ್ತುಂಗಕ್ಕೇರಿತು. ಇದರ ಪರಿಣಾಮವಾಗಿ 20 ಭಾರತೀಯ ಸೈನಿಕರ ಸಾವನ್ನಪ್ಪಿದ್ದರು. ಅತ್ತ ಚೀನಾ ಕಡೆಯಿಂದಲೂ ಹಲವು ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಆದರೆ ಚೀನಾ ಸೇನೆ ಮಾತ್ರ ತನ್ನ ಎಷ್ಟು ಯೋಧರು ಮೃತಪಟ್ಟಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿಲ್ಲ. ಈ ಘಟನೆಯು ಉಭಯ ರಾಷ್ಟ್ರಗಳ ನಡುವಣ ರಾಜತಾಂತ್ರಿಕ ಉದ್ವಿಗ್ನತೆಯನ್ನು ಹೆಚ್ಚಿಸಿತ್ತು. ಮತ್ತು ಎರಡೂ ರಾಷ್ಟ್ರಗಳ ಮಿಲಿಟರಿ ಕಾರ್ಯತಂತ್ರಗಳನ್ನು ಹೆಚ್ಚಿಸಲು ಕಾರಣವಾಗಿತ್ತು.

ಏತನ್ಮಧ್ಯೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸೋಮವಾರ ಭಾರತ ಮತ್ತು ಚೀನಾದ ವಿಘಟನೆ ಪ್ರಕ್ರಿಯೆಯನ್ನು ವಿವರಿಸಿದರು, ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಪರಿಸ್ಥಿತಿಯು ಮೇ 2020 ರ ಮೊದಲು ಇದ್ದ ಸ್ಥಿತಿಗೆ ಮರಳಿದೆ ಎಂದು ಹೇಳಿದ್ದರು.

ಲಡಾಖ್‌ನಲ್ಲಿ 2020 ರ ನಂತರ ಗಸ್ತು ತಿರುಗಲು ಎರಡೂ ಕಡೆಯಿಂದ ನಿರ್ಬಂಧಿಸಲಾದ ಕೆಲವು ಪ್ರದೇಶಗಳಿವೆ ಎಂದು ಅವರು ಹೇಳಿದರು. ಎರಡು ದೇಶಗಳು ಈಗ ಗಸ್ತು ತಿರುಗಲು ಅನುವು ಮಾಡಿಕೊಡುವ ತಿಳಿವಳಿಕೆಗೆ ಬಂದಿವೆ ಎಂದು ವಿದೇಶಾಂಗ ಸಚಿವರು ಪ್ರಕಟಿಸಿದ್ದಾರೆ.

ಇವುಗಳನ್ನು ಓದಿ:ರಷ್ಯಾ-ಉಕ್ರೇನ್​ ಯುದ್ಧ ಕೊನೆಗೊಳಿಸಲು ಭಾರತದಿಂದ ಸರ್ವ ಸಹಕಾರ: ಮೋದಿ ಪುನರುಚ್ಚಾರ

ಭಾರತದೊಂದಿಗೆ ಗಡಿ ಗಸ್ತು ವ್ಯವಸ್ಥೆ ಒಪ್ಪಂದ ದೃಢಪಡಿಸಿದ ಚೀನಾ

ಜಗತ್ತಿನ ಅತ್ಯಂತ ಮಲಿನ ನಗರ ಯಾವುದು ಗೊತ್ತೆ? ಇದು ನಮ್ಮ ನೆರೆ ದೇಶದಲ್ಲೇ ಇದೆ!

ಸಿರಿಯಾ ರಾಜಧಾನಿ ಮೇಲೆ ಇಸ್ರೇಲ್​ ದಾಳಿ; ಇಬ್ಬರು ಸಾವು, ಮೂವರಿಗೆ ಗಾಯ

ರಷ್ಯಾದಲ್ಲಿ ಭಾರತೀಯ ಚಲನಚಿತ್ರಗಳು ಜನಪ್ರಿಯ: 'ಸ್ನೇಹಿತ' ಮೋದಿಗೆ ರಷ್ಯಾದ 'ಕೃತಜ್ಞತೆ' ಎಂದ ಪುಟಿನ್​

ABOUT THE AUTHOR

...view details