ಕರ್ನಾಟಕ

karnataka

ETV Bharat / international

ಹವಾಮಾನ ಬದಲಾವಣೆ ನಿರ್ವಹಣೆ: ಹೆಚ್ಚುವರಿ ನೆರವು ಕೋರಿ ಐಎಂಎಫ್ ಮೊರೆ ಹೋದ ಪಾಕ್‌ - PAKISTAN SEEKING MONEY FROM IMF

ಹವಾಮಾನ ಬದಲಾವಣೆ ನಿರ್ವಹಣೆಗೆ ಹೆಚ್ಚುವರಿ ಹಣಕಾಸು ನೆರವು ಕೋರಿ ಪಾಕಿಸ್ತಾನದ ಹಣಕಾಸು ಸಚಿವ ಮೊಹಮ್ಮದ್​ ಔರಂಗಜೇಬ್ ಐಎಂಎಫ್‌ಗೆ​ ಮನವಿ ಮಾಡಿದ್ದಾರೆ.

pakistan-seeks-additional-2-dollars-billion-from-imf-to-combat-climate-change
ಪಾಕಿಸ್ತಾನದ ಧ್ವಜ ಮತ್ತು ಐಎಂಎಫ್ ಹಿಹ್ನೆ (ETV Bharat)

By ANI

Published : Oct 21, 2024, 3:06 PM IST

ಇಸ್ಲಾಮಾಬಾದ್​: ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮ ಎದುರಿಸಲು ಹೆಚ್ಚುವರಿಯಾಗಿ 2 ಮಿಲಿಯನ್​ ಡಾಲರ್​ ಹಣಕಾಸು ನೆರವು​ ನೀಡುವಂತೆ ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)​ಗೆ ಮನವಿ ಮಾಡಿದೆ.

ಈ ತಿಂಗಳಾಂತ್ಯದಲ್ಲಿ ಐಎಂಎಫ್​ ಸಭೆ ನಿಗದಿಯಾಗಿದೆ. ಹೀಗಾಗಿ, ಹೆಚ್ಚುವರಿ ನಿಧಿ ನೀಡುವಂತೆ ಪಾಕಿಸ್ತಾನ ಹಣಕಾಸು ಸಚಿವ ಮೊಹಮ್ಮದ್​ ಔರಂಗಜೇಬ್​ ಮನವಿ ಮಾಡಿದ್ದಾರೆ.

ಅಕ್ಟೋಬರ್​ 21ರಿಂದ ಅಕ್ಟೋಬರ್​ 26ರವರೆಗೆ ಅಮೆರಿಕದ ವಾಷಿಂಗ್ಟನ್​ ಡಿಸಿಯಲ್ಲಿ ಐಎಂಎಫ್​ ಮತ್ತು ವಿಶ್ವಬ್ಯಾಂಕ್​ ಗ್ರೂಪ್​ನ ವಾರ್ಷಿಕ ಸಭೆ ಆಯೋಜನೆಯಾಗಿದೆ.

ಹೆಚ್ಚುವರಿ ಸಾಲ ಮರುಪಾವತಿಸುವ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಈಗಾಗಲೇ ಐಎಂಎಫ್​ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಹಲವು ಇಸ್ರೇಲ್​ ಸೈನಿಕರನ್ನು ಹತ್ಯೆ ಮಾಡಿದ್ದೇವೆ: ಹಮಾಸ್​ ಘೋಷಣೆ

ABOUT THE AUTHOR

...view details