ಕರ್ನಾಟಕ

karnataka

ETV Bharat / international

ನನ್ನನ್ನು ಮದುವೆಯಾಗುತ್ತೀರಾ? ಪ್ರಚಾರದ ನಡುವೆಯೇ ನಿಕ್ಕಿ ಹ್ಯಾಲೆಗೆ ಟ್ರಂಪ್​ ಬೆಂಬಲಿಗನಿಂದ ಮದುವೆ ಪ್ರಸ್ತಾಪ

ನಿಕ್ಕಿ ಹ್ಯಾಲೆ ಪ್ರಚಾರದ ಸಂದರ್ಭದಲ್ಲಿ ಟ್ರಂಪ್​ ಬೆಂಬಲಿಗನೊಬ್ಬ ಮದುವೆ ಪ್ರಸ್ತಾಪವನ್ನು ಇಟ್ಟಿರುವ ವಿಡಿಯೋ ವೈರಲ್​ ಆಗಿದೆ.

Nikki Haley got marriage proposal
Nikki Haley got marriage proposal

By ETV Bharat Karnataka Team

Published : Jan 24, 2024, 1:39 PM IST

Updated : Jan 25, 2024, 9:22 PM IST

ನ್ಯೂಯಾರ್ಕ್​: ಅಮೆರಿಕದ ರಿಪಬ್ಲಿಕನ್​ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಪ್ರಚಾರದ ವೇಳೆ ವ್ಯಕ್ತಿಯೊಬ್ಬ 'ನನ್ನನ್ನು ಮದುವೆಯಾಗುತ್ತೀಯಾ' ಎಂದು ಕೇಳಿರುವುದು ಎಲ್ಲರ ಗಮನ ಸೆಳೆದಿದೆ. ಅದು ಹ್ಯಾಲೆ ವಿರೋಧಿ ಡೋನಾಲ್ಡ್​ ಟ್ರಂಪ್​ ಬೆಂಬಲಿಗನಿಂದ ಈ ಮದುವೆ ಪ್ರಸ್ತಾಪ ಬಂದಿರುವುದು ವಿಶೇಷವಾಗಿದೆ.

ಅಮೆರಿಕದ ಹ್ಯಾಂಪ್​ಶೈರ್​​​​ನಲ್ಲಿ ಸದ್ಯ 52 ವರ್ಷದ ನಿಕ್ಕಿ ಹ್ಯಾಲೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಲ್ಲಿನ ಸಲೆಂನ ಅರ್ಟಿಸನ್​ ಹೋಟೆಲ್​ನಲ್ಲಿ ಅವರು, ಗಂಭೀರ ವಿಷಯಗಳ ಕುರಿತು ಪ್ರಸ್ತಾಪ ಮಾಡುವ ಮೂಲಕ ಪ್ರಚಾರ ನಡೆಸಿದ್ದರು.

ಈ ವೇಳೆ ಜನಸಂದಣಿ ಮಧ್ಯೆ ಟ್ರಂಪ್​ ಬೆಂಬಲಿಗ ಮದುವೆ ಪ್ರಸ್ತಾಪ ಮಾಡಿದ್ದಾನೆ. ಆಗ ಇಡೀ ಸಭಾಂಗಣ ಸೇರಿದಂತೆ ನಿಕ್ಕಿ ನಗೆಗಡಲಲ್ಲಿ ತೇಲಿದರು.

ಸಾವರಿಸಿಕೊಂಡು ಉತ್ತರಿಸಿದ ನಿಕ್ಕಿ, ನನ್ನ ಪರವಾಗಿ ಮತ ಚಾಲಾಯಿಸುತ್ತೀಯಾ? ಎಂದು ಮರು ಪ್ರಶ್ನಿಸಿದ್ದಾರೆ. ಇದಕ್ಕೆ ಆತ, ಟ್ರಂಪ್​ ಪರವಾಗಿ ಮತ ಹಾಕುವುದಾಗಿ ಹೇಳಿದ್ದಾನೆ. ತಕ್ಷಣಕ್ಕೆ ಇಲ್ಲಿಂದ ಹೊರಡುವಂತೆ ನಯವಾಗಿ ಆತನ ಮನವಿಯನ್ನು ಹ್ಯಾಲೆ ತಿರಸ್ಕರಿಸಿದ್ದಾರೆ. ಈ ವಿಡಿಯೋವನ್ನು ಬೆನ್ನಿ ಜಾನ್ಸನ್​ ಎಂಬ ರಾಜಕೀಯ ಟೀಕಾಕಾರ ತಮ್ಮ ಎಕ್ಸ್​​ನಲ್ಲಿ ಪೋಸ್ಟ್​​ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಅನೇಕ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿದೆ.

'ತಮ್ಮ ಪರವಾಗಿ ಮತ ಚಲಾಯಿಸುವಂತೆ ಆ ವ್ಯಕ್ತಿ ಮನವೊಲಿಸುವಲ್ಲಿ ನಿಕ್ಕಿ ಸೋತಿದ್ದಾರೆ' ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು, 'ಎಂತಹ ಹಾಸ್ಯ, ಯಾರಿಗೂ ನಿಕ್ಕಿ ಬೇಡ. ನಮಗೆ ಟ್ರಂಪ್​ ಬೇಕು' ಎಂದು ಬರೆದಿದ್ದಾರೆ.

ಸೌತ್​​​ ಕರೊಲಿನಾದಲ್ಲಿ ಎರಡು ಬಾರಿ ಗವರ್ನರ್​ ಆಗಿ ಸೇವೆ ಸಲ್ಲಿಸಿರುವ ಹ್ಯಾಲೆ, 1996ರಲ್ಲಿ ವಿಲಿಯಂ ಮಿಷೆಲ್​ ಹ್ಯಾಲೆ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಈ ಸಂಬಂಧವಾಗಿ ಅವರು ರೀನಾ ಎಂಬ ಮಗಳು ಮತ್ತು ನಲಿನ್​ ಎಂಬ ಮಗನನ್ನು ಪಡೆದಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಕಣದಲ್ಲಿರುವ ಏಕೈಕ ಮಹಿಳೆ ನಿಕ್ಕಿ ಹ್ಯಾಲೆಯಾಗಿದ್ದು, ಟ್ರಂಪ್​ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ವಾಷಿಂಗ್ಟನ್​ ಪೋಸ್ಟ್​ ಸಮೀಕ್ಷೆ ಪ್ರಕಾರ ಡೊನಾಲ್ಡ್​​ ಟ್ರಂಪ್​ ಶೇ 52ರಷ್ಟು ಬೆಂಬಲವನ್ನು ಪಡೆದರೆ, ಸೌತ್​​ ಕರೊಲಿನಾ ಮಾಜಿ ಗವರ್ನರ್​ ನಿಕ್ಕಿ ಹ್ಯಾಲೆ ಶೇ 34ರಷ್ಟು ಬೆಂಬಲ ಪಡೆದಿದ್ದಾರೆ. ಇನ್ನು ತಮ್ಮ ಈ ಅಧ್ಯಕ್ಷ ಚುನಾವಣೆ ಕುರಿತು ಮಾತನಾಡಿರುವ ನಿಕ್ಕಿ, ಸಾಕಷ್ಟು ದೂರ ಮುಂದೆ ಬಂದಾಗಿದೆ. ಹಿಂದೆ ಸರಿಯುವ ಮಾತಿಲ್ಲ ಎಂದಿದ್ದರು. (ಐಎಎನ್​ಎಸ್​)

ಇದನ್ನೂ ಓದಿ: ಟ್ರಂಪ್​ ಬೆಂಬಲಿಸಿ ಹ್ಯಾಲೆ, ಡಿಸಾಂಟಿಸ್ ಕಣದಿಂದ ಹಿಂದೆ ಸರಿಯಲಿ; ವಿವೇಕ್ ರಾಮಸ್ವಾಮಿ ಆಗ್ರಹ

Last Updated : Jan 25, 2024, 9:22 PM IST

ABOUT THE AUTHOR

...view details