ಕರ್ನಾಟಕ

karnataka

By IANS

Published : 4 hours ago

ETV Bharat / international

ಸಿರಿಯಾ, ಲೆಬನಾನ್​​​​​​​​ನಲ್ಲಿ ಇಸ್ರೇಲಿ ವೈಮಾನಿಕ ದಾಳಿ: ನಸ್ರುಲ್ಲಾ ಅಳಿಯನ ಹತ್ಯೆ - Nasrallahs son in law killed

ಹೆಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್​ ನಿರಂತರ ದಾಳಿ ಮುಂದುವರೆಸಿದೆ. ಹಿಜ್ಬುಲ್ಲಾ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ್ದ ಇಸ್ರೇಲ್ ಈಗ ನಸ್ರುಲ್ಲಾನ ಅಳಿಯನನ್ನು ಕೊಂದು ಹಾಕಿದೆ ಎಂದು ವರದಿಯಾಗಿದೆ.

Nasrallah's son-in-law killed in Israeli airstrike in Syria: Monitor
ಸಿರಿಯಾದಲ್ಲಿ ಇಸ್ರೇಲಿ ವೈಮಾನಿಕ ದಾಳಿ: ನಸ್ರಲ್ಲಾ ಅಳಿಯ ಹತ್ಯೆ (IANS)

ಡಮಾಸ್ಕಸ್: ಹಿಜ್ಬುಲ್ಲಾ ನಾಯಕ, ಸಯ್ಯದ್ ಹಸನ್ ನಸ್ರುಲ್ಲಾ ಅವರ ಅಳಿಯ ಹಸನ್ ಜಾಫರ್ ಖಾಸಿರ್ ಸೇರಿದಂತೆ ಇಬ್ಬರು ಲೆಬನಾನ್ ಪ್ರಜೆಗಳು ಡಮಾಸ್ಕಸ್‌ನ ಮಜ್ಜೆ ವೆಸ್ಟರ್ನ್ ವಿಲ್ಲಾಸ್ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಹತರಾಗಿದ್ದಾರೆ ಎಂದು ವಾರ್​ ಮಾನಿಟರ್ ವರದಿ ಮಾಡಿದೆ.

ಇಸ್ರೇಲಿ ವಾಯುಪಡೆ ಬುಧವಾರ ಹೆಜ್ಬುಲ್ಲಾ ಮತ್ತು ಇರಾನ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನಾಯಕರು ಆಗಾಗ್ಗೆ ಭೇಟಿ ನೀಡುವ ಮೂರು ಅಂತಸ್ತಿನ ಕಟ್ಟಡದ ಮೊದಲ ಮಹಡಿ ಮೇಲೆ ಈ ದಾಳಿ ನಡೆಸಿದೆ. ದಾಳಿಯಲ್ಲಿ ಇಬ್ಬರು ಸಿರಿಯನ್ನರಲ್ಲದವರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಸ್ರೇಲ್​ ನಡೆಸಿದ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಸಿರಿಯನ್ ರಕ್ಷಣಾ ಸಚಿವಾಲಯ ಹೇಳಿದೆ. ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನಿಂದ ಈ ದಾಳಿ ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸೆಪ್ಟೆಂಬರ್ 27 ರಂದು ಲೆಬನಾನಿನ ರಾಜಧಾನಿ ಬೈರುತ್‌ನಲ್ಲಿ ಇಸ್ರೇಲ್ ಪ್ರಬಲ ವೈಮಾನಿಕ ದಾಳಿ ನಡೆಸಿ ನಸ್ರುಲ್ಲಾನನ್ನು ಹತ್ಯೆ ಮಾಡಿತ್ತು. ಸಿರಿಯಾದಲ್ಲಿಇಸ್ರೇಲ್​ ನಡೆಸಿದ ಎರಡನೇ ವೈಮಾನಿಕ ದಾಳಿ ಇದಾಗಿದೆ ಎಂದು ವರದಿಯಾಗಿದೆ.

ಲೆಬನಾನ್​ ಮೇಲೂ ದಾಳಿ: ಕನಿಷ್ಠ ಐದು ಸಾವು;ಮತ್ತೊಂದು ಕಡೆ ಲೆಬನಾನ್​ ಮೇಲೂ ಇಸ್ರೇಲ್​ ಪಡೆಗಳು ದಾಳಿ ನಡೆಸಿವೆ. ಮಧ್ಯ ಬೈರುತ್‌ನ ಅಲ್-ಬಚೌರಾ ಪ್ರದೇಶದಲ್ಲಿ ಹೆಜ್ಬುಲ್ಲಾಗೆ ಸಂಬಂಧಿಸಿದ ಆರೋಗ್ಯ ಪ್ರಾಧಿಕಾರ ಕೇಂದ್ರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಗುರುವಾರ ಮುಂಜಾನೆ ವೈಮಾನಿಕ ದಾಳಿ ನಡೆಸಿದ್ದು, ಭಾರಿ ಸ್ಫೋಟಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಟ್ಟಡದಿಂದ ಭಾರೀ ಕಪ್ಪು ಹೊಗೆ ಹೊರ ಸೂಸುತ್ತಿರುವುದನ್ನು ಟಿವಿ ದೃಶ್ಯಾವಳಿಗಳು ತೋರಿಸಿವೆ. ವೈಮಾನಿಕ ದಾಳಿಯು ಹತ್ತಿರದ ಮನೆಗಳು ಮತ್ತು ಪಾರ್ಕಿಂಗ್​ ವಾಹನಗಳಿಗೆ ಗಮನಾರ್ಹ ಹಾನಿಯನ್ನುಂಟು ಮಾಡಿದೆ ಎಂದು ವರದಿಯಾಗಿದೆ. ಆಂಬ್ಯುಲೆನ್ಸ್‌ಗಳು ಮತ್ತು ನಾಗರಿಕ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲೆಬನಾನ್‌ನ ಸಾರ್ವಜನಿಕ ಆರೋಗ್ಯ ಸಚಿವಾಲಯದ ಪ್ರಕಾರ, ಅಲ್-ಬಚೌರಾ ಪ್ರದೇಶದಲ್ಲಿ ನಡೆದ ವಾಯುದಾಳಿಯಲ್ಲಿ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ. ಮಧ್ಯ ಬೈರುತ್‌ನಲ್ಲಿ ದಾಳಿ ಮಾಡುವ ಸ್ವಲ್ಪ ಸಮಯಕ್ಕೆ ಮುನ್ನ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿನ ಹರೆಟ್ ಹ್ರೀಕ್ ಪ್ರದೇಶದ ಮೇಲೆ ಇಸ್ರೇಲ್ ಮೂರು ಪ್ರಬಲ ವೈಮಾನಿಕ ದಾಳಿಗಳನ್ನು ನಡೆಸಿತು ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನು ಓದಿ:ಇಸ್ರೇಲ್​ ಮೇಲೆ ಇರಾನ್​ನಿಂದ 200ಕ್ಕೂ ಅಧಿಕ ಕ್ಷಿಪಣಿ ದಾಳಿ - Iran Missile Attack On Israel

ABOUT THE AUTHOR

...view details