ಕರ್ನಾಟಕ

karnataka

ETV Bharat / international

ಅಮೆರಿಕದಿಂದ ಭಾರತೀಯರ ಗಡೀಪಾರು: ಅಕ್ರಮ ವಲಸೆ ತಡೆಯ ಸಹಜ ಪ್ರಕ್ರಿಯೆ - US INDIANS DEPORTATION

ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ದೇಶದಿಂದ ಗಡೀಪಾರು ಮಾಡಲು ಅಮೆರಿಕ ಘೋಷಿಸಿದೆ. ಇದು ಮಾನವ ಕಳ್ಳಸಾಗಣೆ ತಡೆಯ ಸಹಜ ಪ್ರಕ್ರಿಯೆ ಎಂದಿದೆ.

ಅಮೆರಿಕದಿಂದ ಭಾರತೀಯರ ಗಡೀಪಾರು
ಅಮೆರಿಕದಿಂದ ಭಾರತೀಯರ ಗಡೀಪಾರು (ETV Bharat)

By PTI

Published : Oct 27, 2024, 3:31 PM IST

ನವದೆಹಲಿ:ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ತಾಯ್ನಾಡಿಗೆ ಗಡೀಪಾರು ಮಾಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ಇದು ಎರಡು ರಾಷ್ಟ್ರಗಳ ನಡುವಿನ ಸಾಮಾನ್ಯ ಪ್ರಕ್ರಿಯೆ, ಅಕ್ರಮ ವಲಸೆಯನ್ನು ತಡೆಯುವ ವಿಧಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರವಷ್ಟೇ ಅಮೆರಿಕನ್​ ಅಧಿಕಾರಿಗಳು ದೇಶದಲ್ಲಿ ಅಕ್ರಮವಾಗಿ ತಂಗಿರುವ ಭಾರತೀಯ ಪ್ರಜೆಗಳ ಗಡೀಪಾರಿಗೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದರು. ಎರಡೂ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯವಿದ್ದರೂ, ಭಾರತೀಯರ ಗಡೀಪಾರು ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ, ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಎರಡೂ ರಾಷ್ಟ್ರಗಳು ಸಹಕಾರದ ಭಾಗವಾಗಿ ಅಕ್ರಮ ವಲಸೆಯನ್ನು ತಡೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಅಕ್ಟೋಬರ್ 22 ರಂದು ಅಮೆರಿಕನ್​ ವಲಸೆ ಮತ್ತು ಕಸ್ಟಮ್ಸ್ ಎನ್​ಫೋರ್ಸ್​ಮೆಂಟ್​ (ICE) ಮೂಲಕ ಅಮೆರಿಕನ್​ ಡಿಪಾರ್ಟ್​ಮೆಂಟ್​ ಆಫ್ ಹೋಮ್​​ಲ್ಯಾಂಡ್​​ ಸೆಕ್ಯುರಿಟಿ (DHS) ಪ್ರಕಾರ, ಅಮೆರಿಕದಲ್ಲಿ ಉಳಿದುಕೊಳ್ಳಲು ಅಗತ್ಯ ನಿಯಮಗಳನ್ನು ಪಾಲಿಸದ ವಲಸಿಗರನ್ನು ದೇಶದಿಂಧ ಹೊರಕಳುಹಿಸಲಾಗುವುದು ಎಂದಿದೆ.

ಅಕ್ರಮ ವಲಸೆ, ಮಾನವ ಕಳ್ಳಸಾಗಣೆಯನ್ನು ತಡೆಯಲು ಭಾರತ ಸರ್ಕಾರ ಮತ್ತು ಇತರ ಅಂತಾರಾಷ್ಟ್ರೀಯ ಪಾಲುದಾರ ಸಂಸ್ಥೆಗಳ ಜೊತೆಗೂಡಿ ಈ ಸುಸ್ಥಿರ ಸಹಕಾರವನ್ನು ಮುಂದುವರೆಸಲು ನಿರಂತರ ಬದ್ಧತೆಯನ್ನು ಪ್ರದರ್ಶಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡೀಪಾರು ನಿರಂತರ:ಚಾರ್ಟರ್ಡ್ ವಿಮಾನದ ಮೂಲಕ ಭಾರತೀಯ ಪ್ರಜೆಗಳ ಇತ್ತೀಚಿನ ಗಡೀಪಾರು ಸಹಕಾರದ ಭಾಗವಾಗಿದೆ. ಇಂತಹ ಗಡೀಪಾರುಗಳು ಹಲವಾರು ವರ್ಷಗಳಿಂದ ನಡೆಯುತ್ತಿವೆ. 2024 ರ ಆರ್ಥಿಕ ವರ್ಷದಲ್ಲಿ ಅಮೆರಿಕದ ಅಕ್ರಮ ವಲಸೆ ತಡೆ ಸಂಸ್ಥೆಗಳು 1,60,000ಕ್ಕೂ ಹೆಚ್ಚು ವ್ಯಕ್ತಿಗಳನ್ನು ದೇಶದಿಂದ ಹಿಂದಿರುಗಿಸಿವೆ. ಭಾರತ ಸೇರಿದಂತೆ 145 ಕ್ಕೂ ಹೆಚ್ಚು ದೇಶಗಳಿಗೆ 495 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಾಪಸಾತಿ ವಿಮಾನಗಳನ್ನು ರವಾನಿಸಿದೆ.

ಇದನ್ನೂ ಓದಿ:ವರ್ಷದ 11ನೇ ಚಂಡಮಾರುತಕ್ಕೆ ತತ್ತರಿಸಿದ ಫಿಲಿಪ್ಪೀನ್ಸ್‌​: 130 ಮಂದಿ ಸಾವು

ABOUT THE AUTHOR

...view details