ಕರ್ನಾಟಕ

karnataka

'ಅವಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಕಷ್ಟ' ಮಾಜಿ ಯೂಟ್ಯೂಬ್ ಸಿಇಒ ಸುಸಾನ್ ನಿಧನಕ್ಕೆ ಸುಂದರ್ ಪಿಚೈ ಸಂತಾಪ - ex YouTube CEO Susan Wojcicki

By ETV Bharat Karnataka Team

Published : Aug 11, 2024, 1:25 PM IST

ಮಾಜಿ ಯೂಟ್ಯೂಬ್ ಸಿಇಒ ಸುಸಾನ್ ನಿಧನಕ್ಕೆ ಸುಂದರ್ ಪಿಚೈ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಯೂಟ್ಯೂಬ್ ಸಿಇಒ ಸುಸಾನ್ ವೊಜ್ಕಿಕಿ
ಮಾಜಿ ಯೂಟ್ಯೂಬ್ ಸಿಇಒ ಸುಸಾನ್ ವೊಜ್ಕಿಕಿ (IANS)

ನವದೆಹಲಿ: ಗೂಗಲ್ ಕಂಪನಿಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಸುಸಾನ್ ವೊಜ್ಕಿಕಿ ಎರಡು ವರ್ಷಗಳ ಕಾಲ ಕ್ಯಾನ್ಸರ್​ನೊಂದಿಗೆ ಹೋರಾಡಿದ ನಂತರ ನಿಧನರಾದರು ಎಂದು ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಶನಿವಾರ ತಿಳಿಸಿದ್ದಾರೆ.

"ಯೂಟ್ಯೂಬ್​ನ ಬೆಳವಣಿಗೆಯನ್ನು ರೂಪಿಸುವಲ್ಲಿ ವೊಜ್ಕಿಕಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ಯಾನ್ಸರ್​ನೊಂದಿಗೆ ಎರಡು ವರ್ಷಗಳ ಕಾಲ ಸೆಣಸಿದ ನಂತರ ನಿಧನರಾದ ನನ್ನ ಆತ್ಮೀಯ ಸ್ನೇಹಿತೆ ಸುಸಾನ್ ವೊಜ್ಕಿಕಿ ಅವರನ್ನು ಕಳೆದುಕೊಂಡು ಅಪಾರ ದುಃಖಿತನಾಗಿದ್ದೇನೆ. ಆಕೆ ಗೂಗಲ್ ಗೂಗಲ್ ಇತಿಹಾಸದ ಕೇಂದ್ರಬಿಂದುವಾಗಿದ್ದಾಳೆ ಮತ್ತು ಅವಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಕಷ್ಟ" ಎಂದು ಪಿಚೈ ಸಾಮಾಜಿಕ ಮಾಧ್ಯಮ ಎಕ್ಸ್​ ಪ್ಲಾಟ್​ಫಾರ್ಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅವಳೊಬ್ಬ ಅದ್ಭುತ ವ್ಯಕ್ತಿ, ನಾಯಕಿ ಮತ್ತು ಸ್ನೇಹಿತೆಯಾಗಿದ್ದು, ಅವರು ವಿಶ್ವದ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ ಎಂದು ಪಿಚೈ ಹೇಳಿದ್ದಾರೆ. "ಆಕೆಯಿಂದ ಉತ್ತಮವಾದುದನ್ನು ಪಡೆದ ಅಸಂಖ್ಯಾತ ಗೂಗಲ್ ಬಳಕೆದಾರರಲ್ಲಿ ನಾನೂ ಒಬ್ಬ. ನಾವು ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಕುಟುಂಬದ ದುಃಖದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಗೂಗಲ್ ಸಿಇಒ ಪೋಸ್ಟ್ ಮಾಡಿದ್ದಾರೆ.

ಸುಸಾನ್ ವೊಜ್ಕಿಕಿ ಗೂಗಲ್​ನ ಆರಂಭಿಕ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರು ಮತ್ತು ಗೂಗಲ್​ನ ಅದ್ಭುತ ಜಾಹೀರಾತು ವ್ಯವಸ್ಥೆ ಗೂಗಲ್​ ಆ್ಯಡ್​ ಸೆನ್ಸ್​ ಅನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿ ಅವರಿಗೆ 'ಗೂಗಲ್ ಸಂಸ್ಥಾಪಕರ ಪ್ರಶಸ್ತಿ' (Google Founders Award) ನೀಡಿ ಗೌರವಿಸಲಾಗಿದೆ. ಯೂಟ್ಯೂಬ್​ನ ಸಿಇಒ ಆಗಿದ್ದ ಅವರ ಅಧಿಕಾರಾವಧಿಯಲ್ಲಿ ಯೂಟ್ಯೂಬ್​ ಜಾಗತಿಕ ಶಕ್ತಿ ಕೇಂದ್ರವಾಗಿ ಬೆಳವಣಿಗೆಯಾಯಿತು ಮತ್ತು ಆ ಮೂಲಕ ಇದು ಲಕ್ಷಾಂತರ ಕಂಟೆಂಟ್​ ಕ್ರಿಯೇಟರ್ಸ್​ ಮತ್ತು ಶತಕೋಟಿ ವೀಕ್ಷಕರಿಗೆ ಅನುಕೂಲ ಮಾಡಿತು.

ವೊಜ್ಕಿಕಿ ಅವರು ಉತ್ಪನ್ನಗಳ ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರ ವಹಿಸಿದ್ದು ಮಾತ್ರವಲ್ಲದೆ ತಂತ್ರಜ್ಞಾನದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯಕ್ಕಾಗಿ ಕೂಡ ಅವರು ಪ್ರಯತ್ನಿಸಿದ್ದು ಈಗ ಇತಿಹಾಸ. ಈ ಮೂಲಕ ಅವರು ಮಾದರಿ ವಿಶ್ವ ನಾಯಕರಾಗಿದ್ದಾರೆ.

ವೊಜ್ಕಿಕಿ ಮಾರ್ಕೆಟಿಂಗ್ ವಿಭಾಗವನ್ನು ನಿರ್ವಹಿಸಿದರು, ಗೂಗಲ್ ಇಮೇಜ್ ಸರ್ಚ್ ಅನ್ನು ಸಹ-ರಚಿಸಿದರು, ಗೂಗಲ್​ನ ಮೊದಲ ವೀಡಿಯೊ ಮತ್ತು ಪುಸ್ತಕ ಸರ್ಚ್ ವ್ಯವಸ್ಥೆಯನ್ನು ಮುನ್ನಡೆಸಿದರು, ಜೊತೆಗೆ ಆ್ಯಡ್​ ಸೆನ್ಸ್​ ರಚನೆಯ ಆರಂಭಿಕ ಹಂತವನ್ನು ಮುನ್ನಡೆಸಿದರು. 25 ವರ್ಷಗಳ ಕಾಲ ಗೂಗಲ್ ಒಡೆತನದ ಯೂಟ್ಯೂಬ್ ಸಿಇಒ ಆಗಿದ್ದ ವೊಜ್ಕಿಕಿ ಫೆಬ್ರವರಿ 2023 ರಲ್ಲಿ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಇದರ ನಂತರ ಭಾರತೀಯ-ಅಮೆರಿಕನ್ ನೀಲ್ ಮೋಹನ್ ಅವರನ್ನು ಯೂಟ್ಯೂಬ್​ನ ಹೊಸ ಸಿಇಒ ಆಗಿ ನೇಮಿಸಲಾಯಿತು.

ಇದನ್ನೂ ಓದಿ : ಗೂಗಲ್​ ಆವಿಷ್ಕಾರದ ತಂತ್ರಜ್ಞೆ, ಯೂಟ್ಯೂಬ್​ ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಕ್ಯಾನ್ಸರ್​​ಗೆ ಬಲಿ - Susan Wojcicki Dies

ABOUT THE AUTHOR

...view details