ಕರ್ನಾಟಕ

karnataka

ETV Bharat / international

ಪ್ಯಾಲೆಸ್ಟೈನ್​ಗೆ ರಾಷ್ಟ್ರದ ಮಾನ್ಯತೆ: ಐರ್ಲೆಂಡ್, ನಾರ್ವೆ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ಇಸ್ರೇಲ್ - Recognition of Palestine State - RECOGNITION OF PALESTINE STATE

ಐರ್ಲೆಂಡ್ ಮತ್ತು ನಾರ್ವೆಯಲ್ಲಿರುವ ತನ್ನ ರಾಯಭಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಸ್ರೇಲ್ ವಾಪಸ್ ಕರೆಸಿಕೊಂಡಿದೆ. Israel orders immediate recall of ambassadors to Ireland and Norway

ಐರ್ಲೆಂಡ್, ನಾರ್ವೆ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ಇಸ್ರೇಲ್
ಐರ್ಲೆಂಡ್, ನಾರ್ವೆ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ಇಸ್ರೇಲ್ (ians)

By ETV Bharat Karnataka Team

Published : May 22, 2024, 4:34 PM IST

ಜೆರುಸಲೇಂ : ಐರ್ಲೆಂಡ್ ಮತ್ತು ನಾರ್ವೆಯಲ್ಲಿರುವ ತನ್ನ ರಾಯಭಾರಿಗಳನ್ನು ಇಸ್ರೇಲ್ ವಾಪಸ್ ಕರೆಸಿಕೊಂಡಿದೆ. ಈ ಎರಡೂ ದೇಶಗಳಲ್ಲಿರುವ ರಾಯಭಾರಿಗಳನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳುವಂತೆ ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಂಟ್ಜ್ ಬುಧವಾರ ಆದೇಶಿಸಿದ್ದಾರೆ. ಐರ್ಲೆಂಡ್ ಮತ್ತು ನಾರ್ವೆಗಳು ಪ್ಯಾಲೆಸ್ಟೈನ್​ಗೆ ದೇಶದ ಮಾನ್ಯತೆ ನೀಡುವುದಾಗಿ ಘೋಷಣೆ ಮಾಡಿದ ನಂತರ ವ್ಯಗ್ರಗೊಂಡ ಇಸ್ರೇಲ್ ಈ ರಾಜತಾಂತ್ರಿಕ ಕ್ರಮಕ್ಕೆ ಮುಂದಾಗಿದೆ.

"ಇಸ್ರೇಲ್​ನ ಸಾರ್ವಭೌಮತ್ವ ದುರ್ಬಲಗೊಳಿಸುವ ಮತ್ತು ಭದ್ರತೆಗೆ ಅಪಾಯವನ್ನುಂಟು ಮಾಡುವವರ ವಿರುದ್ಧ ಸುಮ್ಮನಿರುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಾವು ರವಾನಿಸುತ್ತಿದ್ದೇವೆ" ಎಂದು ಕಾಟ್ಜ್ ಹೇಳಿದರು.

"ಐರ್ಲೆಂಡ್ ಮತ್ತು ನಾರ್ವೆ ಇಂದು ಪ್ಯಾಲೆಸ್ಟೈನಿಯರಿಗೆ ಮತ್ತು ಇಡೀ ಜಗತ್ತಿಗೆ ಭಯೋತ್ಪಾದನೆಗೂ ಗೌರವವಿದೆ ಎಂಬ ಸಂದೇಶವನ್ನು ಕಳುಹಿಸಲು ಉದ್ದೇಶಿಸಿವೆ. ಹೊಲೊಕಾಸ್ಟ್​ ನಂತರ ಹಮಾಸ್​ ಉಗ್ರರು ಯಹೂದಿಗಳ ಅತಿದೊಡ್ಡ ಹತ್ಯಾಕಾಂಡ ನಡೆಸಿದ ನಂತರ ಮತ್ತು ಯಹೂದಿಗಳ ಮೇಲೆ ಜಗತ್ತು ನೋಡಿದ ಅತ್ಯಂತ ಭಯಾನಕ ಲೈಂಗಿಕ ಅಪರಾಧಗಳನ್ನು ಎಸಗಿದ ನಂತರ ಈ ದೇಶಗಳು ಪ್ಯಾಲೆಸ್ಟೈನ್​ ಅನ್ನು ರಾಷ್ಟ್ರವಾಗಿ ಗುರುತಿಸುವ ಮೂಲಕ ಹಮಾಸ್ ಮತ್ತು ಇರಾನ್​ಗೆ ಬಹುಮಾನ ನೀಡಲು ನಿರ್ಧರಿಸಿವೆ" ಎಂದು ಅವರು ಹೇಳಿದರು.

ಉಭಯ ದೇಶಗಳ ಕ್ರಮವು ವಿಕೃತವಾಗಿದ್ದು, ಅಕ್ಟೋಬರ್ 7ರ ಸಂತ್ರಸ್ತರಿಗೆ ಅನ್ಯಾಯಕರವಾಗಿದೆ ಮತ್ತು 128 ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮರಳಿ ಕರೆತರುವ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೆಲ್ಲ ನೋಡಿ ಇಸ್ರೇಲ್ ಸುಮ್ಮನಿರುವುದಿಲ್ಲ. ಮತ್ತಷ್ಟು ತೀವ್ರ ಪರಿಣಾಮಗಳು ಉಂಟಾಗಲಿವೆ. ಸ್ಪೇನ್ ಇದೇ ಹಾದಿ ತುಳಿದಲ್ಲಿ ಅದರ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಟ್ಜ್ ಎಚ್ಚರಿಸಿದ್ದಾರೆ.

ಪ್ಯಾಲೆಸ್ಟೈನ್​ಗೆ ರಾಷ್ಟ್ರದ ಮಾನ್ಯತೆ ನೀಡುವುದಾಗಿ ಬುಧವಾರ ಘೋಷಿಸಿದ ನಾರ್ವೆ ಪ್ರಧಾನಿ ಜೊನಾಸ್ ಗಾಹ್ರ್ ಸ್ಟೋರ್, "ಪ್ಯಾಲೆಸ್ಟೈನ್​ಗೆ ಮಾನ್ಯತೆ ನೀಡದ ಹೊರತು ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ" ಎಂದು ಹೇಳಿದರು. ಪ್ಯಾಲೆಸ್ಟೈನ್​ಗೆ ರಾಷ್ಟ್ರದ ಮಾನ್ಯತೆ ನೀಡಲು ಯೋಜಿಸುತ್ತಿರುವುದಾಗಿ ಹಲವಾರು ಯುರೋಪಿಯನ್ ಯೂನಿಯನ್ ದೇಶಗಳು ಕಳೆದ ಕೆಲ ವಾರಗಳಿಂದ ಹೇಳುತ್ತಿವೆ. ಈ ಪ್ರದೇಶದಲ್ಲಿ ಶಾಶ್ವತ ಶಾಂತಿಗೆ ದ್ವಿ-ರಾಷ್ಟ್ರ ಮಾದರಿಯ ಪರಿಹಾರ ಅತ್ಯಗತ್ಯ ಎಂದು ಅವು ವಾದಿಸಿವೆ.

2011 ರಲ್ಲಿ ಪ್ಯಾಲೆಸ್ಟೈನ್ ಒಂದು ರಾಷ್ಟ್ರವಾಗಿ ಕಾರ್ಯನಿರ್ವಹಿಸಲು ಬೇಕಾದ ಪ್ರಮುಖ ಮಾನದಂಡಗಳನ್ನು ಪೂರೈಸಿದೆ ಮತ್ತು ತನ್ನ ಜನರಿಗೆ ಅಗತ್ಯವಾದ ಸೇವೆಗಳನ್ನು ಒದಗಿಸಲು ರಾಷ್ಟ್ರೀಯ ಸಂಸ್ಥೆಗಳನ್ನು ನಿರ್ಮಿಸಲಾಗಿದೆ ಎಂದು ವಿಶ್ವ ಬ್ಯಾಂಕ್ ನಿರ್ಧರಿಸಿದೆ ಎಂದು ನಾರ್ವೆ ಸರ್ಕಾರ ಪ್ರತಿಪಾದಿಸಿದೆ.

ಇದನ್ನೂ ಓದಿ : ಬೊಕೊ ಹರಾಮ್​ ಉಗ್ರರ ಬಳಿ ಒತ್ತೆಯಾಳಾಗಿದ್ದ 209 ಮಕ್ಕಳು ಸೇರಿ 350 ಜನರ ರಕ್ಷಣೆ - Boko Haram

ABOUT THE AUTHOR

...view details