ಜೆರುಸಲೇಂ: ಲೆಬನಾನ್ ಮತ್ತು ಸಿರಿಯಾ ಮೇಲೆ ಮಂಗಳವಾರ ವೈಮಾನಿಕ ದಾಳಿ ನಡೆದಿದ್ದು, ನೂರಾರು ಪೇಜರ್‌ಗಳು ಏಕಕಾಲದಲ್ಲಿ ಸ್ಫೋಟಗೊಂಡಿವೆ. ಸಿರಿಯಾದಲ್ಲಿ 9 ಜನ ಸಾವನ್ನಪ್ಪಿದ್ದು, 2,750ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಲೆಬನಾನ್‌ನಲ್ಲಿರುವ ಇರಾನ್‌ನ ರಾಯಭಾರಿ ಮತ್ತು ಹಿಜ್ಬುಲ್ಲಾದ ಪ್ರಮುಖ ನಾಯಕರೂ ಸೇರಿದ್ದಾರೆ.
ಇಸ್ರೇಲ್ ಕೈವಾಡ-ಹಿಜ್ಬುಲ್ಲಾ:ಪೇಜರ್ ಸ್ಫೋಟಗಳಿಗೆ ಇಸ್ರೇಲ್ ಕಾರಣ ಎಂದು ಹಿಜ್ಬುಲ್ಲಾ ದೂಷಿಸಿದೆ. ಈ ಅಪರಾಧ ಕೃತ್ಯಕ್ಕೆ ಇಸ್ರೇಲ್ ಹೊಣೆ ಎಂದಿದೆ. ಇನ್ನೊಂದೆಡೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ಸಲ್ಲಿಸುವುದಾಗಿ ಲೆಬನಾನ್ ಘೋಷಿಸಿದೆ.
ಪೇಜರ್ ಎಂದರೇನು?:ಸೆಲ್ ಫೋನ್‌ಗಳು ಬರುವ ಮೊದಲು ಮಾಹಿತಿ ತಿಳಿಸಲು ಪೇಜರ್‌ಗಳನ್ನು ಬಳಸಲಾಗುತ್ತಿತ್ತು. ಸೆಲ್ ಫೋನ್ ಗಾತ್ರದಷ್ಟೇ ಇರುವ ಈ ಪೇಜರ್‌ಗಳಿಂದ ಅಗತ್ಯ ಸಂದೇಶ ತಲುಪಿಸಬಹುದು. ಮೊದಲನೆಯದಾಗಿ, ನಾವು ಪೇಜರ್ ಕೇಂದ್ರಕ್ಕೆ ಕರೆ ಮಾಡಬೇಕು ಮತ್ತು ನಾವು ಯಾರಿಗೆ ಯಾವ ವಿಷಯದ ಬಗ್ಗೆ ತಿಳಿಸಬೇಕು ಎಂದು ಹೇಳಬೇಕು. ಆ ಕೇಂದ್ರದ ಪ್ರತಿನಿಧಿಯೊಬ್ಬರು ಸಂಬಂಧಪಟ್ಟ ವ್ಯಕ್ತಿಯ ಪೇಜರ್‌ಗೆ ಸಂದೇಶ ಕಳುಹಿಸುತ್ತಾರೆ. ಸಂದೇಶ ನೋಡಿದ ಬಳಿಕ ಆ ವ್ಯಕ್ತಿ ಸಾರ್ವಜನಿಕ ದೂರವಾಣಿ ಬೂತ್‌ನಿಂದ ಅಗತ್ಯವಿರುವವರಿಗೆ ಕರೆ ಮಾಡಿ ಮಾತನಾಡುತ್ತಾರೆ. ಇದನ್ನು ಪೇಜರ್ ಎನ್ನುತ್ತಾರೆ.
ಪೇಜರ್‌ಗಳ ಸ್ಫೋಟ, ಹಿಜ್ಬುಲ್ಲಾ ನಾಯಕರು ಮತ್ತು ಸಲಹೆಗಾರರನ್ನು ಗಾಯಗೊಳಿಸುವುದು ಮತ್ತು ಸಾಧನಗಳು ಬಹುತೇಕ ಏಕಕಾಲದಲ್ಲಿ ಸ್ಫೋಟಿಸಿರುವುದು ಇದು ಸಂಘಟಿತ ದಾಳಿ ಎಂಬ ಅನುಮಾನ ಹುಟ್ಟುಹಾಕಿದೆ. ರಹಸ್ಯ ಕಾರ್ಯಾಚರಣೆಯಲ್ಲಿ ಬಲಿಷ್ಠವಾಗಿರುವ ಇಸ್ರೇಲ್ ಗುಪ್ತಚರ ಸಂಸ್ಥೆಗಳು ಈ ಕೆಲಸ ಮಾಡಿರಬಹುದು ಎಂದು ಲೆಬನಾನ್ ಹೇಳುತ್ತಿದೆ.
ಹಿಜ್ಬುಲ್ಲಾ ಲೆಬನಾನ್‌ನಲ್ಲಿ ತನ್ನದೇ ಆದ ಸಂವಹನ ಜಾಲವನ್ನು ನಿರ್ವಹಿಸುತ್ತದೆ. ಈ ಗ್ಯಾಂಗ್ನ ಟೆಲಿಕಾಂ ನೆಟ್ವರ್ಕ್ಗೆ ಇಸ್ರೇಲ್ ನುಸುಳಿರುವ ಶಂಕೆ ವ್ಯಕ್ತವಾಗಿದೆ. ಏಕೆಂದರೆ, ಕಳೆದ ಅಕ್ಟೋಬರ್‌ನಿಂದ ಹಲವು ಹಿಜ್ಬುಲ್ಲಾ ಕಮಾಂಡರ್‌ಗಳು ಉದ್ದೇಶಿತ ದಾಳಿಯಲ್ಲಿ ಹತರಾಗಿದ್ದಾರೆ. ಇತ್ತೀಚಿನ ಘಟನೆ ಬಗ್ಗೆ ಇಸ್ರೇಲ್ ಇನ್ನೂ ಪ್ರತಿಕ್ರಿಯಿಸಿಲ್ಲ. ದಾಳಿ ಹೇಗೆ ನಡೆಯಿತು ಎಂಬುದರ ಬಗ್ಗೆ ವಿಭಿನ್ನ ವಾದಗಳಿವೆ.
ಮೊಬೈಲ್ ಫೋನ್‌ಗಳು ಬಳಸದಂತೆ ಎಚ್ಚರಿಕೆ:ಕಳೆದ ವರ್ಷ ಗಾಜಾ ಯುದ್ಧ ಪ್ರಾರಂಭವಾದಾಗಿನಿಂದ ಮೊಬೈಲ್ ಫೋನ್‌ಗಳನ್ನು ಬಳಸದಂತೆ ಹಿಜ್ಬುಲ್ಲಾ ತನ್ನ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದೆ. ಇಸ್ರೇಲಿ ಗೂಢಚರರು ತಮ್ಮೊಳಗೆ ನುಸುಳಬಹುದೆಂಬ ಆತಂಕದಿಂದ ಈ ರೀತಿ ಆದೇಶ ಮಾಡಲಾಗಿತ್ತು. ಈ ಗ್ಯಾಂಗ್ ಪೇಜರ್‌ಗಳನ್ನು ಹೆಚ್ಚಾಗಿ ಬಳಸುತ್ತಿದೆ. ಇವೂ ಕೂಡ ಇಸ್ರೇಲ್ ಕೆಂಗಣ್ಣಿಗೆ ಗುರಿಯಾಗಿವೆ. ಈಗ ಸ್ಫೋಟಗೊಂಡ ಪೇಜರ್‌ಗಳು ಇತ್ತೀಚಿನ ಮಾದರಿಗಳು ಎಂದು ವರದಿಗಳಿವೆ.
ಈ ಸಾಧನಗಳಲ್ಲಿ ಸ್ಫೋಟಕಗಳನ್ನು ಮೊದಲೇ ಅಳವಡಿಸಲಾಗಿತ್ತು ಎನ್ನಲಾಗಿದೆ. ಇದಕ್ಕಾಗಿ ಇರಾನ್‌ನ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡಿರಬಹುದೆಂದು ನಿರೀಕ್ಷಿಸಲಾಗಿದೆ. ಪ್ರತಿ ಪೇಜರ್ 1 ರಿಂದ 3 ಗ್ರಾಂ ಸ್ಫೋಟಕಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಪೇಜರ್‌ಗಳನ್ನು ಇತ್ತೀಚೆಗೆ ಲೆಬನಾನ್ ಮತ್ತು ಸಿರಿಯಾದಲ್ಲಿ ಹಲವಾರು ಜನರಿಗೆ ವಿತರಿಸಿದ ನಂತರ ರೇಡಿಯೊ ಆವರ್ತನದೊಂದಿಗೆ ಸ್ಫೋಟಿಸಲಾಗಿದೆ ಎಂದು ತಿಳಿದುಬರುತ್ತದೆ.
ಸೈಬರ್ ದಾಳಿ ಮೂಲಕ ಪೇಜರ್‌ಗಳಲ್ಲಿನ ಲಿಥಿಯಂ ಬ್ಯಾಟರಿಗಳನ್ನು ಅತಿಯಾಗಿ ಬಿಸಿಯಾಗುವಂತೆ ಮಾಡಿ ಈ ಸ್ಫೋಟಗಳನ್ನು ಮಾಡಿರಬಹುದು. ಹ್ಯಾಕರ್‌ಗಳು ಈ ಪೇಜರ್‌ಗಳಲ್ಲಿರುವ ಲಿಥಿಯಂ ಬಿಸಿಯಾಗುವಂತೆ ಉಪಕ್ರಮವನ್ನು ಉಪಯೋಗಿಸರಬಹುದು. ಇದರಿಂದಾಗಿ ಬ್ಯಾಟರಿ ಹೆಚ್ಚು ಬಿಸಿಯಾಗಲು ಮತ್ತು ಸ್ಫೋಟಗೊಳ್ಳಲು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ:ಇಂದು ಕಾಶ್ಮೀರದಲ್ಲಿ ಮೊದಲ ಹಂತದ ಚುನಾವಣೆ: 24 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ - Phase 1 Of Kashmir Elections