ಕರ್ನಾಟಕ

karnataka

ETV Bharat / international

ಶ್ರೀಲಂಕಾದ ಮೂರನೇ ಮಹಿಳಾ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ ಪ್ರಮಾಣ ಸ್ವೀಕಾರ - Harini Sri Lanka new PM

ಶ್ರೀಲಂಕಾವು ಹೊಸ ನಾಯಕತ್ವಕ್ಕೆ ತೆರೆದುಕೊಂಡಿದೆ. ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ದಿಸ್ಸಾನಾಯಕೆ ಅವರು ತಮ್ಮ ಪ್ರಧಾನಿಯನ್ನಾಗಿ ಪ್ರಾಧ್ಯಾಪಕಿಯಾಗಿದ್ದ ಹರಿಣಿ ಅಮರಸೂರ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಶ್ರೀಲಂಕಾದ ಮೂರನೇ ಮಹಿಳಾ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ
ಶ್ರೀಲಂಕಾದ ಮೂರನೇ ಮಹಿಳಾ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ (X handle)

By PTI

Published : Sep 24, 2024, 8:25 PM IST

ಕೊಲಂಬೊ (ಶ್ರೀಲಂಕಾ):ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಕಮ್ಯುನಿಸ್ಟ್​ ಸರ್ಕಾರ ಜಾರಿಗೆ ಬಂದಿದೆ. ಕಮ್ಯುನಿಸ್ಟ್​ ಸಿದ್ಧಾಂತವುಳ್ಳ ದಿಸ್ಸಾನಾಯಕೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ, ಅವರು ಪ್ರಧಾನಿ ಮತ್ತು ಮೂವರು ಸಚಿವರನ್ನು ನೇಮಕ ಮಾಡಿದ್ದಾರೆ.

ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಪಕ್ಷದಿಂದ ದೇಶದ ಅಧ್ಯಕ್ಷರಾಗಿ ಆಯ್ಕೆಯಾದ 54 ವರ್ಷದ ಅನುರ ಕುಮಾರ ದಿಸ್ಸಾನಾಯಕೆ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಅವರು ತಮ್ಮನ್ನು ಒಳಗೊಂಡಂತೆ ನಾಲ್ವರು ಸದಸ್ಯರ ಸಂಪುಟವನ್ನು ನೇಮಿಸಿಕೊಂಡರು.

ಇದರಲ್ಲಿ ಹರಿಣಿ ಅಮರಸೂರ್ಯ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದರು. ಹರಿಣಿ ಅವರು ನೂತನ ಪ್ರಧಾನಿಯಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ದೇಶದ ಮೂರನೇ ಮಹಿಳಾ ಪ್ರಧಾನಿ ಎಂಬ ಖ್ಯಾತಿಯೂ ಪಡೆದರು. ಸಿರಿಮಾವೋ ಬಂಡಾರನಾಯಕೆ ನಂತರ ಈ ಹುದ್ದೆಯನ್ನು ಅಲಂಕರಿಸಿದ ಮಹಿಳಾ ನಾಯಕಿ ಎಂಬ ಹೆಗ್ಗಳಿಕೆಯೂ ಅವರದಾಯಿತು.

ಬಳಿಕ ಹರಿಣಿ ಅವರಿಗೆ ನ್ಯಾಯ, ಶಿಕ್ಷಣ, ಕಾರ್ಮಿಕ, ಕೈಗಾರಿಕೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಹೂಡಿಕೆ ಸಚಿವರ ಖಾತೆಗಳನ್ನು ನಿಯೋಜಿಸಲಾಗಿದೆ. ಹಿಂದಿನ ಪ್ರಧಾನಿ ದಿನೇಶ್ ಗುಣವರ್ಧನ ಅವರು ಅಧ್ಯಕ್ಷೀಯ ಚುನಾವಣೆಯ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಸ್ಥಾನವನ್ನು ಹರಿಣಿ ಅವರು ತುಂಬಲಿದ್ದಾರೆ.

ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದ ಹರಿಣಿ ಅವರಿಗಿಂತ ಮೊದಲು ಅಂದರೆ, 1994 ರಲ್ಲಿ ಸಿರಿಮಾವೊ ಬಂಡಾರನಾಯಕೆ ಅವರು ಮಹಿಳಾ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರು. ಇವರು ಶ್ರೀಲಂಕಾ ದೇಶದ ಮತ್ತು ವಿಶ್ವದ ಮೊದಲ ಮಹಿಳಾ ಪ್ರಧಾನಿ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ.

ಇನ್ನೂ, ಎನ್‌ಪಿಪಿ ಸಂಸದರಾದ ವಿಜಿತಾ ಹೆರಾತ್ ಮತ್ತು ಲಕ್ಷ್ಮಣ್ ನಿಪುಣರಾಚಿ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಸತ್ತಿನ ಚುನಾವಣೆ ನಡೆಯುವವರೆಗೆ ಇಬ್ಬರೂ ಹಂಗಾಮಿ ಸಚಿವರಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ನವೆಂಬರ್ ಅಂತ್ಯದಲ್ಲಿ ಸಂಸತ್​​ ಚುನಾವಣೆ ನಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಶ್ರೀಲಂಕಾದಲ್ಲಿ ಅಭಿವೃದ್ಧಿಯ ಹೊಸ ಯುಗಾರಂಭ : ನೂತನ ಅಧ್ಯಕ್ಷ ದಿಸ್ಸಾನಾಯಕೆ ಭರವಸೆ - Sri Lanka New President

ABOUT THE AUTHOR

...view details