ಟೆಕ್ಸಾಸ್(ಅಮೆರಿಕ):ಭಾರತೀಯ ಮೂಲದ ಅಮೆರಿಕ ಕಂಪ್ಯೂಟರ್ ಎಂಜಿನಿಯರ್ ಮತ್ತು ಪ್ರೊಫೆಸರ್ ಅಶೋಕ್ ವೀರರಾಘವನ್ ಅವರಿಗೆ ಟೆಕ್ಸಾಸ್‌ನ ಅತ್ಯುನ್ನತ ಶೈಕ್ಷಣಿಕ ಗೌರವಗಳಲ್ಲಿ ಎಡಿತ್ ಮತ್ತು ಪೀಟರ್ ಒ'ಡೊನೆಲ್ ಪ್ರಶಸ್ತಿ ಒಲಿದು ಬಂದಿದೆ.
ಟೆಕ್ಸಾಸ್ ಅಕಾಡೆಮಿ ಆಫ್ ಮೆಡಿಸಿನ್, ಎಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ತನ್ನ ರಾಜ್ಯದ ಉದಯೋನ್ಮುಖ ಸಂಶೋಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ ಎಂದು ರೈಸ್ ವಿಶ್ವವಿದ್ಯಾಲಯದ ಜಾರ್ಜ್ ಆರ್ ಬ್ರೌನ್ ಸ್ಕೂಲ್ ಆಫ್ ಎಂಜಿನಿಯರಿಂಗ್‌ನ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಪ್ರಾಧ್ಯಾಪಕ ವೀರರಾಘವನ್ ಹೇಳಿದ್ದಾರೆ. ಅದೃಶ್ಯ ಗೋಚರವಾಗುವಂತೆ ಮಾಡುವ ಕ್ರಾಂತಿಕಾರಿ ಇಮೇಜಿಂಗ್ ತಂತ್ರಜ್ಞಾನಕ್ಕಾಗಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವೈದ್ಯಕೀಯ, ಇಂಜಿನಿಯರಿಂಗ್, ಜೈವಿಕ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಗಳಲ್ಲಿ ತೊಡಗಿರುವ ಸಂಶೋಧಕರಿಗೆ ಈ ಪ್ರಶಸ್ತಿಯನ್ನು ಪ್ರತಿವರ್ಷವೂ ನೀಡಿ ಗೌರವಿಸಲಾಗುತ್ತದೆ. ಈ ವರ್ಷದ ಇಂಜಿನಿಯರಿಂಗ್ ಪ್ರಶಸ್ತಿ ವೀರರಾಘವನ್ ಅವರಿಗೆ ಸಂದಿದೆ. ಮೂಲತಃ ಚೆನ್ನೈನವರಾದ ವೀರರಾಘವನ್ ಸಂತಸ ವ್ಯಕ್ತಪಡಿಸಿದ್ದು, ಈ ಪ್ರಶಸ್ತಿ ಸ್ವೀಕರಿಸಲು ನಾನು ಸಂತೋಷಪಡುತ್ತೇನೆ. ಇದು ಹಲವಾರು ವಿದ್ಯಾರ್ಥಿಗಳು, ಪೋಸ್ಟ್‌ಡಾಕ್ಸ್ ಮತ್ತು ಸಂಶೋಧನಾ ವಿಜ್ಞಾನಿಗಳು ಕಂಪ್ಯೂಟೇಶನಲ್‌ನಲ್ಲಿ ಮಾಡಿದ ಅದ್ಭುತ ಮತ್ತು ನವೀನ ಸಂಶೋಧನೆಯ ಮನ್ನಣೆಯಾಗಿದೆ" ಎಂದು ತಿಳಿಸಿದ್ದಾರೆ.