ಮಾಸ್ಕೋ (ರಷ್ಯಾ):ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಡ್ರೋನ್‌ಗಳಿಂದ ಉಕ್ರೇನ್ ದಾಳಿ ಮಾಡಿದೆ. ಆರನೇ ವಿದ್ಯುತ್ ಘಟಕದ ಗುಮ್ಮಟಕ್ಕೆ ಡ್ರೋನ್‌ಗಳು ದಾಳಿ ನಡೆಸಿವೆ. ಈ ವೇಳೆ ಯಾವುದೇ ಗಂಭೀರ ಹಾನಿಯಾಗಿಲ್ಲ ಎಂದು ಸ್ಥಾವರ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಆರಂಭದಲ್ಲಿ, ಜಪೋರಿಜಿಯಾದ ಕೇಂದ್ರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿದ್ದವು.
ಅಂದಿನಿಂದ ಈ ಕೇಂದ್ರದ ಆಸುಪಾಸಿನಲ್ಲಿ ದಾಳಿ, ಪ್ರತಿದಾಳಿ ಮುಂದುವರಿದಿದೆ. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ (IAEA) ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಝಪೋರಿಝಿಯ ರಕ್ಷಣೆಯ ಬಗ್ಗೆ ಪದೇ ಪದೇ ಕಳವಳ ವ್ಯಕ್ತವಾಗಿದೆ. ರಷ್ಯಾ ಇತ್ತೀಚಿನ ದಾಳಿಯನ್ನು ಐಎಇಎ ಗಮನಕ್ಕೆ ಬಂದಿದೆ. ಪರಮಾಣು ವಿದ್ಯುತ್ ಸ್ಥಾವರದ ಸುರಕ್ಷತೆಯನ್ನು ಹಾಳುಮಾಡುವ ಕ್ರಮಗಳನ್ನು ತಪ್ಪಿಸಬೇಕು ಎಂದು ಐಎಇಎ ಮುಖ್ಯಸ್ಥ ರಾಫೆಲ್ಲೊ ಮರಿಯಾನೊ ಗ್ರಾಸ್ಸಿ ಹೇಳಿದ್ದಾರೆ.
''ಉಕ್ರೇನ್ ಡ್ರೋನ್‌ಗಳ ಮೂಲಕ 6ನೇ ಪವರ್ ಯೂನಿಟ್‌ನ ಗುಮ್ಮಟವನ್ನು ಒಳಗೊಂಡಂತೆ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ (ಎನ್‌ಪಿಪಿ) ಮೇಲೆ ಭಾನುವಾರ ದಾಳಿ ಮಾಡಿದೆ'' ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಮೊದಲು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಅವರು, ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ಜಪೋರಿಝಿಯಾ NPP ಮೇಲೆ ದಾಳಿ ಮಾಡುವ ಅಥವಾ ಅಸ್ಥಿರಗೊಳಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು.
ಜಪೋರಿಝಿಯಾ NPP ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾಗಿದೆ. ಒಟ್ಟು 6 ಗಿಗಾವ್ಯಾಟ್‌ಗಳ ಸಾಮರ್ಥ್ಯದೊಂದಿಗೆ ಆರು ವಿದ್ಯುತ್ ಘಟಕಗಳನ್ನು ಒಳಗೊಂಡಿದೆ. ಫೆಬ್ರವರಿ 2022 ರ ಕೊನೆಯಲ್ಲಿ ಈ ಸ್ಥಾವರನ್ನು ರಷ್ಯಾದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯಿತು.